ನವದೆಹಲಿ:ಕರೊನಾ ವೈರಸ್​ನಿಂದ ಇಲ್ಲಿಯವರೆಗೆ ಮೃತಪಟ್ಟಿರುವವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಮಂದಿ.
ಆದರೆ ಇದೀಗ ಆತಂಕದ ವಿಷಯವೊಂದನ್ನು ಇದೀಗ ಅಧ್ಯಯನ ಬಹಿರಂಗಪಡಿಸಿದೆ. ಅದೇನೆಂದರೆ ಕರೊನಾ ವೈರಸ್​ಗೆ ಬಾಧಿತರಾಗುವ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆಯಾಗುತ್ತದೆ ಎಂದು.
ಟೆಸ್ಟೋಸ್ಟೆರಾನ್ ಎಂದರೆ ಪುರುಷರಲ್ಲಿ ಪ್ರಾಥಮಿಕವಾಗಿರುವ ಲೈಂಗಿಕ ಹಾರ್ಮೋನ್​ಗಳು. ಇದರ ಅರ್ಥ ಕರೊನಾ ಸೋಂಕಿಗೆ ಒಳಗಾಗುವ ಪುರುಷರಲ್ಲಿ ಸೋಂಕು ಲೈಂಗಿಕ ಹಾರ್ಮೋನ್​ಗಳ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ. ಇದರಿಂದಾಗಿ ಪುರುಷರಲ್ಲಿ ಲೈಂಗಿಕ ಶಕ್ತಿಯ ಕುಂದುತ್ತದೆ ಎಂದು ಅಧ್ಯಯನ ಹೇಳಿದೆ.
ಟೆಸ್ಟೋಸ್ಟೆರಾನ್ ಇದು ನೇರವಾಗಿ ಉಸಿರಾಟದ ಅಂಗಗಳ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದೆ. ಕರೊನಾ ಸೋಂಕಿಗೆ ಒಳಗಾಗುವ ವ್ಯಕ್ತಿಗಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಇಂಥ ಸಂದರ್ಭದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುತ್ತದೆ. ಇದು ನೇರವಾಗಿ ಲೈಂಗಿಕ ಹಾರ್ಮೋನ್​ಗಳ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ:ಬಾಬ್ರಿ ಮಸೀದಿ ತೀರ್ಪು ನೀಡಿದ ನ್ಯಾಯಾಧೀಶ ಯಾದವ್​ ಕುರಿತ ಕುತೂಹಲದ ಮಾಹಿತಿಯಿದು…
ಈ ಕುರಿತು, ಮೂತ್ರಶಾಸ್ತ್ರದ ಪ್ರಾಧ್ಯಾಪಕ ಹಾಗೂ ಲೇಖಕ ಸೆಲಾಹಿಟ್ಟಿನ್ ಶಯಾನ್ ವಿವರಣೆ ನೀಡಿದ್ದಾರೆ. ತಾವು ನಡೆಸಿರುವ ಸಂಶೋಧನೆಯಿಂದ ಇಂಥದ್ದೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಮೊದಲ ಬಾರಿಗೆ ಸೋಂಕು ಉಂಟಾದಾಗ ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹದಗೆಡಿಸುತ್ತದೆ. ನಂತರ ಕಾಯಿಲೆ ದೀರ್ಘ ಅವಧಿಯವರೆಗೆ ಇದ್ದರೆ ಇದರಿಂದ ಸೆಕ್ಸ್​ ಹಾರ್ಮೋನ್​ಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ವಿವರಿಸಿದ್ದಾರೆ.
ಟೆಸ್ಟೋಸ್ಟೆರಾನ್ ಪ್ರಮುಖ ಪುರುಷ ಲೈಂಗಿಕ ಹಾರ್ಮೋನ್ ಆಗಿದ್ದು, 40 ವರ್ಷ ವಯಸ್ಸಿನ ನಂತರ ವರ್ಷಕ್ಕೆ ಸರಾಸರಿ 0.8–2 ರಷ್ಟು ಕಡಿಮೆಯಾಗುತ್ತದೆ.ವಯಸ್ಸಾದಂತೆ ಪುರುಷರಲ್ಲಿ ಇದರ ಮಟ್ಟ ಅತ್ಯಂತ ಕ್ಷೀಣಿಸುತ್ತಾ ಹೋಗುತ್ತದೆ. ಆದರೆ ಕರೊನಾ ಸೋಂಕಿಗೆ ಗುರಿಯಾದವರಲ್ಲಿ ಇದು ಬಹುಬೇಗನೆ ಕುಂದುತ್ತದೆ ಎಂದು ಸೆಲಾಹಿಟ್ಟಿನ್ ಶಯಾನ್ ಹೇಳಿದ್ದಾರೆ.
25 ಶಾಲಾ ಮಕ್ಕಳಿಗೆ ವಿಷಹಾಕಿದ್ದ ಶಿಕ್ಷಕಿ! ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್​

ಬಾಬ್ರಿ ಮಸೀದಿ ತೀರ್ಪು: ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಮುಸ್ಲಿಂ ಸಂಘದ ತಯಾರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
