ಹೈದರಾಬಾದ್‌:ನಿಜವಾಗಿಯೂ ಕರೊನಾಕ್ಕಿಂತ ಅದು ಸೃಷ್ಟಿಸಿರುವ ಆತಂಕವೇ ಹೆಚ್ಚಿನದಾಗಿಬಿಟ್ಟಿದೆ. ಒಡಹುಟ್ಟಿದವರಿಗೆ ಸೋಂಕು ಬಂದರೂ ಅವರನ್ನು ಮುಟ್ಟದ ಸ್ಥಿತಿ ನಿರ್ಮಾಣ ಆಗಿಬಿಟ್ಟಿದೆ.
ಇಂಥದ್ದೇ ಒಂದು ಭಯಾನಕ, ನೋವಿನ ಘಟನೆ ತೆಲಂಗಾಣದ ಸಂಗಾರೆಡ್ಡಿಯ ಮಂಗಲಪೇಟೆಯಲ್ಲಿ ನಡೆದಿದೆ. ಸೋಂಕಿತ ಮನೆಮಗ ಮೃತಪಟ್ಟಾಗ ಆತನ ಶವವನ್ನು ರಾತ್ರಿಪೂರ್ತಿ ಹೊರಗಡೆ ಮಳೆಯಲ್ಲಿಟ್ಟಿರುವ ಆತಂಕಕಾರಿ ಘಟನೆ ಇದಾಗಿದೆ. ಮಗನ ದುಃಸ್ಥಿತಿ ಕಂಡು ತಾಯಿಯೂ ಹೃದಯಾಘಾತದಿಂದ ಮೃಪಟ್ಟಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ನಾರಾಯಂಕೇಡ್‌ನಲ್ಲಿ ವಾಸಿಸುತ್ತಿರುವ ಕೂಡು ಕುಟುಂಬದಲ್ಲಿ ಯುವಕ ಹಾಗೂ ಆತನ ಪತ್ನಿಗೆ ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ಮನೆಯಲ್ಲಿನ ಮಕ್ಕಳು ಹಾಗೂ ಹಿರಿಯರಿಗೆ ವೈದ್ಯರು ಕ್ವಾರೆಂಟೈನ್‌ನಲ್ಲಿರುವಂತೆ ಹೇಳಿದ್ದರು.
ಮರುದಿನ ಕುಟುಂಬದ ಇನ್ನೂ 5 ಜನರಿಗೆ ಕರೊನಾ ಪಾಸಿಟಿವ್‌ ಬಂದಿತ್ತು. ಅವರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಮಹಿಳೆಯೊಬ್ಬರಿಗೆ ಉಸಿರಾಟದ ತೊಂದರೆ ಇದ್ದರೂ, ಕರೊನಾ ನೆಗೆಟಿವ್‌ ಬಂದಿತ್ತು. ಆದ್ದರಿಂದ ಈ ಮಹಿಳೆ ಸಂಬಂಧಿಕರ ಮನೆಗೆ ಹೋಗಿದ್ದರು.
ಇತ್ತ, ಕರೊನಾ ಪಾಸಿಟಿವ್‌ ಬಂದಿದ್ದ ವ್ಯಕ್ತಿಯೊಬ್ಬರು ಸೋಫಾದಲ್ಲಿ ಮಲಗಿದ್ದರು. ತಡರಾತ್ರಿ ಅಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನು ತಿಳಿಯುತ್ತಲೇ ಹೆದರಿದ ಕುಟುಂಬಸ್ಥರು ಹೆದರಿ ಮೃತದೇಹವನ್ನು ಮುಟ್ಟಲೂ ಹೋಗಲಿಲ್ಲ. ಸೋಫಾ ಸಮೇತ ಮೃತದೇಹ ಎತ್ತಿ ಹೊರಗಿಟ್ಟಿದ್ದರು. ಜೋರಾಗಿ ಮಳೆ ಬರುತ್ತಿದ್ದುದರಿಂದ ರಾತ್ರಿ ಪೂರ್ತಿ ಮೃತದೇಹ ಮಳೆಯಲ್ಲೇ ನೆನೆದಿದೆ.
ಇದನ್ನೂ ಓದಿ:ರಷ್ಯಾ ಕರೊನಾ ಲಸಿಕೆ ನೋಂದಣಿಯಲ್ಲಿ ನಡೆದಿದೆಯಾ ಗೋಲ್​ಮಾಲ್​? ಸಮಿತಿಯಲ್ಲಿದ್ದ ಖ್ಯಾತ ವೈದ್ಯ ರಾಜೀನಾಮೆ….!
ಮರುದಿನ ಈ ವಿಷಯ ತಾಯಿಗೆ (ನೆಗೆಟಿವ್‌ ಬಂದಿದ್ದ ಮಹಿಳೆ) ತಿಳಿಸಲಾಗಿದೆ. ಮಗ ಮೃತಪಟ್ಟ ವಿಷಯ ಹಾಗೂ ಆತನಿಗಾದ ದುಃಸ್ಥಿತಿ ಕೇಳುತ್ತಲೇ ಹೃದಯಾಘಾತದಿಂದ ತಾಯಿಯೂ ಸ್ಥಳದಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ!
ಮೃತದೇಹವನ್ನು ಎತ್ತಲೂ ಯಾರೂ ಹತ್ತಿರ ಬರದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ಮೃತದೇಹವನ್ನು ಚಿತಾಗಾರಕ್ಕೆ ಒಯ್ದಿದ್ದಾರೆ.
ಆಕಾಶದಲ್ಲಿ ಹುಟ್ಟಿತೊಂದು ಮಗು- ಹೆಸರು ‘ಸ್ಕೈ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
