ನವದೆಹಲಿ:ಕರೊನಾ ಎರಡನೆಯ ಅಲೆಗೆ ಭಾರತ ಕಂಗೆಟ್ಟು ಹೋಗಿದೆ. ಕ್ಷಣ ಕ್ಷಣವೂ ಈ ಮಹಾಮಾರಿ ಪಡೆಯುತ್ತಿರುವ ಬಲಿಯ ಸಂಖ್ಯೆ ಏರುತ್ತಲೇ ಸಾಗಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಹೊರಟಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ.
ಕಳೆದ ಮಂಗಳವಾರದ (ಏ.20) ಬೆಳಗ್ಗೆ 8 ಗಂಟೆಯಿಂದ ಬುಧವಾರ (ಏ.21) ಬೆಳಗ್ಗೆ 8 ಗಂಟೆಯವರೆಗಿನ ದಾಖಲೆಗಳನ್ನು ಸಚಿವಾಲಯ ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ 3,14,835 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,59,30,965ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 2,104 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,84,657ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22,91,428 ಇದ್ದು, ಕಳೆದ 24 ಗಂಟೆಗಳಲ್ಲಿ 1,78,841 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಚೇತರಿಸಿಕೊಂಡವರ 1,34,54,880ಕ್ಕೆ ತಲುಪಿದೆ.
ಭಾರತದಲ್ಲಿ ಒಂದೇ ದಿನ 16,51,711 ಮಂದಿಯನ್ನು ಕರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 27,27,05,103 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.
ವೀಕೆಂಡ್‌ ಕರ್ಫ್ಯೂನಲ್ಲೇ ಮದುವೆ ಫಿಕ್ಸ್‌ ಆಗಿಬಿಟ್ಟಿದ್ಯಾ? ಹಾಗಿದ್ರೆ ಇವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ…

ನಿತ್ಯಾನಂದನ ‘ಕೈಲಾಸ’ದಿಂದ ಭಾರತೀಯರಿಗೆ ಬಂತು ಶಾಕಿಂಗ್‌ ನ್ಯೂಸ್‌- ಬೇಸರದಲ್ಲಿ ಭಕ್ತರು…

ಪಾಕಿಸ್ತಾನದಿಂದ ಹಾರಿ ಬಂದು ಯೋಧನ ಮೇಲೆ ಕುಳಿತ ಪಾರಿವಾಳ! ಕಾಲಿನಲ್ಲಿ ನಿಗೂಢ ಸಂಖ್ಯೆಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + five =
Remember me
