ಶಾಂಘೈ (ಚೀನಾ):ಕರೊನಾದ ತವರು ಚೀನಾದಲ್ಲಿ ಮತ್ತೆ ವೈರಲ್​ ತಾಂಡವಾಡುತ್ತಿದೆ. ಕರೊನಾ ನಾಲ್ಕನೆಯ ಅಲೆಗೆ ಇಡೀ ದೇಶ ಬೆಚ್ಚಿಬಿದ್ದಿದೆ. ಅದರಲ್ಲಿಯೂ ಶಾಂಘೈನಲ್ಲಿ ಕರೊನಾಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆ ಆಗಿದೆ.
ಒಂದನೆಯ ಅಲೆಯಲ್ಲಿ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲ ಪುನಃ ಚೀನಾದಲ್ಲಿ ಸೃಷ್ಟಿಸಿಯಾಗಿದ್ದು, ಜೀವಂತ ವ್ಯಕ್ತಿಯನ್ನು ಶವಾಗಾರಕ್ಕೆ ಕಳುಹಿಸಿರುವ ವಿಷಯವೀಗ ಭಾರಿ ವೈರಲ್​ ಆಗಿದೆ. ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಕೋಲಾಲಹ ಸೃಷ್ಟಿಯಾಗಿದೆ. ಶಾಂಘೈ ನರ್ಸಿಂಗ್ ಹೋಮ್ ನಿವಾಸಿಯನ್ನು ಜೀವಂತವಾಗಿದ್ದಾಗ ತಪ್ಪಾಗಿ ಶವಾಗಾರಕ್ಕೆ ಕರೆದೊಯ್ಯಲಾಗಿದೆ.
ಈ ಕುರಿತು ಚೀನಾ ಸರ್ಕಾರ ತನಿಖೆಗೆ ಆದೇಶಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಜೀವಂತ ವ್ಯಕ್ತಿಯನ್ನು ಶವಾಗಾರಕ್ಕೆ ಕಳುಹಿಸಿರುವ ಕುರಿತಾಗಿ ನರ್ಸಿಂಗ್ ಹೋಮ್ ಕ್ಷಮೆಯಾಚಿಸಿದರೂ, ದೇಶ ವ್ಯಾಪಿ ?ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ನರ್ಸಿಂಗ್ ಹೋಮ್‌ನ ನಿರ್ದೇಶಕರು ಮತ್ತು ಜಿಲ್ಲಾ ನಾಗರಿಕ ವ್ಯವಹಾರಗಳ ಬ್ಯೂರೋ ಮತ್ತು ಸಾಮಾಜಿಕ ಅಭಿವೃದ್ಧಿ ಕಚೇರಿಯ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರನ್ನು ನಂತರ ಅವರ ಸ್ಥಾನಗಳಿಂದ ವಜಾಗೊಳಿಸಲಾಗಿದೆ. ಮಾತ್ರವಲ್ಲದೇ ನರ್ಸಿಂಗ್​ ಹೋಂನ ವೈದ್ಯರ ಲೈಸೆನ್ಸ್​ ರದ್ದು ಮಾಡಲಾಗಿದೆ.
ಈ ನಡುವೆಯೇ ಶಾಂಘೈನಲ್ಲಿ ಐದನೆಯ ವಾರವೂ ಲಾಕ್​ಡೌನ್​ ಮುಂದುವರೆದಿದೆ. ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸಂಚಲನ ಮೂಡಿಸಿರೋ ರಾಹುಲ್​- ನೇಪಾಳಿ ಬೆಡಗಿ ವಿಡಿಯೋ: ನಿಮ್​ ಕೆಲ್ಸ ಮೊದ್ಲು ನೋಡ್ಕೊಳಿ ಎಂದ ಕಾಂಗ್ರೆಸ್

ಮನೆ ಮಾರಿ 50 ಲಕ್ಷ ರೂ. ಕೊಟ್ರು… ಕೆಲ್ಸನೂ ಹೋಯ್ತು- ದುಡ್ಡೂ ಹೋಯ್ತು.. ಅರೆಸ್ಟೂ ಆದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
