ರಾಯ್ಪುರ (ಛತ್ತೀಸಗಢ):ಈಗ ಕರೊನಾ ಲಸಿಕೆಯ ವೇಳೆ. ಮಹಾಮಾರಿ ಕರೊನಾದಿಂದ ಬಚಾವಾಗಲು ಲಸಿಕೆಯನ್ನು ತೆಗೆದುಕೊಳ್ಳಿ ಎಂದು ಎಲ್ಲಾ ಸರ್ಕಾರಗಳೂ ಘೋಷಣೆ ಮಾಡುತ್ತಿವೆ. ಆದರೂ ಯಾಕೋ ಹಲವರಿಗೆ ಈ ಲಸಿಕೆಯ ಮೇಲೆ ಸಂದೇಹ.
ಈ ಸಂದೇಹ ಹೋಗಲಾಡಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಲಸಿಕೆ ಹಾಕಿಕೊಂಡಿದ್ದಾಗಿದೆ. ಇದರ ಜತೆಗೆ ಗಣ್ಯಾತಿಗಣ್ಯರು ಕೂಡ ಲಸಿಕೆ ಹಾಕಿಸಿಕೊಂಡು ಎಲ್ಲರೂ ಹಾಕಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಇದರ ಹೊರತಾಗಿಯೂ ಹಲವರಿಗೆ ಇದರ ಮೇಲೆ ನಂಬಿಕೆ ಇಲ್ಲ.
Chhattisgarh: Tomatoes being offered to people in Bijapur Municipal limits, by Municipality, to encourage them to get vaccinated for#COVID19. An official, Purshottam Sallur says, "It's being done to encourage them. We appealed to vegetable vendors, they supplied to municipality"pic.twitter.com/3LHPKfm6Mr
— ANI (@ANI)April 20, 2021

ಇದೇ ಕಾರಣಕ್ಕೆ ಲಸಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಛತ್ತೀಸಗಢದ ಸರ್ಕಾರ ಹೊಸದೊಂದು ಪ್ಲ್ಯಾನ್‌ ಮಾಡಿದೆ. ಅದೇನೆಂದರೆ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಉಚಿತವಾಗಿ ಟೊಮ್ಯಾಟೋ ನೀಡಲಾಗುತ್ತಿದೆ!
ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಂಜಿಕೆ ಇಲ್ಲದೇ ಲಸಿಕೆ ಹಾಕಿಸಿಕೊಳ್ಳಿ ಎಂದು ಸಾರಲು ಇದಾಗಲೇ ಟೊಮ್ಯಾಟೊ ನೀಡಲಾಗುತ್ತಿದ್ದು, ಮುಂದೆ ಬರುವವರಿಗೂ ಅದನ್ನು ನೀಡುವುದಾಗಿ ಸರ್ಕಾರ ಹೇಳಿದೆ. ಇದರ ಫೋಟೋ ವೈರಲ್‌ ಆಗಿದ್ದು, ಮಹಿಳೆಯರು ಖುಷಿಯಿಂದ ಟೊಮ್ಯಾಟೋ ಹಿಡಿದು ಬರುವುದನ್ನು ನೋಡಬಹುದಾಗಿದೆ.
ಡಿಪ್ಲೋಮಾ ಪದವೀಧರರಿಗೆ ಏರೋಸ್ಪೇಸ್‌ನಲ್ಲಿ ಭರ್ಜರಿ ಅವಕಾಶ: 26 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಮ್ಮನಿಗೆ ತವರಿನಿಂದ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ, ಎಷ್ಟು ಭಾಗ ಪಾಲು ಸಿಗುತ್ತದೆ?

ಕರೊನಾ ಬಂಡವಾಳವಾಗಿಸಿಕೊಂಡು ಹಣದಾಸೆಗೆ ಬಿದ್ದ ನರ್ಸಿಂಗ್‌ ಹೋಂಗಳಿಗೆ ಸಚಿವರಿಂದ ಈ ಎಚ್ಚರಿಕೆ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
