|ರಾಘವ ಶರ್ಮ ನಿಡ್ಲೆ, ನವದೆಹಲಿ
ದೇಶದ ರಾಜಧಾನಿ ದೆಹಲಿಯಲ್ಲಿ ಕರೊನಾ ಸಂತ್ರಸ್ತರ ಸಂಖ್ಯೆ ಮುಗಿಲು ಮುಟ್ಟಿದ್ದು, ಸೂಕ್ತ ಚಿಕಿತ್ಸೆ ಸಿಗದೆಯೇ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಭಾನುವಾರ 240 ಮಂದಿ ಕರೊನಾಕ್ಕೆ ಬಲಿಯಾಗಿದ್ದರೆ, ಸೋಮವಾರದಂದು 277 ಮಂದಿ ಮಹಾಮಾರಿಗೆ ಜೀವ ಕಳೆದುಕೊಂಡಿದ್ದಾರೆ. ಅನೇಕ ಮಂದಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿರುವುದು ದಿಲ್ಲಿ ಜನತೆಯನ್ನು ಆತಂಕಕ್ಕೆ ತಳ್ಳಿದೆ.
ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರಕ್ಕೆ ನೆರವಾಗಲು ಕೇಂದ್ರ ರೈಲ್ವೆ ಇಲಾಖೆ ಮುಂದೆ ಬಂದಿದ್ದು, ದೆಹಲಿಯ ೨ ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಕೋಚ್‌ಗಳನ್ನು “ಐಸೋಲೇಷನ್‌ ಕೋಚ್‌ʼʼಗಳನ್ನಾಗಿ ಪರಿವರ್ತಿಸಿದೆ. ಇಲ್ಲಿ ಸುಮಾರು ೧೨೦೦ ಮಂದಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಸದ್ಯ ದೆಹಲಿಯ ಶುಕರ್‌ ಬಸ್ತಿ ಎಂಬಲ್ಲಿ ೨ ರೈಲುಗಳು ಹಾಗೂ ಆನಂದ್‌ ವಿಹಾರ್‌ ನಿಲ್ದಾಣದಲ್ಲಿರುವ ಒಂದು ರೈಲನ್ನು ಐಸೊಲೇಷನ್‌ ಕೋಚ್‌ಗಳನ್ನಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಕೋಚ್‌ನಲ್ಲಿ ೧೬ ರೋಗಿಗಳಿಗೆ ಬೆಡ್‌ಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಪ್ರತಿ ಕೋಚ್‌ಗೆ ತಲಾ ಇಬ್ಬರು ನರ್ಸ್‌ಗಳನ್ನು ನಿಯೋಜಿಸಲಾಗುತ್ತದೆ. ಸರ್ಕಾರದ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಐಸೊಲೇಷನ್‌ ಕೋಚ್‌ಗಳನ್ನು ಸಿದ್ಧಪಡಿಸಲು ರೈಲ್ವೆ ಇಲಾಖೆ ತಯಾರು ಮಾಡಿಕೊಂಡಿದೆ ಎಂದು ಇಲಾಖೆಯ ಉತ್ತರ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಆಶುತೋಷ್‌ ಗಂಗಾಲ್‌ ಮಾಹಿತಿ ಹಂಚಿಕೊಂಡಿದ್ದಾರೆ.
ಕರೊನಾ ಚಿಕಿತ್ಸೆ ಸೇರಿ ಎಲ್ಲಾ ಆರೋಗ್ಯ ಸೇವೆಗಳನ್ನು ದಿಲ್ಲಿ ಸರ್ಕಾರ ನೀಡಲಿದೆ. ನಾವು ಮೂಲಸೌಕರ್ಯವನ್ನು ಒದಗಿಸುತ್ತೇವೆ. ಆರಂಭದಲ್ಲಿ ಪ್ರತಿ ಕೋಚ್‌ ನಲ್ಲಿ ೨ ಆಕ್ಸಿಜೆನ್‌ ಸಿಲಿಂಡರ್‌ ನೀಡಲಾಗುವುದು. ಇದರ ರಿಫಿಲ್ಲಿಂಗ್‌ ಕೆಲಸವನ್ನು ದಿಲ್ಲಿ ಸರ್ಕಾರ ನೋಡಿಕೊಳ್ಳಬೇಕು ಎಂದು ಆನಂದ್‌ ವಿಹಾರ್‌ ರೈಲ್ವೆ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

ಐಸೊಲೇಷನ್‌ ಕೋಚ್‌ಗಳನ್ನು ದಿಲ್ಲಿ ಸರ್ಕಾರದ ಆರೋಗ್ಯಧಿಕಾರಿಗಳು ಪರಿವೀಕ್ಷಣೆ ನಡೆಸಿದ ಬಳಿಕ ರೋಗಿಗಳನ್ನು ಕಳುಹಿಸಿಕೊಡಲಾಗುತ್ತದೆ. ಮನೆಯಲ್ಲಿ ಐಸೊಲೇಷನ್‌ ಸಾಧ್ಯವಾಗದ ರೋಗಿಗಳಿಗೆ ಮಾತ್ರ ರೈಲ್ವೆ ಕೋಚ್‌ಗಳಲ್ಲಿ ಚಿಕಿತ್ಸೆ ಸಿಗಲಿದೆ. ತೀರಾ ಗಂಭೀರ ಕರೊನಾ ಪ್ರಕರಣಗಳಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಗಲಿದೆ.
ರೋಗಿಗಳಿಗೆ ಕೇಂದ್ರ ರೈಲ್ವೆ ಇಲಾಖೆಯ ಕ್ಯಾಟರಿಂಗ್‌ ವ್ಯವಸ್ಥೆ ಮೂಲಕ ರೋಗಿಗಳಿಗೆ ಆಹಾರ ಪೂರೈಕೆಯಾಗಲಿದೆ. ದಿಲ್ಲಿಯಲ್ಲಿ ಬಿಸಿಲಿನ ಹವೆ ಜೋರಾಗಿರುವುದರಿಂದ ಕೋಚ್‌ಗಳ ಲ್ಮೇಲ್ಭಾಗದಲ್ಲಿ ಬಟ್ಟೆಯ ಗೋಣಿಗಳನ್ನು ಹಾಕಲಾಗಿದೆ.
ಮತ್ತೆ ಊರಿಗೆ ವಲಸೆ: ಕರೊನಾ ಒಂದನೇ ಅಲೆ ಸಂದರ್ಭದಲ್ಲಿ ಲಾಕ್‌ ಡೌನ್‌ ಘೋಷಣೆ ಮಾಡಿದ್ದರಿಂದ ದಿಲ್ಲಿಯಲ್ಲಿದ್ದ ವಲಸೆ ಕಾರ್ಮಿಕ ವರ್ಗ ತಮ್ಮ ಊರುಗಳಿಗೆ ವಲಸೆ ಹೋಗಿದ್ದ ದೃಶ್ಯ, ಅವರ ಸಂಕಟಗಳನ್ನು ಈಗಲೂ ಮರೆತಿಲ್ಲ. ಅದರ ಮಧ್ಯೆಯೇ, ದಿಲ್ಲಿಯ ವಲಸೆ ನೌಕರ ವರ್ಗ ತಮ್ಮ ಕುಟುಂಬಗಳೊಂದಿಗೆ ಉತ್ತರ ಪ್ರದೇಶ, ಬಿಹಾರ, ಛತ್ತೀಸ್‌ಗಢ ಸೇರಿದಂತೆ ವಿವಿಧ ರಾಜ್ಯಗಳಿಗೆ ಭಾರೀ ಸಂಖ್ಯೆಯಲ್ಲಿ ವಾಪಸ್‌ ಹೋಗುತ್ತಿದ್ದಾರೆ. ಆನಂದ್‌ ವಿಹಾರ್‌ ರೈಲ್ವೆ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಸೋಮವಾರವೂ ಸಾವಿವಾರು ಪ್ರಯಾಣಿಕರು ಸೇರಿದ್ದರಿಂದ ಪೊಲೀಸರು ಕೂಡ ಕರೊನಾ ಹರಡುವ ಭೀತಿಯ ಮಧ್ಯೆಯೇ ಕೆಲಸ ಮಾಡುತ್ತಿದ್ದರು.
“ಇಷ್ಟೊಂದು ಸಂಖ್ಯೆಯಲ್ಲಿ ಜನರು ದೆಹಲಿ ಬಿಟ್ಟು ಹೋಗುತ್ತಿದ್ದಾರೆ. ರೈಲುಗಳೆಲ್ಲಾ ಭರ್ತಿಯಾಗಿವೆ. ಯಾವುದೇ ವ್ಯಕ್ತಿಗತ ಅಂತರವಿಲ್ಲ. ಎಷ್ಟೋ ಮಂದಿ ತಮ್ಮೊಂದಿಗೆ ಕರೊನಾವನ್ನೂ ಹಳ್ಳಿಗಳಿಗೆ ಕೊಂಡೊಯ್ಯುತ್ತಿದ್ದಾರೆ. ಆದರೆ, ಈ ಬಡವರ ಆರ್ಥಿಕ ಸಮಸ್ಯೆಯನ್ನೂ ನಾವು ಅರ್ಥಮಾಡಿಕೊಳ್ಳಬೇಕುʼʼ ಎಂದು ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಹಿರಿಯ ಪೊಲೀಸ್‌ ಅಧಿಕಾರಿ ತಮ್ಮ ಅಸಹಾಯಕತೆ ತೋಡಿಕೊಂಡರು.
ಮದುವೆಯಾಗಿ ಪರಿತಪಿಸುತ್ತಿದ್ದೇನೆ- ಏನು ಮಾಡಲಿ ನಾನು?

1-9ನೇ ತರಗತಿಗಳ ಪರೀಕ್ಷೆ ರದ್ದು: ಹಾಗಿದ್ರೆ ಅಂಕ ಕೊಡೋದು ಹೇಗೆ? ವಿವರ ಇಲ್ಲಿದೆ ನೋಡಿ…

ಬೇಸಿಗೆ ರಜೆ ಎಷ್ಟು ದಿನ? ಶಾಲೆ ಶುರು ಯಾವಾಗ? ಪರೀಕ್ಷೆ ಎಂದು…? ಇಲ್ಲಿದೆ ನೋಡಿ ಸಂಪೂರ್ಣ ಡಿಟೇಲ್ಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
