ನವದೆಹಲಿ:ಕರೊನಾ ಆರಂಭವಾದಾಗಿನಿಂದಲೂ ಅದಕ್ಕಾಗಿ ಇಡೀ ವಿಶ್ವವೇ ಲಸಿಕೆ ತಯಾರಿಸಲು ಮುಂದಾಗಿದೆ. ಕರೊನಾ ಸೋಂಕಿನಿಂದ ಮುಕ್ತಿ ಪಡೆಯುವ ಸಂಬಂಧ ವಿವಿಧ ದೇಶಗಳ ಘಟಾನುಘಟಿ ವೈದ್ಯರು ಲಸಿಕೆ ತಯಾರಿಕೆಯ ಹಿಂದೆ ಬಿದ್ದಿದ್ದಾರೆ.
ಆದರೆ ಇದರ ಬೆನ್ನಲ್ಲೇ ಕರೊನಾ ಸೋಂಕು ಮಾತ್ರ ದಿನೇ ದಿನೇ ಉಗ್ರ ಸ್ವರೂಪ ತಾಳುತ್ತಲೇ ಇದ್ದು, ಲಸಿಕೆ ಯಾವಾಗ ಬರುವುದೋ ಎಂದು ಜನ ಕಾತರರಾಗಿದ್ದಾರೆ.
ಆದರೆ ಈ ನಡುವೆಯೇ ಪುಣೆಯ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್‌ ಪೂನಾವಾಲಾ ಆತಂಕಕಾರಿ ಮಾಹಿತಿ ನೀಡಿದ್ದು, ಕರೊನಾ ನಿಯಂತ್ರಣ ಲಸಿಕೆಯು ಎಲ್ಲರಿಗೂ ಲಭ್ಯವಾಗುವಂತೆ ಆಗಲು ಇನ್ನೂ ನಾಲ್ಕು ವರ್ಷ ಬೇಕು. 20204ರ ಕಮ್ಮಿ ಇದು ಲಭ್ಯವಾಗುವುದು ಅಸಾಧ್ಯ ಎಂದಿದ್ದಾರೆ. ಎಸ್‌ಐಐ ಜಗತ್ತಿನ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪೆನಿ ಎನಿಸಿದೆ.
ಇದನ್ನೂ ಓದಿ:ಅಭಿಮಾನಿಗಳ ಹಾರೈಕೆಗೆ ಸಿಕ್ಕಿತು ಫಲ: ಎಸ್​ಪಿಬಿ ಚೇತರಿಕೆ- ಮಗನಿಂದ ಮಾಹಿತಿ
ಇದಕ್ಕೆ ಪೂರಕ ಎಂಬಂತೆ ಇದಾಗಲೇ ತಯಾರಾಗಿರುವ ಲಸಿಕೆಗಳು ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗದೇ ಇರುವುದು ಹಾಗೂ ಯಶಸ್ವಿಯಾಯಿತು ಎಂದುಕೊಳ್ಳುವಷ್ಟರಲ್ಲಿಯೇ ಸೈಡ್​ ಎಫೆಕ್ಟ್​ನಿಂದ ಲಸಿಕೆ ಸ್ಟಾಪ್​ ಆಗಿರುವುದು ಎಲ್ಲವೂ ಪೂನಾವಾಲಾ ಅವರ ಹೇಳಿಕೆಗೆ ಆಧಾರವಾಗಿವೆ. ಕಳೆದ ವಾರ, ಇಂಗ್ಲೆಂಡ್​ನಲ್ಲಿ ಸ್ವಯಂಸೇವಕರು ಅನಾರೋಗ್ಯಕ್ಕೆ ಒಳಗಾದ ನಂತರ ಅಸ್ಟ್ರಾಜೆನೆಕಾ ಅವರ ಆಕ್ಸ್‌ಫರ್ಡ್ ಲಸಿಕೆ ಅಭ್ಯರ್ಥಿಯ ಮಾನವ ಪ್ರಯೋಗಗಳನ್ನು ನಿಲ್ಲಿಸಲಾಯಿತು, ಅದರ ನಂತರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಹ ಪ್ರಯೋಗಗಳನ್ನೂ ಬಂದ್​ ಮಾಡಿದೆ.
ಕಂಪೆನಿಗಳಿಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇಲ್ಲದೇ ಇರುವುದರಿಂದ ಲಸಿಕೆ ಸದ್ಯದಲ್ಲೇ ಲಭ್ಯವಿಲ್ಲ ಎಂದು ಅದಾರ್​ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಸೇರಂ ಇನ್ಸ್‌ ಟಿಟ್ಯೂಟ್‌ ಆಫ್ ಇಂಡಿಯಾ ಆಸ್ಟ್ರಾಜೆನೆಕಾ, ನಾವೋವ್ಯಾಕ್ಸ್‌ ಸೇರಿದಂತೆ ಜಗತ್ತಿನ ಐದು ಅಂತಾರಾಷ್ಟ್ರೀಯ ಔಷಧೋದ್ಯಮಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು ಲಸಿಕೆ ಅಭಿವೃದ್ಧಿಯಾದರೆ, 100 ಕೋಟಿ ಡೋಸ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಅದರಲ್ಲಿ 50 ಶೇಕಡಾ ಲಸಿಕೆಯನ್ನು ಭಾರತೀಯರಿಗೆ ನೀಡುವುದಾಗಿ ಭರವಸೆ ನೀಡಿದೆ.
ಪ್ರಯೋಗಾಲಯದಲ್ಲಿಯೇ ಕರೊನಾ ಸೃಷ್ಟಿ: ಚೀನಿಯರ ಕ್ರೌರ್ಯಕ್ಕೆ ಪುರಾವೆ ನೀಡುವೆ ಎಂದ ಚೀನಾದ ವೈರಾಲಾಜಿಸ್ಟ್​!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಳುತ್ತಾ ಸೊಳ್ಳೆಗಳೊಂದಿಗೆ ರಾತ್ರಿ ಕಳೆದ ರಾಗಿಣಿ

ರಾಗಿಣಿಯ ಕನಸಿನ ಮನೆ ಮಾರಾಟಕ್ಕಿದೆ! ಮಗಳ ನಶೆನಂಟಿಗೆ ನಲುಗಿಹೋದ ಅಪ್ಪ

‘ನೆಹರೂ ಕಟ್ಟಿಸಿರೋ ‘ಏಮ್ಸ್’​ ಇರೋವಾಗ ಸೋನಿಯಾ ಪದೇ ಪದೇ ವಿದೇಶಕ್ಕೆ ಹೋಗೋದ್ಯಾಕೆ?’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
