ಅಹಮದಾಬಾದ್​ (ಗುಜರಾತ್​):ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರಿಗೆ ನಿಯಮಾನುಸಾರ ಬೋರ್ಡಿಂಗ್​ ಪಾಸ್​ ನಿರಾಕರಿಸಿದ್ದಕ್ಕೆ ಅಲ್ಲಿಯ ಸಿಬ್ಬಂದಿಯ ಕೆನ್ನೆಗೆ ಹೊಡೆದಿರುವ ಘಟನೆ ನಡೆದಿದೆ.
ಸ್ಪೈಸ್‌ಜೆಟ್ ವಿಮಾನಯಾನ ಸಿಬ್ಬಂದಿಗೆ ಸಬ್‌ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಯೊಬ್ಬರು ಇಂಥ ಕೃತ್ಯ ಎಸಗಿದ್ದು, ಈ ಘಟನೆ ಕೆಲಕಾಲ ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಎಡೆಮಾಡಿತ್ತು.
ಅಷ್ಟಕ್ಕೂ ಆಗಿದ್ದೇನೆಂದರೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪ್ರಯಾಣಿಕರು ದೆಹಲಿಗೆ ಪ್ರಯಾಣಿಸುವ ಸಲುವಾಗಿ ಟಿಕೆಟ್ ​ಕಾಯ್ದಿರಿಸಿದ್ದರು. ಸ್ಪೈಸ್ ಜೆಟ್ ಎಸ್‌ಜಿ-8194ರಲ್ಲಿ ಅವರು ನಿನ್ನೆ ಮಂಗಳವಾರ ಪ್ರಯಾಣಿಸಬೇಕಿತ್ತು.
ಇದನ್ನೂ ಓದಿ:ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಟ್ಯಾಂಕರ್​ಗೆ ಢಿಕ್ಕಿ: ಕಾರು ನಜ್ಜುಗುಜ್ಜು!
ಆದರೆ ಅವರು ತಡವಾಗಿ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದ ನಿಯಮದ ಪ್ರಕಾರ, ನಿಗದಿತ ಸಮಯದೊಳಗೆ ಬೋರ್ಡಿಂಗ್​ ಪಾಸ್​ ಕೌಂಟರ್​ ಬಳಿ ಬಾರದೇ ಹೋದರೆ ಅವರಿಗೆ ಬೋರ್ಡಿಂಗ್ ಪಾಸ್‌ ನೀಡಲಾಗುವುದಿಲ್ಲ. ಆದ್ದರಿಂದ ಅಲ್ಲಿಯ ಸಿಬ್ಬಂದಿ ಬೋರ್ಡಿಂಗ್​ ಪಾಸ್​ ನೀಡಲು ನಿರಾಕರಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಸಬ್ ಇನ್ಸ್‌ಪೆಕ್ಟರ್, ವಿಮಾನಯಾನ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ್ದಾರೆ. ವಿಷಯ ದೊಡ್ಡದಾಡುತ್ತಿದ್ದಂತೆಯೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್‌ಎಫ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಸಬ್ ಇನ್ಸ್​ಪೆಕ್ಟರ್​ ಸೇರಿದಂತೆ ಮೂವರು ಪ್ರಯಾಣಿಕರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ವಿಮಾನಯಾನ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರನ್ನು ಹಿಂದಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಆದರೂ ಸಬ್ ಇನ್ಸ್​ಪೆಕ್ಟರ್​ ಸೇರಿದಂತೆ ಮೂವರು ಪ್ರಯಾಣಿಕರಿಗೆ ವಿಮಾನ ಹತ್ತಲು ಅವಕಾಶ ನೀಡಲಿಲ್ಲ ಎನ್ನಲಾಗಿದೆ.
ವರ್ಷಗಟ್ಟಲೆ ಒಂದೇ ಮನೆಯಲ್ಲಿದ್ವಿ… ತನು-ಮನ ಎಲ್ಲಾ ಹಂಚಿಕೊಂಡ್ವಿ… ಆದ್ರೆ ಈಗ…

ಅಪಘಾತದಲ್ಲಿ ಮಗ ಸತ್ತಿದ್ದಾನೆ ಎಂದು ಪಾಲಕರಿಗೆ ಗೊತ್ತಾದದ್ದು 27 ವರ್ಷಗಳ ಬಳಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
