ಬಾರ್ಮರ್‌ (ರಾಜಸ್ಥಾನ):ಕರೊನಾ ಎರಡನೆಯ ಅಲೆಯ ಭೀಕರತೆಗೆ ಎಷ್ಟೊಂದು ಘಟನೆಗಳು ಸಾಕ್ಷಿಯಾಗುತ್ತಿವೆ. ಹಲವು ಕಡೆಗಳಲ್ಲಿ ಇಡೀ ಕುಟುಂಬಕ್ಕೆ ಕುಟುಂಬವೇ ಕರೊನಾ ಮಾರಿಗೆ ಬಲಿಯಾಗಿದ್ದರೆ, ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗಂತೂ ಲೆಕ್ಕವೇ ಇಲ್ಲ.
ಅಂಥದ್ದೇ ಒಂದು ಭೀಕರತೆಗೆ ಸಾಕ್ಷಿಯಾಗಿದೆ ಇನ್ನೊಂದು ಘಟನೆ, ಕರೊನಾದಿಂದಾಗಿ ಪ್ರೀತಿಯ ತಂದೆ ಮೃತಪಟ್ಟಿದ್ದನ್ನು ಸಹಿಸಲಾಗದ ಮಗಳೊಬ್ಬಳು ತಂದೆಯ ಚಿತೆಗೇ ಹಾರಿದ್ದಾಳೆ! ಇಂಥದ್ದೊಂದು ಆಘಾತಕಾರಿ ಘಟನೆ ನಡೆದಿರುವುದು ರಾಜಸ್ಥಾನದ ಬಾರ್ಮರ್ ಎಂಬಲ್ಲಿ. ಕೂಡಲೇ ಆಕೆಯನ್ನು ಚಿತೆಯಿಂದ ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ, ಜೀವನ್ಮರಣಗಳ ನಡುವೆ ಯುವತಿ ಹೋರಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
73 ವರ್ಷದ ದಾಮಾದರದಾಸ್‌ ಎನ್ನುವವರು ಸೋಂಕಿನಿಂದ ಮೃತಪಟ್ಟಿದ್ದರು. ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುತ್ತಿತ್ತು. ಅವರ ಮಗಳು ಚಂದ್ರಕಲಾ ಕೂಡ ಅಂತ್ಯಸಂಸ್ಕಾರಕ್ಕೆ ಹೋಗಿದ್ದಾಳೆ. ಆಕೆಗೆ ಅವಕಾಶ ನೀಡದಿದ್ದರೂ ಹಠ ಮಾಡಿ ಆಕೆ ಹೋಗಿದ್ದಳು. ತಂದೆಯ ಚಿತೆ ಉರಿಯುತ್ತಿದ್ದಂತೆಯೇ ಏಕಾಏಕಿ ಚಂದ್ರಕಲಾ ಅದರಲ್ಲಿ ಜಿಗಿದು ಬಿಟ್ಟಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸಲಾಯಿತು. ಶೇಕಡ 70 ರಷ್ಟು ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಿಮಗೆ ಉಳಿದಿರುವುದು ಇನ್ನು ನಾಲ್ಕು ದಿನಗಳು ಮಾತ್ರ… ಸಿಎಂ ಯೋಗಿ ಆದಿತ್ಯನಾಥರಿಗೆ ಕೊಲೆ ಬೆದರಿಕೆ…

https://www.vijayavani.net/s-metro-clash-in-mexico/https://www.vijayavani.net/s-living-together-prgnant-nandondu/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 5 =
Remember me
