ಲಂಡನ್:ಲಂಡನ್‌ನ ವಿಂಡ್ಸನ್‌ ಅರಮನೆಯಲ್ಲಿ ಕ್ರಿಸ್‌ಮಸ್‌ ಸಡಗರದಲ್ಲಿದ್ದ ಜನರಿಗೆ ಭಾರಿ ಆಘಾತವಾಗಿರುವ ಘಟನೆ ನಡೆದಿದೆ. 19 ವರ್ಷದ ಭಾರತೀಯ ಸಿಖ್ ಯುವಕನೊಬ್ಬ ಅರಮನೆಯನ್ನು ಪ್ರವೇಶಿಸಿ, ರಾಣಿ ಎರಡನೇ ಎಲಿಜಬೆತ್ ಹತ್ಯೆಗೆ ಸಂಚುರೂಪಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಮಾರಕಾಸ್ತ್ರಗಳನ್ನು ಹೊಂದಿದ್ದ ಈ ಯುವಕ, ವಿಂಡ್ಸನ್ ಅರಮನೆ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಒಳಗೆ ಬಂದಿದ್ದಾನೆ. ಅಕ್ರಮವಾಗಿ ಆತ ಪ್ರವೇಶ ಮಾಡಿದ್ದು, ಅವನನ್ನು ಬಂಧಿಸಲಾಗಿದೆ.
ತಾನು ರಾಣಿ ಎರಡನೇ ಎಲಿಜಬೆತ್ ಹತ್ಯೆ ಮಾಡಲು ಬಂದಿರುವುದಾಗಿ ಖುದ್ದು ಆ ಯುವಕನೇ ಹೇಳಿಕೊಂಡಿದ್ದಾನೆ. ಆತ ಹೇಳಿರುವ ವಿಡಿಯೋ ಒಂದು ಪತ್ತೆಯಾಗಿದೆ. ಅದರಲ್ಲಿ ತನ್ನ ಹೆಸರನ್ನು ಜಸ್ವಂತ್ ಸಿಂಗ್ ಚೈಲ್ ಎಂದು ಹೇಳಿರುವ ಯುವಕ, ‘ನಾನು ರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದು 1919ರಲ್ಲಿ ಜಲಿಯಾನಾವಾಲಾಬಾಗ್ ಹತ್ಯಾಕಾಂಡದಲ್ಲಿ ಮಡಿದವರಿಗೆ ಪ್ರತಿಕಾರ. ನಾನು ಏನು ಮಾಡಿದ್ದೇನೆ ಹಾಗೂ ಏನು ಮಾಡುತ್ತೇನೆ ಎಂಬುದರ ಬಗ್ಗೆ ಕ್ಷಮೆ ಇರಲಿ’ ಎಂದಿದ್ದಾನೆ.
’ಜಲಿಯಾನಾವಾಲಾಬಾಗ್ ಹತ್ಯಾಕಾಂಡದಲ್ಲಿ ನಮ್ಮ ಜನಾಂಗದ ಕಾರಣದಿಂದ ಕೊಲ್ಲಲ್ಪಟ್ಟ, ಅವಮಾನಿತ ಹಾಗೂ ತಾರತಮ್ಯಕ್ಕೆ ಒಳಗಾದವರಿಗೆ ಇದು ಪ್ರತಿಕಾರವಾಗಿದೆ’ ಎಂದು ವಿಡಿಯೋದಲ್ಲಿ ಯುವಕ ಹೇಳಿಕೊಂಡಿದ್ದು, ಅದರಲ್ಲಿ ಮುಖವನ್ನು ಪರದೆಯಿಂದ ಮುಚ್ಚಿಕೊಂಡಿದ್ದಾನೆ. ಸದ್ಯ ಈತನನ್ನು ಬಂಧಿಸಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ನಟ ಸಿದ್ಧಾರ್ಥ್‌ನ ಅಗಲಿಕೆಯಿಂದ ಚೇತರಿಸಿಕೊಳ್ಳದ ಸ್ನೇಹಿತೆ ಶೆಹನಾಜ್‌ಗೆ ಇನ್ನೊಂದು ಶಾಕ್‌! ಅಪ್ಪ ಬಿಜೆಪಿಗೆ ಸೇರಿದ್ದೇ ತಪ್ಪಾಯ್ತಾ?

ಮುದ್ದಾದ ಸಹೋದರಿಯರ ಪ್ರಾಣ ತೆಗೆದ ಕಾರು ಚಾಲಕ: ಮದ್ಯದ ಅಮಲಿನಲ್ಲಿ ಅಕ್ಕ-ತಂಗಿಯ ಬಲಿ ಪಡೆದ!

‘ಇವರನ್ನು ಬದುಕಿಸಲು ಆಗಲಿಲ್ಲ, ಸಾರಿ’ ಎಂದರು 11 ಮಂದಿ ತಜ್ಞ ವೈದ್ಯರು- ಅಂತ್ಯಕ್ರಿಯೆ ವೇಳೆ ಆಗಿದ್ದೇ ಬೇರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twenty =
Remember me
