ತಿರುವನಂತಪುರ:ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಾರ್ಚ್ ಕೊನೆಯ ವಾರದಿಂದ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ ಇದೀಗ ದೇವಾಲಯದ ಪ್ರಧಾನ ಅರ್ಚಕ ಸೇರಿದಂತೆ 10 ಮಂದಿಗೆ ಕರೊನಾ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ದೇವಾಲಯವನ್ನು ಸಾರ್ವಜನಿಕರಿಗಾಗಿ ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.
ಪದ್ಮನಾಭಸ್ವಾಮಿ ದೇಗುಲದ ಇಬ್ಬರು ಮುಖ್ಯ ಅರ್ಚಕರು ಹಾಗೂ 8 ಸಹಾಯಕ ಅರ್ಚಕರು, ಇಬ್ಬರು ಕಾವಲುಗಾರರಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅಕ್ಟೋಬರ್‌ 15ರವರೆಗೆ ದೇಗುಲ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ಹೇಳಿದೆ.
ಅರ್ಚಕರಿಗೂ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸದ್ಯ ಪದ್ಮನಾಭಸ್ವಾಮಿ ದೇಗುಲದ ದೈನಂದಿನ ಪೂಜೆಯನ್ನು ತಂತ್ರಿಗಳು ನೆರವೇರಸಲಿದ್ದಾರೆ. ಆದರೆ, ಭಕ್ತರಿಗೆ ದೇಗುಲದ ಪ್ರವೇಶ ನಿರ್ಬಂಧಿಸಲಾಗಿದೆ. ಯಾವುದೇ ‘ದರ್ಶನ’ಕ್ಕೆ ಅವಕಾಶ ವಿರುವುದಿಲ್ಲ ಎಂದು ದೇವಸ್ಥಾನದ ಕಾರ್ಯಕಾರಿ ರಥೀಶನ್ ಐಎಎಸ್ ತಿಳಿಸಿದ್ದಾರೆ.
ಇದನ್ನೂ ಓದಿ:ಜೈಲಿನಿಂದಲೇ ಪಕ್ಷದ ಕಂಟ್ರೋಲ್‌: ಇದು ಲಾಲೂ ಸ್ಟೈಲ್‌- ಮೊಬೈಲ್‌ ಬಳಕೆಗೆ ವಿರೋಧಿಗಳು ಕಿಡಿಕಿಡಿ
ಮಾಸ್ಕ್ ಧರಿಸುವುದು, ಕೈ ನೈರ್ಮಲ್ಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಡ್ಡಾಯವಾಗಿ ಧರಿಸುವುದರ ಜತೆಗೆ, ದಿನವೊಂದಕ್ಕೆ ಮತ್ತು ನಿರ್ದಿಷ್ಟ ಸಮಯದಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದೇವಾಲಯಕ್ಕೆ ಅನುಮತಿಯನ್ನು ನೀಡಲಾಗಿತ್ತು. ಭಕ್ತರು ವಿಗ್ರಹ, ಗೋಡೆ ಅಥವಾ ಇತರ ಯಾವುದೇ ಮೇಲ್ಮೈಗಳನ್ನು ಮುಟ್ಟುವುದಕ್ಕೆ ಅವಕಾಶ ನೀಡಿರಲಿಲ್ಲ. ಈ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿತ್ತು. ಆದರೂ ಇದೀಗ ಕರೊನಾ ವೈರಸ್‌ ಬಂದಿರುವುದಾಗಿ ಹೇಳಲಾಗುತ್ತಿದೆ.
ಮಕ್ಕಳನ್ನು ಶಾಲೆಗೆ ಸೇರಿಸಲು ಇನ್ನೂ ಒಂದು ವಾರ ಕಾಲಾವಕಾಶ ನೀಡಿದ ಸರ್ಕಾರ

ಟಿಕ್‌ಟಾಕ್‌ ಸ್ಟಾರ್‌ ಪ್ರತೀಕ್‌ ಕಾರು ಅಪಘಾತದಲ್ಲಿ ದುರ್ಮರಣ

ಅರ್ಧ ಗಂಡು, ಅರ್ಧ ಹೆಣ್ಣು: ವಿಚಿತ್ರ ಪಕ್ಷಿ ಪ್ರತ್ಯಕ್ಷ- ಸಂಶೋಧಕರಲ್ಲಿ ಹೆಚ್ಚಿದೆ ಕೌತುಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + 16 =
Remember me
