ನವದೆಹಲಿ:ಕರೊನಾ ಪಾಸಿಟಿವ್‌ ಬಂದವರು ಹಾಗೂ ಲಕ್ಷಣಗಳು ಇದ್ದ ಸಂದರ್ಭಗಳಲ್ಲಿ ಕೆಲವೊಮ್ಮೆ ವೈದ್ಯರು ಮನೆಯಲ್ಲಿಯೇ ಉಳಿದುಕೊಳ್ಳುವಂತೆ (ಹೋಂ ಐಸೊಲೇಷನ್‌ಗೆ) ಶಿಫಾರಸು ಮಾಡುತ್ತಾರೆ. ಸೌಮ್ಯ ಹಾಗೂ ಯಾವುದೇ ಲಕ್ಷಣಗಳಲ್ಲಿ ಇಲ್ಲದಿದ್ದರೂ ಪಾಸಿಟಿವ್‌ ಹೊಂದಿರುವವರಿಗೆ ಹೆಚ್ಚಾಗಿ ಈ ಸೂಚನೆ ನೀಡಲಾಗುತ್ತಿದೆ.
ಅಂಥ ಸಂದರ್ಭಗಳಲ್ಲಿ ಮನೆಯಲ್ಲಿ ಇರುವವರು ಏನೆಲ್ಲಾ ಮುನ್ನೆಚ್ಚರಿಕಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಅದರಲ್ಲಿ ಇರುವ ಅಂಶಗಳು ಹೀಗಿವೆ:* ಸೌಮ್ಯ ಲಕ್ಷಣ ಇಲ್ಲವೇ ಯಾವುದೇ ಲಕ್ಷಣ ಇಲ್ಲದಿರುವ ಬಗ್ಗೆ ದೃಢೀಕರಣ ಪಡೆಯಬೇಕು.* ಮನೆಯಲ್ಲಿ ಬೇರೆಯವರಿಗೆ ಸೋಂಕು ಹರಡದಂತೆ ಪ್ರತ್ಯೇಕ ಕೋಣೆ ಸೇರಿದಂತೆ ಅಗತ್ಯ ಸೌಲಭ್ಯ ಏರ್ಪಾಡು ಮಾಡಿಕೊಳ್ಳಬೇಕು.*60 ವರ್ಷ ಮೇಲ್ಪಟ್ಟವರು, ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ, ಲಿವರ್​, ಕಿಡ್ನಿ ಸಮಸ್ಯೆ ಹೊಂದಿರುವವರು ಸರಿಯಾಗಿ ವೈದ್ಯಾಧಿಕಾರಿಯ ನಿಗಾದಲ್ಲಿರಬೇಕು.* 24 ಗಂಟೆಯೂ ಸೋಂಕಿತನ ಕಾಳಜಿ ಮಾಡಲು ಯಾರಾದರೂ ಇರಬೇಕು. ಆ ವೇಳೆ ಎಲ್ಲಾ ನಿಮಗಳ ಪಾಲನೆ ಮಾಡಬೇಕು.*ಎಚ್​ಐವಿ ಹಾಗೂ ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗಿರುವ ಸೋಂಕಿತರಿಗೆ ಹೋಮ್​ ಐಸೋಲೇಷನ್​ನಲ್ಲಿ ಇರಲು ಅವಕಾಶವಿಲ್ಲ. ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗಲಿದೆ ಎಂದು ದೃಢವಿದ್ದರೆ ಮಾತ್ರ ಐಸೋಲೇಷನ್​ ಆಯ್ಕೆ ನೀಡಬಹುದು.* ವೈದ್ಯರ ಸೂಚನೆಯಂತೆ ಸೋಂಕಿತರ ಕಾಳಜಿ ವಹಿಸುವವರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಹೈಡ್ರೋಕ್ಸಿಕ್ಲೋರೋಕ್ವಿನ್​​ ಪ್ರೊಪೈಲ್ಯಾಕ್ಸಿಸ್​ ಸೇವಿಸಬೇಕು.* ಸೋಂಕಿತ ವ್ಯಕ್ತಿ ಮನೆಯವರಿಂದ ಪ್ರತ್ಯೇಕವಾಗಿ ಇರಬೇಕು. ಮನೆಯಲ್ಲಿ ವಯಸ್ಸಾದವರು ಅಥವಾ ರಕ್ತದೊತ್ತಡ ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಸಮೀಪ ಹೋಗಬಾರದು.* ಗಾಳಿಯಾಡುವಂತಹ ಕೋಣೆಯಲ್ಲಿಯೇ ಸೋಂಕಿತರನ್ನು ಇಡಬೇಕು.*ಸೋಂಕಿತರು ತಮ್ಮ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವಂತಿಲ್ಲ.* ಸೋಂಕಿತರು ಮೂರು ಲೇಯರ್​ ಮೆಡಿಕಲ್​ ಮಾಸ್ಕ್​ಗಳನ್ನೇ ಧರಿಸಬೇಕು. ಎಂಟು ಗಂಟೆಗಳಿಗೊಮ್ಮೆ ಮಾಸ್ಕ್ ಬದಲಾಯಿಸಬೇಕು. ಸೋಂಕಿತರ ಕಾಳಜಿ ತೆಗೆದುಕೊಳ್ಳುವವರು ಕೋಣೆಗೆ ಬರುವ ಮುನ್ನ ಎನ್​ 95 ಮಾಸ್ಕ್​​​ ಧರಿಸಬೇಕು.* 1 ಪರ್ಸೆಂಟ್​ ಸೋಡಿಯಂ ಹೈಪೋಕ್ಲೋರೈಟ್​ನಿಂದ ಮಾಸ್ಕ್​ಗಳನ್ನ ಸೋಂಕು ರಹಿತ ಮಾಡಿ ಬಳಿಕ ಅದನ್ನು ನಾಶ ಮಾಡಬೇಕು.*ಸೋಂಕಿತರ ದ್ರವಾಹಾರಗಳಣ್ನು ಹೆಚ್ಚಾಗಿ ಸೇವಿಸಬೇಕು.* ಸೋಂಕಿತ ವ್ಯಕ್ತಿ ಪ್ರತಿ ದಿನ ದೇಹದ ತಾಪಮಾನವನ್ನ ಪರೀಕ್ಷೆ ಮಾಡಿಕೊಳ್ಳಬೇಕು.* ಎಲ್ಲಾ ಸಮಯದಲ್ಲೂ ಉಸಿರಾಟದ ಶಿಷ್ಟಾಚಾರಗಳನ್ನ ಪಾಲಿಸಬೇಕು.* ಆಕ್ಸಿಮೀಟರ್​ನ ಸಹಾಯದಿಂದ ಆಗಾಗ ಆಮ್ಲಜನಕ ಮಟ್ಟವನ್ನು ಪರೀಕ್ಷೆ ಮಾಡುತ್ತಿರಬೇಕು.* 40 ಸೆಕೆಂಡ್​ಗಳ ಕಾಲ ಸೋಪು ಇಲ್ಲವೇ ಆಲ್ಕೋಹಾಲ್​ ಇರುವ ಸ್ಯಾನಿಟೈಸರ್​ಗಳಿಂದ ಕೈ ತೊಳೆದುಕೊಳ್ಳಬೇಕು.* 1 ಪರ್ಸೆಂಟ್​ ಹೈಪೋಕ್ಲೋರೈಟ್​ ಸೊಲ್ಯೂಷನ್​ನಿಂದ ಕೋಣೆಯ ಪ್ರತಿಯೊಂದು ಮೂಲೆಯನ್ನ ಸ್ವಚ್ಛ ಮಾಡಬೇಕು.
ಹೀಗಾದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ:1. ಉಸಿರಾಟದ ತೊಂದರೆ.2. ಆಮ್ಲಜನಕ ಮಟ್ಟ ಇಳಿಕೆಯಾಗುವುದು.3. ಎದೆಯಲ್ಲಿ ನೋವು ಕಾಣಿಸಿಕೊಂಡಾಗ.4. ಮಾನಸಿಕವಾಗಿ ಆರೋಗ್ಯ ಹದಗೆಡುತ್ತಿದೆ ಎನಿಸಿದಾಗ.
75 ಕೋಟಿ ರೂ. ಸಂಬಳದಿಂದ ಸನ್ಯಾಸದತ್ತ… ದೀಕ್ಷೆ ಪಡೆದ ಮುಕೇಶ್‌ ಅಂಬಾನಿ ಬಲಗೈ ಪ್ರಕಾಶ್‌ ಷಾ….

ಕರೊನಾ ಗೆದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌: ಆಸ್ಪತ್ರೆಯಿಂದ ಡಿಸ್‌ಚಾರ್ಜ್‌

ಮಗಳ ಶಿಕ್ಷಣ, ಮದುವೆ, ನಮ್ಮ ಭವಿಷ್ಯಕ್ಕೆಂದು ಇಟ್ಟ ಹಣವೆಲ್ಲಾ ಹೊಸ ಮನೆ ಗುಳುಂ ಮಾಡಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + fourteen =
Remember me
