ತಿರುವನಂತಪುರ:ಎಲ್ಲೆಡೆ ಮದುವೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ. ನಿಯಮ ಬಾಹಿರವಾಗಿ ಮದುವೆ, ಸಮಾರಂಭಗಳನ್ನು ನಡೆಸಿದರೆ ಅಂಥವರ ವಿರುದ್ಧ ಕೇಸ್‌ ಹಾಕುವುದು, ಅಂಥವರನ್ನು ಹುಡುಕಿ ಪೊಲೀಸರು ಹೋಗುವುದು ಮಾಮೂಲು.
ಆದರೆ ಕೇರಳದ ಪೊಲೀಸರಿಂದ ಮಾತ್ರ ವಿಭಿನ್ನ ರೀತಿಯ ಕೆಲಸ ನಡೆಯುತ್ತಿದೆ. ಅದೇನೆಂದರೆ ಕರೊನಾ ನಿಯಮಗಳನ್ನು ಪಾಲನೆ ಮಾಡಿ ಮದುವೆಯಾದವರನ್ನು ಹುಡುಕುವ ಕೆಲಸ!ಅಷ್ಟಕ್ಕೂ ಪೊಲೀಸರೇಕೆ ನಿಯಮ ಪಾಲನೆ ಮಾಡಿದವರನ್ನು ಹುಡುಕಿ ಹೊರಡುತ್ತಾರೆ ಎಂದರೆ ಅವರಿಗೆ ಅಭಿನಂದನೆ ಸಲ್ಲಿಸಲು! ತಾಜಾ ಹೂಗಳಿಂದ ಮಾಡಿದ ಬಣ್ಣದ ಹೂಗುಚ್ಛ ಮತ್ತು ಮೆಚ್ಚುಗೆ ಪತ್ರದೊಂದಿಗೆ ಮನೆಮನೆಗಳಿಗೆ ಹೋಗಿ ಅದನ್ನು ನೀಡುತ್ತಿದ್ದಾರೆ. ಪೊಲೀಸರನ್ನು ಕಂಡು ಮೊದಲಿಗೆ ಹೆದರುವ ಜೋಡಿಗಳು ಕೊನೆಗೆ ಸಂತೋಷದಿಂದ ನಕ್ಕು ನಲಿಯುವುದು ಇಲ್ಲಿ ಮಾಮೂಲಾಗಿದೆ.
ನಾವು ಈವರೆಗೆ 40 ಮೆಚ್ಚುಗೆ ಪ್ರಮಾಣಪತ್ರಗಳನ್ನು ವಿಭಿನ್ನ ಭಾಗದ ನೂತನ ದಂಪತಿಗೆ ನೀಡಿದ್ದೇವೆ. ಇದು ಸರ್ಪ್ರೈಸ್‌ ಉಡುಗೊರೆ. ಹೀಗೆ ಮಾಡುವ ಮೂಲಕ ಎಲ್ಲರೂ ನಿಯಮ ಪಾಲನೆ ಮಾಡಬೇಕು ಎಂದು ನಾವು ಹೇಳುತ್ತಿದ್ದೇವೆ ಎನ್ನುತ್ತಿದ್ದಾರೆ ಪೊಲೀಸರು.
ಬೆಡ್ ಬ್ಲಾಕ್‌ ದಂಧೆ- ತೇಜಸ್ವಿ ಸೂರ್ಯ ನೀಡಿದರು ಖದೀಮರ ಫೋನ್‌ ಸಂಭಾಷಣೆ, ಹಣ ವರ್ಗಾವಣೆ ಡಿಟೇಲ್ಸ್‌

ಬೆಂಗಳೂರಿನಲ್ಲಿ ಕರೊನಾ ನಿಯಮ ಉಲ್ಲಂಘನೆ ಮಾಡಿದವರಿಗೆ ಬಿದ್ದದ್ದು 2.85 ಕೋಟಿ ರೂ. ದಂಡ

ಶಾಲೆಗಳು ಯಾವಾಗ ಆರಂಭ? ರಜೆ ಎಲ್ಲಿಯವರೆಗೆ? ಸರ್ಕಾರದಿಂದ ಹೊರಟಿದೆ ಈ ಸುತ್ತೋಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
