ಕೊಚ್ಚಿ (ಕೇರಳ):ಸೋಲಾರ್​ ಹಗರಣ ಕೇಸ್​ಗೆ ಸಂಬಂಧಿಸಿದಂತೆ ಮಹಿಳಾ ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದರುವ ಆರೋಪ ಹೊತ್ತ ಕಾಂಗ್ರೆಸ್​ನ ಘಟಾನುಘಟಿಗಳ ವಿರುದ್ಧ ಈಗ ಎಫ್​ಐಆರ್​ ದಾಖಲಾಗಿದೆ. ಸಿಬಿಐ ಇವರ ವಿರುದ್ಧ ಎಫ್​ಐಆರ್​ ದಾಖಲು ಮಾಡಿದೆ.
ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಸಂಸದರಾದ ಅಡೂರ್ ಪ್ರಕಾಶ್, ಹಿಬಿ ಈಡನ್ ಮತ್ತು ಕಾಂಗ್ರೆಸ್ ಶಾಸಕ ಎ.ಪಿ. ಅನಿಲ್ ವಿರುದ್ಧ ಸಿಬಿಐ ಎಫ್​ಐಆರ್​ ದಾಖಲಿಸಿದೆ. ಇವರು ಕಾಂಗ್ರೆಸ್​ ಮುಖಂಡರಾದರೆ ಎಫ್​ಐಆರ್​ನಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ ಎ.ಪಿ. ಅಬ್ದುಲ್ಲಕುಟ್ಟಿ ಹೆಸರೂ ಇದೆ.
ಸೋಲಾರ್​ ಹಗರಣ ಕೇಸ್​ಗೆ ಸಂಬಂಧಿಸಿದಂತೆ ಇವರ ವಿರುದ್ಧ ಮಹಿಳೆ ದೂರು ದಾಖಲು ಮಾಡಿದ್ದರು. ಸೌರ ಯೋಜನೆಗಳ ಬಗ್ಗೆ ತಿಳಿಸಲು ತಾನು ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಿದ್ದಾಗ, ಅವರು ಲೈಂಗಿಕ ಕಿರುಕುಳಕ್ಕೆ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದರು.
ಈ ಮೊದಲು ರಾಜ್ಯ ಸರ್ಕಾರ, ಈ ಪ್ರಕರಣ ಸಿಬಿಐಗೆ ವಹಿಸಿತ್ತು. ಇದೀಗ ಎಫ್​ಐಆರ್​ ದಾಖಲು ಮಾಡಿಕೊಂಡಿರುವ ಅಧಿಕಾರಿಗಳು ತಿರುವನಂತಪುರ ಮತ್ತು ಕೊಚ್ಚಿಯ ಮುಖ್ಯ ನ್ಯಾಯಾಲಯಗಳಿಗೆ ಎಫ್​ಐಆರ್​ ಪ್ರತಿ ಸಲ್ಲಿಸಿದ್ದಾರೆ.
VIDEO: ಮೈಕ್​ ಹಿಡಿದು ಜರ್ನಲಿಸ್ಟ್​, ಗನ್​ ಹಿಡಿದು ಟ್ರಾಫಿಕ್​ ಪೊಲೀಸ್​, ತಾಲಿಬಾನಿಗಳ ನಡುವೆ ಪತ್ರಕರ್ತೆ!

ಅಫ್ಘಾನಿಸ್ತಾನದ ಸರ್ಕಾರಿ ನೌಕರರಿಗೆ ಕ್ಷಮಾದಾನ ಕೊಟ್ಟ ತಾಲಿಬಾನಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 19 =
Remember me
