ಅಹಮದಾಬಾದ್‌:ಪಕ್ಕದ ಮನೆಯ ವಿಧವೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು, ಪತ್ನಿಯ ದೂರಿನ ಮೇರೆಗೆ ಕೆಲಸ ಕಳೆದುಕೊಂಡಿದ್ದ ಪೊಲೀಸ್‌ ಕಾನ್ಸ್‌ಟೆಬಲ್‌ ನೆರವಿಗೆ ಗುಜರಾತ್‌ ಹೈಕೋರ್ಟ್‌ ಧಾವಿಸಿದೆ.
ಈ ಕಾನ್ಸ್‌ಟೆಬಲ್‌ ತಮ್ಮ ಪತ್ನಿಯ ಜತೆ ಶಾಹಿಬಾಗ್ ಪ್ರದೇಶದ ಪೊಲೀಸ್ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ. ಆದರೆ ಪಕ್ಕದ ಮನೆಯ ವಿಧವೆಯೊಬ್ಬಳ ಜತೆ ಸಂಬಂಧ ಹೊಂದಿದ್ದಾರೆ. ಇದು ಆತನ ಪತ್ನಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ರೆಡ್‌ಹ್ಯಾಂಡ್ ಆಗಿ ಪತಿಯನ್ನು ಸಿಲುಕಿಸುವ ಸಲುವಾಗಿ ಆತನಿಗೆ ಅರಿವಿಲ್ಲದಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಳು ಪತ್ನಿ. ನಂತರ ವಿಧವೆಯ ಮನೆಗೆ ಹೋದಾಗ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾಳೆ.
ನಂತರ ಅಕ್ರಮ ಸಂಬಂಧ ಕುರಿತಂತೆ ಪತಿಯ ವಿರುದ್ಧ ದೂರು ದಾಖಲು ಮಾಡಿದ್ದಳು. ನಂತರ ಪೊಲೀಸರು ವಿಧವೆ ಮತ್ತು ಕಾನ್ಸ್‌ಟೆಬಲ್‌ರನ್ನು ಕರೆಸಿ ಮಾತನಾಡಿದಾಗ ಸಂಬಂಧ ಇರುವುದನ್ನು ಒಪ್ಪಿಕೊಂಡಿದ್ದರು. ಆ ನಂತರ 2013ರಲ್ಲಿ ಪೊಲೀಸ್ ಇಲಾಖೆಯು ಕಾನ್ಸ್‌ಟೆಬಲ್‌ ಅವರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿತ್ತು. ಪೊಲೀಸರಾದವರು ಮಹಿಳೆಯರು, ಮಕ್ಕಳು ಹಾಗೂ ಹಿರಿಯರಿಗೆ ಸುರಕ್ಷತೆ ಒದಗಿಸಬೇಕು. ಅದನ್ನು ಬಿಟ್ಟು ಸ್ವಂತ ಕುಟುಂಬಕ್ಕೆ ರಕ್ಷಣೆ ಕೊಡದೇ ಹೀಗೆ ಅಕ್ರಮ ಸಂಬಂಧ ಹೊಂದುವುದು ಪೊಲೀಸ್ ನಡೆಯ ಉಲ್ಲಂಘನೆಯಾಗಿದೆ ಎಂದು ಕಾರಣ ನೀಡಲಾಗಿತ್ತು.
ಇದನ್ನು ಪ್ರಶ್ನಿಸಿ ಕಾನ್ಸ್‌ಟೆಬಲ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಯಾವುದೇ ವ್ಯಕ್ತಿ ಅಕ್ರಮ ಸಂಬಂಧ ಹೊಂದುವುದು ಅನೈತಿಕವಾದರೂ ಇದು ಪೊಲೀಸರ ದುರ್ವರ್ತನೆ ಎಂದು ಪರಿಗಣಿಸಲಾಗದು. ವಿವಾಹೇತರ ಸಂಬಂಧ ಸಮಾಜದ ದೃಷ್ಟಿಯಿಂದ ಅನೈತಿಕ ನಿಜ. ಆದರೆ ಇದು ಕರ್ತವ್ಯದಿಂದ ವಜಾ ಮಾಡುವುದಕ್ಕೆ ಕಾರಣವಾಗಲಾರದು. ವಿವಾಹೇತರ ಸಂಬಂಧ ಹೊಂದಿರುವುದಕ್ಕೂ ಕರ್ತವ್ಯದಿಂದ ವಜಾ ಮಾಡುವುದಕ್ಕೂ ಸಂಬಂಧವಿಲ್ಲ. ಆದ್ದರಿಂದ ಕಾನ್ಸ್‌ಟೆಬಲ್‌ ಅವರನ್ನು ವಜಾ ಮಾಡಿದ್ದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದ್ದರಿಂದ ಅವರನ್ನು ವಾಪಸ್‌ ಕರ್ತವ್ಯಕ್ಕೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಈ ಮೂಲಕ ಒಂಬತ್ತು ವರ್ಷಗಳವರೆಗೆ ಕೋರ್ಟ್‌ ಅಲೆದಾಡಿದ ಕಾನ್ಸ್‌ಟೆಬಲ್‌ಗೆ ಈಗ ಜಯ ಸಿಕ್ಕಿದೆ.
ವಿಚಾರಣೆ ವೇಳೆ ಕೂಲ್‌ಡ್ರಿಂಕ್ಸ್‌ ಕುಡಿದ ಪೊಲೀಸ್‌ ಅಧಿಕಾರಿ- ನ್ಯಾಯಮೂರ್ತಿ ನೀಡಿದ್ರು ಕುತೂಹಲದ ಶಿಕ್ಷೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
