ನವದೆಹಲಿ:ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್‌ಟಿ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ಮತ್ತು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ಪ್ರತಿಭಟನೆ ಮೂಲಕ ಪ್ರಧಾನಿ ಹೌಸ್ ಘೇರಾವ್ ಹಾಕಲು ಯೋಜನೆ ಸಿದ್ಧವಾಗಿದೆ. ಇದಾಗಲೇ ಸಂಸದ ರಾಹುಲ್​​ ಗಾಂಧಿ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಪಕ್ಷದ ಕೇಂದ್ರ ಕಚೇರಿಯನ್ನು ತಲುಪಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ. ಜಂತರ್ ಮಂತರ್ ಹೊರತುಪಡಿಸಿ ನವದೆಹಲಿಯ ಸುತ್ತಲಿನ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮೂಲಗಳ ಪ್ರಕಾರ, ರಾಜಧಾನಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ, ಧೌಲಾ ಕುವಾನ್, ರಿಡ್ಜ್ ರಸ್ತೆ, ಶಂಕರ್ ರಸ್ತೆ, ಪಂಚಕುಯಾನ್ ರಸ್ತೆ, ಚೆಲ್ಮ್ಸ್‌ಫೋರ್ಡ್ ರಸ್ತೆ, ಮಿಂಟೋ ರಸ್ತೆ, ಮಥುರಾ ರಸ್ತೆ, ಡಬ್ಲ್ಯೂ-ಪಾಯಿಂಟ್, ಲೋಧಿ ರಸ್ತೆಯ ಆಚೆಗೆ ಬಸ್‌ಗಳನ್ನು ನಿರ್ಬಂಧಿಸಲಾಗುತ್ತದೆ.
Delhi | Congress to hold a nationwide protest today over unemployment & inflation.Visuals from Akbar Road where barricades put up & Police present as workers start arriving near the party office.Sec 144 CrPC imposed in entire area of New Delhi district, except Jantar Mantar.pic.twitter.com/oQfFmgnuPk— ANI (@ANI)August 5, 2022
Delhi | Congress to hold a nationwide protest today over unemployment & inflation.Visuals from Akbar Road where barricades put up & Police present as workers start arriving near the party office.Sec 144 CrPC imposed in entire area of New Delhi district, except Jantar Mantar.pic.twitter.com/oQfFmgnuPk
ಬೆಳಗ್ಗೆ 11 ಗಂಟೆಗೆ ರಾಯ್‍ಪುರದ ಅಂಬೇಡ್ಕರ್ ಚೌಕ್‍ನಲ್ಲಿ ಕಾಂಗ್ರೆಸಿಗರು ಜಮಾವಣೆಗೊಂಡು ಅಲ್ಲಿ ಸಭೆ ನಡೆಸುತ್ತಿದ್ದಾರೆ. ನಂತರ ರಾಜಭವನಕ್ಕೆ ಘೇರಾವ್ ಹಾಕಲು ತಯಾರಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ದೇಶದಲ್ಲಿ ಆರಂಭವಾಗಿರುವ ಸರ್ವಾಧಿಕಾರ ಕಲ್ಪನೆಯ ವಿರುದ್ಧ ಧ್ವನಿ ಎತ್ತಿದವರಿಗೆ ಶಿಕ್ಷೆ ನೀಡಲಾಗುತ್ತಿದೆ. ಸತ್ಯದ ಪರ ಧ್ವನಿ ಎತ್ತಿದವರನ್ನ ಥಳಿಸಿ, ಬಂಧಿಸಿ, ಜೈಲಿಗೆ ಹಾಕಲಾಗುತ್ತಿದೆ. ಭಾರತದಲ್ಲಿ ಸುಮಾರು ಒಂದು ಶತಮಾನದಿಂದ ಇಕ್ಕಟ್ಟಿನ ವಾತಾವರಣವಿದೆ. ಬಡವರು, ಮಧ್ಯಮ ವರ್ಗದವರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಸಾವಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WATCH| Congress workers protest over inflation at the party office in Delhi. The party has called a nationwide protest today over unemployment and inflation.pic.twitter.com/M3d18yMFu7— ANI (@ANI)August 5, 2022
#WATCH| Congress workers protest over inflation at the party office in Delhi. The party has called a nationwide protest today over unemployment and inflation.pic.twitter.com/M3d18yMFu7
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + fourteen =
Remember me
