ಇಂದೋರ್:ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರೊಬ್ಬ ಜತೆ ದೈಹಿಕ ಸಂಪರ್ಕ ನಡೆಸಿ ಮೋಸ ಮಾಡಿರುವ ಆರೋಪ ಹೊತ್ತ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕನ ಮಗ ಕರಣ್ ಮೋರ್ವಾಲ್ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಇವರು ಶಾಸಕ ಮುರುಳಿ ಮೋರ್ವಾಲ್ ಅವರ ಮಗ.
ಮೋಸ ಹೋಗಿರುವ ಮಹಿಳೆ ಇವರ ವಿರುದ್ಧ ದೂರು ನೀಡುತ್ತಿದ್ದಂತೆಯೇ ಎಸ್ಕೇಪ್‌ ಆಗಿದ್ದರು ಕರಣ್‌. ಪೊಲೀಸರು ಎಷ್ಟೇ ಹುಡುಕಿದರೂ ಕೈಗೆ ಸಿಕ್ಕಿರಲಿಲ್ಲ. ಎಲ್ಲಿಯೋ ತಲೆಮರೆಸಿಕೊಂಡಿದ್ದ ಕರಣ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು.
ಮಹಿಳೆಯು ಇಂದೋರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಅಧಿಕಾರಿ ಜ್ಯೋತಿ ಶರ್ಮ ಕರಣ್‌ ಅವರ ಬಂಧನಕ್ಕೆ ಭಾರಿ ಜಾಲ ಬೀಸಿದ್ದರು. ಕೊನೆಗೂ ಅವರು ಶಾಜಪುರ್ ಜಿಲ್ಲೆಯ ಮಕ್ಸಿ ಪಟ್ಟಣದಲ್ಲಿ ಕರಣ್‌ ಇರುವುದನ್ನು ಪತ್ತೆ ಮಾಡಿ ಅಲ್ಲಿಗೆ ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಈ ಬಂಧನ ಹಿಂದೆ ಹಲವು ಅನುಮಾನ ಶುರುವಾಗಿದೆ. ಕೆಲ ದಿನಗಳ ಹಿಂದೆ ಕರಣ್ ತಂದೆ ಮುರಳಿ ಅವರು ಮಹಿಳಾ ಪೊಲೀಸ್ ಠಾಣೆಯ ಸಮೀಪವಿರುವ ಪಾಲಾಸಿಯ ಪೊಲೀಸ್ ಠಾಣೆಗೆ ಬಂದು ಅಲ್ಲಿನ ಪೊಲೀಸರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಈ ಮಾತುಕತೆಯ ಬೆನ್ನಲ್ಲೇ ಇವರ ಮಗನನ್ನು ಪೊಲೀಸರು ಹಿಡಿದಿರುವ ಹಿನ್ನೆಲೆಯಲ್ಲಿ ಮುಂದೆ ಯಾವ ರೀತಿ ಕ್ರಮ ನಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
‘ಕೆಟ್ಟ ಶಿಕ್ಷಣ ವ್ಯವಸ್ಥೆಗೆ ನನ್ನ ಸಾವೇ ಉದಾಹರಣೆಯಾಗ್ಲಿ, ಇಂಜಿನಿಯರಿಂಗ್‌ ಮಾಡಿದ್ರೆ ಇಷ್ಟೇ ಗತಿ…’ ಹಾಸನದ ವಿದ್ಯಾರ್ಥಿ ಆತ್ಮಹತ್ಯೆ

ರೂಪಾಂತರಿ ವೈರಾಣು ಪತ್ತೆ- ಕಾಲಿಟ್ಟ ಮೂರನೆಯ ಅಲೆ: ಹೊಸ ಮಾರ್ಗಸೂಚಿಗೆ ಸರ್ಕಾರದ ಸಿದ್ಧತೆ

ಅಮ್ಮಾ ಸಾಯಿಸ್ಬೇಡ… ಬಿಟ್ಬಿಡು.. ಎಂದ್ರೂ ಕೇಳಲಿಲ್ಲ; ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 7 =
Remember me
