ಹೈದರಾಬಾದ್:ಈಗ ಎಲ್ಲೆಲ್ಲೂ ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳ ಮನೆಯ ಮೇಲೆ ದಾಳಿಯದ್ದೇ ಸುದ್ದಿ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರ ಗುಂಪೊಂದು ಶ್ರೀಮಂತ ವ್ಯಕ್ತಿಯೊಬ್ಬರ ಮನೆಗೆ ಬಂದು ಲೂಟಿ ಮಾಡಿದ್ದಾರೆ.
ಈ ಘಟನೆ ನಡೆದಿರುವುದು ಹೈದರಾಬಾದ್‌ನಲ್ಲಿ. ಇಲ್ಲಿಯ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಗೆ ಬಂದ ದರೋಡೆಕೋರರು ತಮ್ಮನ್ನು ನಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಅವರ ಪತ್ನಿ ಒಬ್ಬರೇ ಮನೆಯಲ್ಲಿ ಇರುವುದನ್ನು ನೋಡಿದ ಕಳ್ಳರು ಈ ಕೆಲಸ ಮಾಡಿದ್ದಾರೆ. ತಾವು ಯಾವುದೇ ಅಕ್ರಮ ಎಸಗಿಲ್ಲ, ಮನೆಗೆ ಬಂದಿದ್ದೇಕೆ ಎಂದೆಲ್ಲಾ ಉದ್ಯಮಿ ಪತ್ನಿ ಹೇಳಿದರೂ, ತಮ್ಮ ಕರ್ತವ್ಯ ತಾವು ಮಾಡಲೇಬೇಕಿದೆ ಎಂದಿದ್ದಾರೆ ಈ ಖದೀಮರು.
ನಂತರ ಮನೆಯಲ್ಲಿದ್ದ ಬೀರು ಸೇರಿದಂತೆ ಎಲ್ಲೆಡೆ ಜಾಲಾಡಿದ್ದಾರೆ. ಕೊನೆಗೆ , ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಈ ವೇಳೆಗಾಗಲೇ ಪತಿಗೆ ಕರೆ ಮಾಡಿ ಅವರ ಪತ್ನಿ ವಿಷಯ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿಯೇ ಮನೆಯಲ್ಲಿದ್ದ 3.5 ಕೆ.ಜಿ ಚಿನ್ನ ಹಾಗೂ 2 ಲಕ್ಷ ದೋಚಿ ಅವರು ಪರಾರಿಯಾಗಿದ್ದರು. ಇದೀಗ ಉದ್ಯಮಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ಯಾಂಗ್‌ರೇಪ್‌ ಆಯ್ತೆಂದು ಯುವತಿ ದೂರು: ಇದ್ದ ಕೆಲಸವೆಲ್ಲಾ ಬಿಟ್ಟು ತನಿಖೆ ಮಾಡಿದ ಪೊಲೀಸರಿಗೆ ಕಾದಿತ್ತು ಭಾರಿ ಶಾಕ್‌

ಪಾರ್ಟಿ ಮಾಡಿ ಫಜೀತಿಗೆ ಸಿಲುಕಿದ ನಟಿಯರು: ಕರೀನಾ, ಅಮೃತಾಗೆ ಕರೊನಾ- ಹಲವು ಸಿನಿತಾರೆಯರ ಕಟ್ಟಡ ಸೀಲ್‌ಡೌನ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + seven =
Remember me
