ಲಖನೌ:ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಯೊಬ್ಬಳು, ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಿಲಾರದೇ ಇಲ್ಲಿಯ ವಿಧಾನಸಭೆಯ ಕಟ್ಟಡದೆದುರೇ ಎದುರೇ ಬೆಂಕಿಹಚ್ಚಿಕೊಂಡಿರುವ ಘಟನೆ ನಡೆದಿದೆ.
ಅಂಜನಾ ತಿವಾರಿ ಅಲಿಯಾಸ್​ ಆಯೇಷಾ ಇಂಥದ್ದೊಂದು ಕೃತ್ಯ ಎಸಗಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಈಕೆಯನ್ನು ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಂಜನಾ ಈ ಮೊದಲು ಅಖಿಲೇಶ್​ ಎಂಬುವವರನ್ನು ವಿವಾಹವಾಗಿದ್ದರು. ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅಂಜನಾ, ಆಸಿಫ್​ ಎಂಬುವವನ ಬಲೆಗೆ ಬಿದ್ದರು. ಈಕೆಯನ್ನು ಪ್ರೀತಿಸುವ ನಾಟಕವಾಗಿ, ಆಕೆಯನ್ನು ಬಲೆಗೆ ಬೀಳಿಸಿಕೊಂಡ ಆಸಿಫ್​, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಮದುವೆಯಾಗಿ ಮನೆಯಲ್ಲಿ ಇಟ್ಟುಕೊಂಡ.
ಇದನ್ನೂ ಓದಿ:ಬಾಯ್​ಫ್ರೆಂಡ್​ ಬಗ್ಗೆ ಮಾತನಾಡದ ತಾಪ್ಸಿ, ಈಗ ಬಾಯ್​ಫ್ರೆಂಡ್​ ಜತೆಗೇ ಸಿಕ್ಕಿಬಿದ್ದಿದ್ದಾರೆ!
ನಂತರ ಮನೆಯಲ್ಲಿ ಈಕೆಯನ್ನು ಬಿಟ್ಟು ಸೌದಿಗೆ ಹಾರಿದ. ನಂತರ ಆತ ಇತ್ತ ಸುಳಿಯಲೇ ಇಲ್ಲ. ಗಂಡನ ಮನೆಯಲ್ಲಿ ಅಂಜನಾ ಇನ್ನಿಲ್ಲದ ಹಿಂಸೆ ಅನುಭವಿಸಲು ಶುರು ಮಾಡಿದರು. ಅತ್ತೆ-ಮಾವ ಇಬ್ಬರೂ ವಿಪರೀತ ಹಿಂಸೆ ಕೊಡಲು ಶುರುಮಾಡಿದರು.
ಹಿಂಸೆಯನ್ನು ತಾಳದೇ ಅಂಜನಾ, ಪೊಲೀಸರಲ್ಲಿ ದೂರು ದಾಖಲಿಸಲು ಹೋದರೆ, ಅವರು ದೂರು ದಾಖಲು ಮಾಡಿಕೊಳ್ಳಲಿಲ್ಲ. ತನಗಾಗಿರುವ ಅನ್ಯಾಯವನ್ನು ಮುಖ್ಯಮಂತ್ರಿ ಎದುರು ಹೇಳಿಕೊಳ್ಳಲು ವಿಫಲ ಯತ್ನ ಮಾಡಿದರು ಅಂಜನಾ.
ನಂತರ ತನ್ನನ್ನು ಮೋಸಗೊಳಿಸಿದವರಿಗೆ ಶಿಕ್ಷೆಯಾಗಲೇಬೇಕು, ಇದಕ್ಕಾಗಿ ತನ್ನ ಜೀವ ಹೋದರೂ ಪರವಾಗಿಲ್ಲ ಎಂದು ವಿಧಾನಸಭಾದ ಕಟ್ಟಡದೆದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ನಂತರ ಅಲ್ಲಿದ್ದ ಸಿಬ್ಬಂದಿ ದೌಡಾಯಿಸಿ, ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.
ಎಲ್ಲಾ ವಿಷಯಗಳನ್ನು ತಿಳಿಸಿರುವ ಅಂಜನಾ, ಇದೀಗ ಸಾಯುವ ಸ್ಥಿತಿಗೆ ಬಂದಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಗಂಡನ ಮನೆಯವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಜನೀಕಾಂತ್​ ವಿರುದ್ಧ ಹೈಕೋರ್ಟ್​ ಗರಂ- ದಂಡಕ್ಕೆ ಬೆದರಿದ ಸೂಪರ್​ಸ್ಟಾರ್​!

ಮುಚ್ಚಲಿದೆ ಯಾಹೂ ಡಾಟ್​ ಕಾಮ್​- ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ…

ಕಾಶ್ಮೀರದ ಕಣಿವೆಯಲ್ಲಿ 250ಕ್ಕೂ ಅಧಿಕ ಉಗ್ರರ ಹೊಂಚು! ಭದ್ರತಾಪಡೆಗೆ ಸಿಕ್ಕಿದೆ ಸ್ಫೋಟಕ ಮಾಹಿತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 18 =
Remember me
