ಲಖನೌ:ಹಿಂದೂ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಿದ ಆರೋಪದ ಮೇಲೆ ಏಳು ಮಂದಿಯನ್ನು ಬಂಧಿಸಿರುವ ಘಟನೆ ಉತ್ತರಪ್ರದೇಶದ ಸೀತಾಪುರದ ಟ್ಯಾಂಬೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಉತ್ತರ ಪ್ರದೇಶ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಧಾರ್ಮಿಕ ಮತಾಂತರ ನಿಷೇಧ (ಲವ್ ಜಿಹಾದ್) ಕಾಯ್ದೆ ಅಡಿ ಈ ಎಂಟು ಮಂದಿಯ ವಿರುದ್ಧ ಕೇಸ್​ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಜಬ್ರೇಲ್‌ ಪರಾರಿಯಾಗಿದ್ದಾನೆ. ನ.24 ರಂದು ಈ ಘಟನೆ ನಡೆದಿದ್ದು, ಅಂದಿನಿಂದ ಪ್ರಮುಖ ಆರೋಪಿ ಜಬ್ರೇಲ್‌ ಕೂಡ ನಾಪತ್ತೆಯಾಗಿದ್ದಾನೆ ಎಂದು ಯುವತಿಯ ತಾಯಿ ದೂರಿನಲ್ಲಿ ಹೇಳಿದ್ದಾರೆ. ನ.27 ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಸೀತಾಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ದೀಕ್ಷಿತ್ ತಿಳಿಸಿದ್ದಾರೆ.
ಇದನ್ನೂ ಓದಿ:ಲಸಿಕೆ ಮೂಲಕ ಸೈನಿಕರಿಗೆ ಅತಿಮಾನುಷ ಶಕ್ತಿ ತುಂಬಲಿದೆ ಚೀನಾ- ವಿಶ್ವಕ್ಕೇ ಕಂಟಕ!
ಈ ಹೊಸ ಧಾರ್ಮಿಕ ಮತಾಂತರ ನಿಷೇಧ ಕಾನೂನಿನಡಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 50 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಇದೆ.
‘ಮತಾಂತರ ನಿಷೇಧ ಕಾಯ್ದೆಯಡಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಏಳು ಜನರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ. ಆತನನ್ನು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ. ಇದರಲ್ಲಿ ಪೊಲೀಸರ ಕಡೆಯಿಂದ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ದೀಕ್ಷಿತ್‌ ತಿಳಿಸಿದ್ದಾರೆ.
ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯ ಕರಾಳತೆ ಬಿಚ್ಚಿಟ್ಟ 94ರ ಅಜ್ಜಿ- ಪರಿಹಾರಕ್ಕೆ ಕೋರಿ ‘ಸುಪ್ರೀಂ’ ಮೊರೆ!

ಕಾಂಗ್ರೆಸ್​ ಪ್ರಣಾಳಿಕೆಯಲ್ಲೂ ಇದೇ ಕೃಷಿ ಕಾನೂನು- ಗುಡುಗುತ್ತಿರೋ ಕೈ ಮುಖಂಡರು ಸುಸ್ತೋ ಸುಸ್ತು!

‘ಒಬ್ಬನ ತಲೆ ಕಡಿದೆ, ಇನ್ನೊಬ್ಬನ ಇರಿದೆ, ಮತ್ತೊಬ್ಬನ ಕತ್ತರಿಸಿದೆ…ಅವರ್ಯಾರೋ ನಂಗೊತ್ತಿಲ್ಲ… ಆಹಾ! ಅದೆಂಥ ನೆಮ್ಮದಿ..’

ಯಾರು ಬೇಕಾದ್ರೂ ಪಕ್ಷ ಬಿಟ್ಟು ತೊಲಗಿ- ಹೋಗುವಾಗ ನನ್ನ ಸಾವಿಗೆ ಪ್ರಾರ್ಥಿಸಿ ಎಂದ ಮಮತಾ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − six =
Remember me
