ನವದೆಹಲಿ: ಕಳೆದ ವಾರ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ಭಾರಿ ಸದ್ದು ಮಾಡಿತ್ತು. 35 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್​ ಬಿಚ್ಚಿ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಆಕೆ ಅದರಲ್ಲಿ ಬರೆದುಕೊಂಡಿದ್ದಳು.
ತಾನು ಸೈಕಲ್​ನಲ್ಲಿ ಹೋಗುವ ಸಮಯದಲ್ಲಿ ಬೂದುಬಣ್ಣದ ಕಾರಿನಲ್ಲಿ ಯುವಕನೊಬ್ಬ ತನ್ನನ್ನು ಹಿಂಬಾಲಿಸಿ ಬಂದ, ನಂತರ ನನ್ನ ಬಳಿ ಬಂದ. ವಿಳಾಸ ಕೇಳಲು ಬಂದ ಎಂದುಕೊಂಡೆ. ಆದರೆ ಹತ್ತಿರ ಬಂದವನೇ ತನ್ನ ಪ್ಯಾಂಟ್​ ಬಿಚ್ಚಿ, ಖಾಸಗಿ ಅಂಗವನ್ನು ಮುಟ್ಟಲು ಶುರುಮಾಡಿ ಅಸಭ್ಯವಾಗಿ ವರ್ತಿಸಿದ ಎಂದು ಬರೆದುಕೊಂಡಿದ್ದಳು.ಕಾರಿನಲ್ಲಿ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ ಎಂದಿದದ್ದ ಯುವತಿ, ಈ ಬಗ್ಗೆ ಪೊಲೀಸರಲ್ಲಿ ದೂರು ಕೂಡ ದಾಖಲಾಯಿತು.
ನಂತರ ಈ ಬಗ್ಗೆ ಅನೇಕ ಮಂದಿ ಕಮೆಂಟ್​ ಹಾಕಿದ್ದರು. ಕೆಲವರು ತಮಗೂ ಇದೇ ಅನುಭವ ಆಗಿರುವ ಬಗ್ಗೆ ಬರೆದುಕೊಂಡಿದ್ದರು.ಯುವತಿ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡರು. ಅಕ್ಟೋಬರ್ 17 ಮತ್ತು ಅಕ್ಟೋಬರ್ 20ರ ನಡುವಿನ ಅವಧಿಯಲ್ಲಿ ಮಹಿಳೆಯರಿಗೆ ಯಾವ ಯಾವ ಪ್ರದೇಶದಲ್ಲಿ ಈ ರೀತಿ ಅನುಭವ ಆಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ನೋಡಿದರು.ನಾಲ್ಕೈದು ಮಹಿಳೆಯರ ಎದುರು ಬಂದು ಅಸಭ್ಯವಾಗಿ ವರ್ತಿಸಿದ್ದ ಈ ಯುವಕನ ಬಗ್ಗೆ ಸಿಸಿಟಿವಿಯಲ್ಲಿ ಕಾಣಿಸಿತು. ಎಲ್ಲದರಲ್ಲಿಯೂ ಅದೇ ಯುವಕ, ಅದೇ ಬೂದು ಬಣ್ಣದ ಕಾರು. ಆದರೆ ಪತ್ತೆ ಮಾಡುವುದು ಹೇಗೆ? ನಂತರ ಕಾರಿನ ನಂಬರ್​ ಪ್ಲೇಟನ್ನು ಚೆಕ್​ ಮಾಡಲಾಯಿತು. ಆದರೆ ಬುದ್ಧಿವಂತ ಆತ ನೋಂದಣಿ ಫಲಕವನ್ನು ಭಾಗಶಃ ಬಟ್ಟೆಯಿಂದ ಮುಚ್ಚಿದ್ದ!
ಇದನ್ನೂ ಓದಿ:ದಂಪತಿ ಇಬ್ಬರೂ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ವಕೀಲರು ಬೇಕೇ ಬೇಕಾ?
ಪೊಲೀಸರು ಬಿಟ್ಟಾರೆಯೇ? ಆ ಕಾರು ಎಲ್ಲೆಲ್ಲಿಗೆ ಹೋಗಿದೆ ಎಂಬ ಬಗ್ಗೆ ಸಿಸಿಟಿವಿ ಆಧರಿಸಿ ಪತ್ತೆಹಚ್ಚಲು ಶುರು ಮಾಡಿದರು. ನಂತರ ಆತನ ಕಾರು ಜನಕಪುರಿ ಕಡೆಗೆ ಹೋಗುತ್ತಿರುವುದು ತಿಳಿದುಬಂತು. ಸಿಸಿಟಿವಿಯನ್ನೇ ಆಧರಿಸಿ ಕೊನೆಗೂ ಆತನ ಮನೆಗೆ ಹೋದರು.
ಆತನನ್ನು ಬಂಧಿಸಿಯೂ ಆಯಿತು. ನಂತರ ಅವನ ಜಾತಕ ಬಿಚ್ಚಿದಾಗ ಪೊಲೀಸರೇ ದಂಗಾಗಿ ಹೋದರು. ಕಾರಣ ಆತನೊಬ್ಬ ಸಬ್​ ಇನ್ಸ್​ಪೆಕ್ಟರ್​! ಪುನೀತ್ ಗ್ರೆವಾಲ್ ಎಂಬ ಸಬ್​ ಇನ್ಸ್​ಪೆಕ್ಟರ್​ ಟ್ರಾಫಿಕ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ.
ಈಗ ಈ ಪೊಲೀಸ್​, ಪೊಲೀಸರ ಅತಿಥಿ! ಅಪ್ರಾಪ್ತೆಯೂ ಸೇರಿದಂತೆ ನಾಲ್ಕೈದು ಮಂದಿ ಈತನ ಅಸಭ್ಯ ವರ್ತನೆ ಕುರಿತು ದೂರು ದಾಖಲಿಸಿದ್ದಾರೆ. ಸದ್ಯ 14 ದಿನಗಳ ಈತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಈತನ ಪತ್ನಿ ಶಿಕ್ಷಕಿಯಾಗಿದ್ದಾರೆ. ಅವರ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದೆ. ಈತನಿಗೆ ಒಬ್ಬಳು ಮಗಳೂ ಇದ್ದಾಳೆ! ಸದ್ಯ ಆರೋಪಿಯ ವಿರುದ್ಧ ದೆಹಲಿ ಪೊಲೀಸರು ಕಿರುಕುಳ, ಪೋಕ್ಸೊ ಮೊದಲಾದ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಚಿಂದಿ ಆಯುವವರೆಂದು ಥೂ ಎಂದರು… ಊರು ಬಿಡಬೇಕಾಯಿತು… ‘ನೀಟ್’​ ಗೆದ್ದು ಉತ್ತರಿಸಿರುವೆ…

VIDEO: ಕಾಂಗ್ರೆಸ್​ ಮುಖಂಡನ ನೇತೃತ್ವದಲ್ಲಿ ರಾವಣನ ಸುಡುವಾಗ ಸ್ಫೋಟ!

ಕಾರ್ಗಿಲ್​ ಯುದ್ಧದಲ್ಲಿ ಸೈನಿಕರಿಗೆ ಆಹಾರ, ಶಸ್ತ್ರಾಸ್ತ್ರ ನೀಡಲಿಲ್ಲ- ಕಂಬನಿ ಮಿಡಿದ ಮಾಜಿ ಪಿಎಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − one =
Remember me
