ನವದೆಹಲಿ:ಹಿರಿಯ ಕಾಂಗ್ರೆಸ್‌ ಮುಖಂಡ, ಸಂಸದ ಶಶಿ ತರೂರ್‌ ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೊನಾ ಸೋಂಕಿನಿಂದ ಬಳಲುತ್ತಿರುವ ತರೂರ್‌ ಅವರು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.
65 ವರ್ಷದ ಶಶಿ ತರೂರ್ ಅವರಿಗೆ ಏಪ್ರಿಲ್ 21 ರಂದು ಕರೊನಾ ಪಾಸಿಟಿವ್ ದೃಢಪಟ್ಟಿತ್ತು. ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಅಪಾಯಿಂಟ್‌ಮೆಂಟ್‌ಗಾಗಿ ಎರಡು ದಿನ ಕಾದು, ನಂತರ ಅದರ ಫಲಿತಾಂಶಕ್ಕಾಗಿ ಎರಡೂವರೆ ದಿನ ಕಾದ ಬಳಿಕ ನನಗೆ ಪಾಸಿಟಿವ್‌ ಇರುವುದು ತಿಳಿಯಿತು ಎಂದು ಆಗ ತರೂರ್‌ ಟ್ವೀಟ್ ಮಾಡಿದ್ದರು.
After waiting two days for a test appointment and another day & a half for the results, I finally have confirmation: I’m#Covidpositive. Hoping to deal with it in a “positive” frame of mind, with rest, steam & plenty of fluids. My sister& 85 year old mother are in the same boat.
— Shashi Tharoor (@ShashiTharoor)April 21, 2021

ಪಾಸಿಟಿವ್‌ ಎಂದು ತಿಳಿದುಬಂದ ನಂತರ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಆದರೆ ಇದೀಗ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಹಿನ್ನೆಲೆಯಲ್ಲಿ ದೆಹಲಿಯ ಸರಿತಾ ವಿಹಾರ್‌ನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸಂಸದ ರಾಹುಲ್‌ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರ ನಂತರ ಕರೊನಾ ಸೋಂಕಿನಿಂದ ಬಳಲುತ್ತಿರುವ ಮೂರನೆಯ ಹಿರಿಯ ಮುಖಂಡ ಶಶಿ ತರೂರ್‌ ಆಗಿದ್ದಾರೆ.
ನೀರಿನೊಳಗೆ ಹೊಕ್ಕು ಪಾಣಿಪೀಠವ ಹತ್ತಿ ಶಿವನ ಪೂಜೆ ಮಾಡುವ ಜಗತ್ತಿನ ಏಕೈಕ ಅರ್ಚಕ ಹಂಪಿಯ ಕೃಷ್ಣ ಇನ್ನಿಲ್ಲ..

ಮಾಸ್ಕ್‌ ಹಾಕಿಲ್ವಾ? ಹೊಡೀರಿ ಬಸ್ಕಿ! ನಡುರಸ್ತೆಯಲ್ಲಿ ನಗರಸಭೆ ಸಿಬ್ಬಂದಿ ಸುಸ್ತೋ ಸುಸ್ತು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 17 =
Remember me
