ಇಂದೋರ್‌:ಕಳೆದ ತಿಂಗಳು ಇಂದೋರ್‌ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ ನಾಯಕರ ಪಾಲಿಗಂತೂ ಇದು ತೀರಾ ಮುಜುಗರ ತರುವಂಥ ವಿಷಯವಾಗಿದೆ. ಅದೇನೆಂದರೆ ಓರ್ವ ಕಾಂಗ್ರೆಸ್‌ ನಾಯಕನ ಪತ್ನಿ ಮತ್ತು ಮಕ್ಕಳ ಜತೆ ಇನ್ನೋರ್ವ ಕಾಂಗ್ರೆಸ್‌ ನಾಯಕ ಪರಾರಿಯಾಗಿರುವ ಸುದ್ದಿ ಇದು.
ಈ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗುತ್ತಿದ್ದಂತೆಯೇ ಈ ಸುದ್ದಿಯ ಬಗ್ಗೆ ಪರ-ವಿರೋಧದ ಅಲೆಗಳು ಹರಿದಾಡುತ್ತಲೇ ಇವೆ. ಇದು ಸುಳ್ಳು ಎಂದು ಕಾಂಗ್ರೆಸ್‌ ವಲಯಗಳು ಹೇಳುತ್ತಿದ್ದರೆ, ಪೊಲೀಸ್‌ ಮೂಲಗಳಿಂದಲೇ ಈ ಸುದ್ದಿ ಸಿಕ್ಕಿರುವುದಾಗಿ ಮಾಧ್ಯಮಗಳು ಹೇಳುತ್ತಿದ್ದವು.
ಈ ಸುದ್ದಿ ಭಾರಿ ಕೋಲಾಹಲ ಸೃಷ್ಟಿಸಿತ್ತು ಹಾಗೂ ಯಾರೋ ಒಬ್ಬ ಮುಖಂಡ ಮಾಡಿದ ಕಿತಾಪತಿಯಿಂದಾಗಿ ಇಡೀ ಪಕ್ಷಕ್ಕೆ ಕಪ್ಪುಚುಕ್ಕೆ ಬಂದಂತಾಗಿತ್ತು.
ಇದೀಗ ಈ ಸುದ್ದಿಯ ವಾಸ್ತವ ಅಂಶ ಬಯಲಾಗಿದೆ. ದಾಖಲೆ ಸಹಿತ ಈ ಸುದ್ದಿಯ ಅಸಲಿಯತ್ತನ್ನು ಪೊಲೀಸರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ವಾಸ್ತವಾಂಶ ಬಯಲಾಗುತ್ತಿದ್ದಂತೆಯೇ ಕಾಂಗ್ರೆಸ್‌ ನಾಯಕರು ತಲೆತಗ್ಗಿಸಿ ನಿಂತಿದ್ದಾರೆ!
ಇದನ್ನೂ ಓದಿ:ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಯೋಧರು- ಹೆದ್ದಾರಿ ಕ್ಲೋಸ್​
ಹೌದು. ನಿಜಕ್ಕೂ ಕಾಂಗ್ರೆಸ್‌ ಮುಖಂಡನೊಬ್ಬ ಇನ್ನೊಬ್ಬ ಕಾಂಗ್ರೆಸ್‌ ಮುಖಂಡನ ಪತ್ನಿ ಮತ್ತು ಮಕ್ಕಳ ಜತೆ ಓಡಿಹೋಗಿರುವುದು ಸಿಸಿಟಿವಿ ಫುಟೇಜ್‌ನಿಂದ ಬಯಲಾಗಿದೆ. ಇಂದೋರ್‌ನ ಪಾಲದಾ ಕ್ಷೇತ್ರದ ಅಜಯ್‌ ಇಂಥ ಕೃತ್ಯ ಎಸಗಿರುವ ಆರೋಪಿಯಾಗಿದ್ದಾರೆ. ಕಾಂಗ್ರೆಸ್‌ನ ಸೇವಾದಳದ ಮುಖ್ಯಸ್ಥನಾಗಿರುವ ಇವರು ಇನ್ನೊಬ್ಬ ಮುಖಂಡನ ಪತ್ನಿಯನ್ನು ಹಾರಿಸಿಕೊಂಡು ಹೋಗಿದ್ದಾರೆ!
ಹೆಸರು ಬಹಿರಂಗಪಡಿಸದ ಓರ್ವ ಕಾಂಗ್ರೆಸ್‌ ಮುಖಂಡನ ಪತ್ನಿ ಮತ್ತು ಮಕ್ಕಳ ಜತೆ ಅಜಯ್‌ ಗಾಡಿಯ ಮೇಲೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂದೋರ್‌ನ ಭಾವರ್ ಕುವಾನ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕಾಂಗ್ರೆಸ್ ನಾಯಕನ ಹೆಂಡತಿ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಳು. ಪತ್ನಿ ಹಾಗೂ ಮಕ್ಕಳನ್ನು ಕಾಣದೇ ಚಿಂತೆಗೊಳಗಾಗಿದ್ದ ನಾಯಕ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಜಯ್‌ ಎನ್ನುವ ಮುಖಂಡನ ಜತೆ ಓಡಿಹೋಗಿರುವುದು ತಿಳಿದಿದೆ.
ನೇರವಾಗಿ ಅವರು ಪೊಲೀಸ‌ ಠಾಣೆಗೆ ದೂರು ದಾಖಲಿಸುವ ಬದಲು ಭೋಪಾಲ್‌ನ ರಾಜ್ಯ ಕಾಂಗ್ರೆಸ್‌ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಲ್ಲಿನ ಕಾರ್ಯಕರ್ತರು ಇಂದೋರ್‌ಗೆ ವಾಪಸಾಗಿ ಡಿಐಜಿ ರುಚಿ ವರ್ಧನ್ ಶರ್ಮಾ ಅವರನ್ನು ಸಂಪರ್ಕಿಸಲು ಹೇಳಿದ್ದಾರೆ. ನಂತರ ಪೊಲೀಸರಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಅರೆಬೆತ್ತಲೆ ಫೋಟೋಗೆ ಪೋಪ್ ಕೊಟ್ಟರಂತೆ ಲೈಕ್​- ಅವರನ್ನು ಹುಡುಕಿ ಹೋಗ್ತಾಳಂತೆ ಈಕೆ…

ಡಿ.5ರಂದು ಕರ್ನಾಟಕ ಬಂದ್​ಗೆ ಕರೆ: ಮುಖ್ಯಮಂತ್ರಿ ಏನೆಂದ್ರು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × five =
Remember me
