ಕೋಲ್ಕತಾ:ಬಂಗಾಳಿಯ ಖ್ಯಾತ ನಟ ಸೌಮಿತ್ರ ಚಟರ್ಜಿ ನಿಧನರಾಗಿದ್ದಾರೆ. ಇವರಿಗೆ 85 ವರ್ಷ ವಯಸ್ಸಾಗಿತ್ತು. ಕರೊನಾ ಸೇರಿದಂತೆ ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಇವರು ಬಳಲುತ್ತಿದ್ದರು.
ಅಕ್ಟೋಬರ್ 6ರಂದು ಕರೊನಾ ಸೋಂಕು ದೃಢವಾಗಿತ್ತು. ಅಂದಿನಿಂದ ಅವರು ಕೋಲ್ಕತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದರೆಡು ದಿನದಿಂದ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಇದೀಗ ಅವರು ಮೃತಪಟ್ಟಿರುವ ಸುದ್ದಿ ಬಂದಿದೆ.
ನರ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಯಿಂದ ಬಳಲುತ್ತಿದ್ದ ಚಟರ್ಜಿ ಅವರು ಚಿಕಿತ್ಸೆ ನಂತರವೂ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಚಟರ್ಜಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಒಂದಕ್ಕಿಂತ ಹೆಚ್ಚು ಲೈಫ್ ಸಪೋರ್ಟ್ ಯಂತ್ರಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ:ಈ ಸರ್ಪಗಳು ಕಚ್ಚಲ್ಲ… ಕಣ್ಣಿಗೆ ಗುರಿಯಿಟ್ಟು ಉಗುಳಿದ್ರೆ ಅಷ್ಟೇ ಕಥೆ…
ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಪವಾಡ ನಡೆಯದ ಹೊರತು ನಾವು ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ನಿನ್ನೆಯೇ ಹೇಳಿದ್ದರು. ಚಟರ್ಜಿ ಅವರ ಮೂತ್ರಪಿಂಡಗಳ ಕಾರ್ಯ ಸಂಪೂರ್ಣ ಹದಗೆಟ್ಟಿತ್ತು. ಗುರುವಾರ ಅವರಿಗೆ ಮೊದಲ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಬುಧವಾರ ಟ್ರಾಕಿಯೊಸ್ಟೊಮಿ ನಡೆಸಲಾಗಿತ್ತು. ಆದರೆ ಅದು ಯಾವುದೂ ಪ್ರಯೋಜನವಾಗಿಲ್ಲ ಎಂದಿದ್ದರು.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಚಟರ್ಜಿಯವರು ಭಾಜನರಾಗಿದ್ದಾರೆ. 2018ರಲ್ಲಿ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೀಜನ್ ಆಫ್ ಆನರ್ ಕೂಡ ಲಭಿಸಿತ್ತು.
ಸೌಮಿತ್ರ ಅವರು ಪತ್ನಿ, ಮಗ, ಮಗಳನ್ನು ಅಗಲಿದ್ದಾರೆ.
10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ…

ಐದು ಸಲ ಶಾಸಕನಾದ್ರೂ ಎಂಥ ಬಡತನ, ಎಷ್ಟು ಸರಳತನ ಎಂದವರಿಗೆ ಕಾದಿತ್ತು ಶಾಕ್​!

ಭೂಮಿಗೆ ಅಪ್ಪಳಿಸಲಿದೆ ಭಯಾನಕ ಕ್ಷುದ್ರಗ್ರಹ- ಪ್ರಪಂಚಕ್ಕೇ ಅಪಾಯ ಕಾದಿದೆ ಎಂದ ವಿಜ್ಞಾನಿಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 5 =
Remember me
