ನವದೆಹಲಿ:ಈಗ ಕರೊನಾ ಪಾಸಿಟಿವ್‌ ಎನ್ನುವುದು ಮಾಮೂಲಿ ಎನ್ನುವಂತಾಗಿದೆ. ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ ಬಂದಾಗಲೂ ಪರೀಕ್ಷೆ ಮಾಡಿಸಿಕೊಂಡರೆ ಕರೊನಾ ಪಾಸಿಟಿವ್‌ ಎಂದು ತೋರಿಸುವ ಘಟನೆಗಳೂ ನಡೆಯುತ್ತಿವೆ.
ಪಾಸಿಟಿವ್‌ ಬಂದಾಕ್ಷಣ ಎಲ್ಲರೂ ಗಾಬರಿ ಬೀಳುವುದು, ಹಿಂದು ಮುಂದೆ ನೋಡದೇ ಆಸ್ಪತ್ರೆಗೆ ದೌಡಾಯಿಸುವುದು ನಡೆದೇ ಇದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಸಂದರ್ಭಗಳಲ್ಲಿಯೂ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಎಂದು ಹೇಳಿದೆ.
Watch this video to know when one should seek admission in a hospital when found COVID-19 positive.#IndiaFightsCorona@MoHFW_INDIA@PMOIndia@PIB_India@MIB_India@drharshvardhan@cspramesh
(2/2)pic.twitter.com/aodHAC34LA
— MyGovIndia (@mygovindia)April 21, 2021

ವಿಡಿಯೋದಲ್ಲಿ ಏನಿದೆ?ಟಾಟಾ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎಸ್.ಪ್ರಮೇಶ್ ಅವರು ಕೆಲವೊಂದು ಮಾಹಿತಿಗಳನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ. ಅದೇನೆಂದರೆ, ಸದಾ ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡಿ, ದ್ರವಾಂಶ ಹೆಚ್ಚಿಗೆ ಇರುವ ಆಹಾರದ ಜತೆಗೆ ಯೋಗ, ಪ್ರಾಣಾಯಾಮ ಮಾಡಿ. ಇದರಿಂದ ಕರೊನಾ ಸೋಂಕನ್ನು ತಕ್ಕಮಟ್ಟಿಗೆ ನಿಭಾಯಿಸಬಹುದು.
ಜ್ವರದ ಲಕ್ಷಣ ಕಂಡುಬಂದರೆ ಆಮ್ಲಜನಕದ ಮಟ್ಟವನ್ನು ಮೊದಲು ತಿಳಿದುಕೊಂಡರೆ ಸಾಕು. ಒಂದು ವೇಳೆ ದೇಹದಲ್ಲಿನ ಆಮ್ಲಜನಕದ ಮಟ್ಟವು 94ಕ್ಕಿಂತ ಹೆಚ್ಚಿದ್ದರೆ, ಆಸ್ಪತ್ರೆಗೆ ಸೇರುವ ಅಗತ್ಯವಿಲ್ಲ. ಆಮ್ಲಜನಕದ ಮಟ್ಟವನ್ನು ನಿಖರವಾಗಿ ಪರೀಕ್ಷಿಸಲು ಕರೊನಾವೈರಸ್ ಸೋಂಕಿತ ವ್ಯಕ್ತಿ ತನ್ನ ಕೋಣೆಯಲ್ಲಿ ಆರು ನಿಮಿಷಗಳ ಕಾಲ ನಡೆಯಬೇಕು. ನಂತರ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಬೇಕು. ಆರು ನಿಮಿಷಗಳ ಕಾಲ ವಾಕ್ ಮಾಡಿದ ನಂತರ ರೋಗಿಯ ಹಿಂದಿನ ಆಮ್ಲಜನಕದ ಮಟ್ಟವು 4 ಪ್ರತಿಶತ ಅಥವಾ ಹೆಚ್ಚಿನ ಏರಿಳಿತವಾಗಿದ್ದರೆ ಮಾತ್ರ ಆಸ್ಪತ್ರೆಯನ್ನು ಸಂಪರ್ಕಿಸಬೇಕು.
ರೋಗಿಯ ಆಮ್ಲಜನಕದ ಮಟ್ಟವು ಉತ್ತಮವಾಗಿದ್ದರೆ ಮತ್ತು ಜ್ವರವನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಯಿಲ್ಲದಿದ್ದರೆ, ಅಂತಹ ರೋಗಿಯು ಪ್ಯಾರೆಸಿಟಮಾಲ್ ತೆಗೆದುಕೊಂಡು ಬೇಗ ಚೇತರಿಸಿಕೊಳ್ಳಬಹುದು ಎಂದು ವೀಡಿಯೊದಲ್ಲಿ ಸಲಹೆ ನೀಡಲಾಗಿದೆ. ಇಂಥ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಅವಳ ಜತೆ ಮೊದಲು ಸಿಕ್ತಿದ್ದ ಸುಖ ಈಗ ಸಿಕ್ತಿಲ್ಲ, ಅವಳೂ ಇಂಟರೆಸ್ಟ್‌ ತೋರಿಸ್ತಿಲ್ಲ… ಮದುವೆ ಮುರಿದುಬಿಡಲೆ?

ಸೋಂಕಿತರ ಶವ ಪಡೆಯಲು ಕುಟುಂಬಸ್ಥರೇ ಹೆದರುವಾಗ, ಉಚಿತ ಸೇವೆಯಲ್ಲಿ ತೊಡಗಿದ್ದಾರೆ ಈ ಮಹಿಳೆ…

ನಮ್ಮಮ್ಮ ಕ್ಯಾಟ್‌ವಾಕ್‌ ಮಾಡುತ್ತಿದ್ದಾರೆ- ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ನಟಿ ರಾಖಿ ಸಾವಂತ್‌

ಕ್ರೀಡಾ ಪಟುಗಳಿಗೆ ಭರ್ಜರಿ ಅವಕಾಶ‌: ಸ್ಪೋರ್ಟ್ಸ್​ ಅಥಾರಿಟಿ ಆಫ್‌ ಇಂಡಿಯಾದಲ್ಲಿ 220 ಹುದ್ದೆಗಳಿಗೆ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
