ಗೋರಖ್‌ಪುರ (ಉತ್ತರ ಪ್ರದೇಶ):ಗೋರಖ್​ಪುರ ಜಿಲ್ಲೆಯ ಬಿಆರ್​ಡಿ ವೈದ್ಯಕೀಯ ಕಾಲೇಜಿನಲ್ಲಿ ಕರೊನಾ ಸೋಂಕಿತೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.ನಾಲ್ಕೂ ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದು, ವೆಂಟಿಲೇಟರ್​ನಲ್ಲಿ ಇರಿಸಲಾಗಿದೆ. ತಾಯಿ ಕೂಡ ಆರೋಗ್ಯದಿಂದ ಇದ್ದಾರೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಗಣೇಶ್ ಕುಮಾರ್ ಹೇಳಿದ್ದಾರೆ.
ತುಂಬು ಗರ್ಭಿಣಿಯಾಗಿದ್ದ ಡಿಯೋರಿಯಾ ಜಿಲ್ಲೆಯ ಗೌರಿ ಬಜಾರ್ ನಿವಾಸಿ 26 ವರ್ಷದ ಮಹಿಳೆ ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕಳೆದ ಮಂಗಳವಾರ ರಾತ್ರಿ ಇಲ್ಲಿ ಭೇಟಿ ನೀಡಿದ್ದಾರೆ. ಪರೀಕ್ಷೆ ಮಾಡಿದಾಗ ಕೋವಿಡ್ ಪಾಸಿಟಿವ್ ದೃಢವಾಗಿದೆ.
ಇದನ್ನೂ ಓದಿ:ನವೆಂಬರ್​ ಒಂದರಿಂದಲೇ ತರಗತಿ ಆರಂಭ.. ಹೊಸ ಮಾರ್ಗಸೂಚಿ ಪ್ರಕಟ..
ಅಲ್ಲಿಯೇ ಕರೊನಾಕ್ಕೂ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಹೆರಿಗೆಯನ್ನೂ ಮಾಡಿಸಲಾಗಿದೆ. ನಾಲ್ಕು ಶಿಶುಗಳ ತೂಕ 980 ಗ್ರಾಂನಿಂದ 1.5 ಕೆಜಿ ನಡುವೆ ಇದೆ.
ಇದೊಂದು ಅಪರೂಪದ ಪ್ರಕರಣವಾಗಿದ್ದು, ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿತ್ತು. ಆದಾಗ್ಯೂ, ತಾಯಿ ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇಲಿಗೆ ಸಿಕ್ಕಿತು ಪ್ರತಿಷ್ಠಿತ ಚಿನ್ನದ ಪದಕ, ಶೌರ್ಯ ಪ್ರಶಸ್ತಿ- ಇದರ ಸಾಹಸ ಏನು ಗೊತ್ತಾ?

ವಿಚಾರಣೆ ಸಮಯದಲ್ಲಿಯೇ ಧಮ್​ ಎಳೆದ ವಕೀಲ! 10 ಸಾವಿರ ದಂಡ ವಿಧಿಸಿ ಕೋರ್ಟ್​

ವಂಚನೆ ಪ್ರಕರಣ: ಕಣ್ವ ಬ್ಯಾಂಕ್​ನ 255 ಕೋಟಿ ಆಸ್ತಿ ಮುಟ್ಟುಗೋಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eleven =
Remember me
