ನವದೆಹಲಿ:ಆರ್​ಎಸ್​​ಎಸ್ ಮೂಲಕ ಬಿಜೆಪಿಯು ಪಕ್ಷ ಬಲವರ್ಧನೆ ಸೇರಿದಂತೆ ಹಲವಾರು ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವುದನ್ನು ಗಮನಿಸಿರುವ ಕಾಂಗ್ರೆಸ್‌, ತಾನೂ ಹಾಗೆಯೇ ಒಂದು ಸಂಘವನ್ನು ಸ್ಥಾಪನೆಗೆ ಮುಂದಾಗಿದೆ. ಆದ್ದರಿಂದ ಕೇರಳ ಮಾದರಿಯ ಕಾಂಗ್ರೆಸ್​ ಜವಾಹರ್ ಬಾಲ್ ಮಂಚ್ (ಜೆಬಿಎಂ) ಸ್ಥಾಪಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ಪ್ರಚಾರ ಮಾಡಲು, ಹೊಸ ಪೀಳಿಗೆಯನ್ನು ಆಕರ್ಷಿಸಲು ಇದು ನೆರವಾಗಲಿದೆ ಎಂದು ಪಕ್ಷ ಹೇಳಿದೆ. ಆರ್‌ಎಸ್‌ಎಸ್‌ ಯುವ ಸಮೂಹವನ್ನು ಕಟ್ಟಿಕೊಂಡು ಅವರ ಮೂಲಕ ಜನೋಪಕಾರ್ಯ ಮಾಡುವಂತೆ ಕಾಂಗ್ರೆಸ್‌ ಕೂಡ ಅದೇ ನಿಟ್ಟಿನಲ್ಲಿ ಸಾಗಿದೆ.
ತಮ್ಮ ಈ ಸಂಘದ ಮೂಲ ಉದ್ದೇಶ ಮಕ್ಕಳನ್ನು ಒಟ್ಟುಗೂಡಿಸಿ ಸಂಘಟನೆಯನ್ನು ಪ್ರಾರಂಭಿಸಿ, ನಂತರ ಅವರ ಮೂಲಕವೇ ಪಕ್ಷವನ್ನು ಬಲಪಡಿಸುವುದು. ಆದ್ದರಿಂದ 7 ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಜವಾಹರ್ ಬಾಲ್ ಮಂಚ್ ಎಂಬ ಸಂಘಟನೆಯನ್ನು ಆರಂಭಿಸಿದೆ.
ಕೆಪಿಸಿಸಿ (ಕೇರಳ ಪ್ರಾದೇಶಿಕ ಕಾಂಗ್ರೆಸ್ ಕಮಿಟಿ) ಕಳೆದ 15 ವರ್ಷಗಳಿಂದ ಈ ಸಂಘಟನೆಯನ್ನು ನಡೆಸುತ್ತಿದ್ದು ಅದೇ ಮಾದರಿಯಲ್ಲಿ ಈಗ ಪಕ್ಷ ಸಂಘ ಸ್ಥಾಪನೆ ಮಾಡಿದೆ. ಈ ಸಂಘಟನೆಗೆ ಕೇರಳ ಕಾಂಗ್ರೆಸ್ ನಾಯಕ ಜಿ.ವಿ. ಹರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕೇರಳ ಕಾಂಗ್ರೆಸ್‌ನಿಂದ ಇಲ್ಲಿಯವರೆಗೆ ಎರಡೂವರೆ ಲಕ್ಷ ಮಕ್ಕಳಿಗೆ ತರಬೇತಿ ನೀಡಲಾಗಿದೆ. ರಾಜ್ಯಮಟ್ಟದ ಈ ಕಾರ್ಯಕ್ರಮ ಯಶಸ್ಸು ಕಂಡಿದ್ದರಿಂದ, ರಾಷ್ಟ್ರಮಟ್ಟಕ್ಕೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುತ್ತಿದೆ.ಶಿಬಿರಗಳು, ಕಾರ್ಯಾಗಾರಗಳು, ಸೆಮಿನಾರ್‌ಗಳು ಮತ್ತು ದೈಹಿಕ ತರಬೇತಿಯ ಮೂಲಕ ಮಕ್ಕಳಿಗೆ ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಪಕ್ಷದ ಕೊಡುಗೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂಬ ಮಾಹಿತಿ ನೀಡಿದ್ದಾರೆ ಜಿ.ವಿ. ಹರಿ.
ಅಮೆರಿಕಕ್ಕೆ ಮೋದಿ ಭೇಟಿ ಇಂಪ್ಯಾಕ್ಟ್‌- ಭಾರತಕ್ಕೆ ಮರಳಿತು 157 ಪುರಾತನ ಐತಿಹಾಸಿಕ ಕಲಾಕೃತಿಗಳು…

ಶ್ರೀಮಂತರ ಮಕ್ಕಳ ಹಣದ ಅಮಲಿಗೆ ಬೆಂಗಳೂರಲ್ಲಿ ಮತ್ತೆ ಅಪಘಾತ- ಜಾಲಿ ರೈಡ್‌ಗೆ ಕ್ಯಾಬ್‌ ನಜ್ಜುಗುಜ್ಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
