ಬ್ರಿಟನ್‌:ಕರೊನಾ ಆರ್ಭಟ ಅದರಲ್ಲಿಯೂ ಕರೊನಾದ ಎರಡನೆಯ ಅಲೆಯಂತೂ ಪ್ರತಿಯೊಬ್ಬರ ನಿದ್ದೆಗೆಡಿಸಿದೆ. ಕರೊನಾದ ಆರಂಭದ ದಿನಗಳಿಂದಲೂ ಮಾಸ್ಕ್‌ ಜತೆಗೆ ಸಾಮಾಜಿಕ ಅಂತರ ಶಬ್ದ ಕೇಳುತ್ತಲೇ ಬಂದಾಗಿದೆ. ಕರೊನಾ ಸೋಂಕಿನ ಪ್ರಸಾರವನ್ನು ತಕ್ಕಮಟ್ಟಿಗೆ ತಡೆಯುವ ಪ್ರಯತ್ನವಿದು.
ಆದರೆ ಇದೀಗ ಇನ್ನು ಹದಿನೈದೇ ದಿನಗಳಲ್ಲಿ ಸೋಂಕು ಸಂಪೂರ್ಣ ನಿರ್ಮೂಲನವಾಗಲಿದೆ, ಯಾರು ಬೇಕಾದರೂ ತಮ್ಮ ಆಪ್ತರನ್ನು ತಬ್ಬಿಕೊಳ್ಳಬಹುದು, ಯಾರ ಜತೆಯಾದರೂ ಡೇಟಿಂಗ್‌ ಹೋಗಬಹುದು, ಒಟ್ಟಿಗೇ ಇರಬಹುದು ಎಂಬ ಸಂತೋಷದ ಸುದ್ದಿಯನ್ನು ಜನತೆಗೆ ನೀಡಲಾಗಿದೆ.
ಅಷ್ಟಕ್ಕೂ ಇಂಥದ್ದೊಂದು ಸಂದೇಶ ಬಂದಿರುವುದು ಬ್ರಿಟನ್‌ನಿಂದ. ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್‌ ಈ ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಮಾಡಲು ಕಾರಣ ಅಲ್ಲಿ ಇನ್ನು 15 ದಿನಗಳಲ್ಲಿ ಸಂಪೂರ್ಣ ಕರೊನಾಮುಕ್ತ ಆಗಲಿದೆಯಂತೆ.
ಕರೊನಾ ಹಾಟ್‌ಸ್ಪಾಟ್‌ ಎನಿಸಿಕೊಂಡ ಬ್ರಿಟನ್‌ನಲ್ಲಿ ಕರೊನಾ ಲಸಿಕೆ ಬಂದ ಮೇಲೆ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಸದ್ಯ ಒಂದುಸಾವಿರ ಮಂದಿಯಲ್ಲಿ ಒಬ್ಬರು ಸೋಂಕು ಪೀಡಿತರಾಗಿದ್ದಾರಂತೆ. ಇನ್ನು ಹದಿನೈದೇ ದಿನಗಳಲ್ಲಿ ಕರೊನಾ ಮುಕ್ತವಾಗಲಿದ್ದು, ಇಷ್ಟು ದಿನಗಳವರೆಗೆ ದೂರವಿದ್ದ ಆಪ್ತರೆಲ್ಲರೂ ತಬ್ಬಿಕೊಳ್ಳಬಹುದು, ಒಟ್ಟಿಗೇ ಇರಬಹುದು ಎಂದು ಪ್ರಧಾನಿ ಹೇಳಿದ್ದಾರೆ.
ಇದೇ ವೇಳೆ ಅಂತಾರಾಷ್ಟ್ರೀಯ ಪ್ರಯಾಣವು ಪುನರಾರಂಭಗೊಳ್ಳಲು ಬ್ರಿಟನ್‌ ಸಿದ್ಧವಾಗಿದೆ, ಆದರೆ ಕಡ್ಡಾಯವಾದ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.
ಅತ್ತ ಪಂಚರಾಜ್ಯ, ಇತ್ತ ಕರ್ನಾಟಕ… ಮತ ಎಣಿಕೆಗೆ ಕೆಲವೇ ಗಂಟೆ… ಏನಾಗಲಿದೆ ಸಮೀಕ್ಷೆ? ಎದೆಯಲ್ಲಿ ಢವಢವ…

ಪರಸ್ತ್ರೀ ಜತೆ ದೈಹಿಕ ಸಂಪರ್ಕ ಹೊಂದಿದರೆ ವಿವಾಹಿತನಿಗೆ ಆಕೆಯೂ ಪತ್ನಿಯಾಗುತ್ತಾಳಾ?

ಮಕ್ಕಳಾಗದೇ ಇರುವುದಕ್ಕೆ ವೀರ್ಯ ಕೌಂಟಿಂಗ್ ಕಡಿಮೆ ಇರುವುದೊಂದೇ ಕಾರಣವಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
