ಲಖನೌ:ಹಿಂದೂ ಯುವತಿಯರಿಗೆ ಆಮಿಷ ಒಡ್ಡಿ ಅಥವಾ ಬೇರೆ ರೀತಿಯಲ್ಲಿ ಮೋಸ ಮಾಡುವ ಮೂಲಕ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿರುವುದನ್ನು ಮನಗಂಡು ಮತಾಂತರ ನಿಷೇಧ ಕಾಯ್ದೆಯನ್ನು ಈಚೆಗಷ್ಟೇ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿದೆ. ಇದರ ಬೆನ್ನಲ್ಲೇ ಇದೀಗ ಮೊದಲ ಕೇಸ್​ ಒಂದು ದಾಖಲಾಗಿದೆ.
ಬಲವಂತದ ಅಥವಾ ಮೋಸದಿಂದ ಮತಾಂತರ ಮಾಡುವುದನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್‌ ಅವರು ಶನಿವಾರವಷ್ಟೇ ಅಂಕಿತ ಹಾಕಿದ್ದರು.
ಇದೀಗ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ತಂದೆಯೊಬ್ಬರು ಉವೇಶ್​ ಅಹ್ಮದ್​ ಎಂಬಾತನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ದೇವರ್ನಿಯಾ ಠಾಣೆ ವ್ಯಾಪ್ತಿಯ ಶರೀಫ್‌ನಗರ ಗ್ರಾಮದ ಟೀಕಾರಾಮ್‌ ಎನ್ನುವವರು ಈ ದೂರನ್ನು ದಾಖಲಿಸಿದ್ದಾರೆ.
ತಮ್ಮ ಮಗಳಿಗೆ ಆಮಿಷ ಒಡ್ಡಿ ಉವೇಶ್​ ಅಹ್ಮದ್​ ಎಂಬಾತ ಮತಾಂತರಕ್ಕೆ ಪ್ರಯತ್ನ ಮಾಡುತ್ತಿರುವುದಾಗಿ ಟೀಕಾರಾಮ್​ ದೂರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೃಹ ಇಲಾಖೆಯ ಹೆಚ್ಚುವರಿ ಕಾರ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಕೂಡ ಮಾಹಿತಿ ನೀಡಿದ್ದು, ಹೊಸ ಕಾನೂನಿನ್ವಯ ಮೊದಲ ಕೇಸ್​ ದಾಖಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ. ಯುವಕ ಯುವತಿಗೆ ಮದುವೆಗೆ ಒತ್ತಾಯ ಮಾಡಿದ್ದಾನೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಬ್ಬರು ಪರಿಚಿತರೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.
ತುಂಡು ತುಂಡಾದ ದೇಹದ ನಿಗೂಢ ರಹಸ್ಯ ಭೇದಿಸಿದ ಪೊಲೀಸರು!

ಪುಲ್ವಾಮಾ ಮಾದರಿಯಲ್ಲಿಯೇ ಆತ್ಮಾಹುತಿ ದಾಳಿ: ಕನಿಷ್ಠ 30 ಸಾವು

ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 4 =
Remember me
