ಜರ್ಮನಿ:ಭಾರತದಲ್ಲಿ ಕರೊನಾ ಲಸಿಕೆಯ ಬಗ್ಗೆ ರಾಜಕಾರಣಿಗಳು ವಾದ-ಪ್ರತಿವಾದ ಮಾಡುತ್ತಿದ್ದಾರೆ. ಜನರು ನಮಗೆ ಲಸಿಕೆ ಯಾವಾಗ ಸಿಗುತ್ತೇ, ಅಡ್ಡಪರಿಣಾಮ ಆಗುತ್ತಾ ಎಂದೆಲ್ಲಾ ತಲೆಕೆಡಿಸಿಕೊಂಡಿದ್ದಾರೆ. ಅದೇ ಜರ್ಮನಿಯಲ್ಲಿ ಜನರಿಗೆ ಕರೊನಾ ಲಸಿಕೆಯನ್ನು ತಿನ್ನಿಸುವ ಪ್ರಯತ್ನವೇ ನಡೆದಿದೆ!
ಆಶ್ಚರ್ಯಪಡಬೇಡಿ! ಕರೊನಾ ಲಸಿಕೆಯಂತೆ ಅಲಂಕರಿಸಿದ ಕೇಕ್​ಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವ ಬೇಕರಿಯ ಕಥೆಯಿದು.
ಜರ್ಮನಿಯ ಡಾರ್ಟ್​ಮಂಡ್​ನಲ್ಲಿರುವ ಶೂರೆನರ್ ಬಾಕ್ಪೆರಡೀಸ್ ಎಂಬ ಬೇಕರಿಯು ತನ್ನ ಮಾರ್ಬಲ್ ಕೇಕುಗಳಿಗೆ ಇಂಜೆಕ್ಷನ್ ಸಿರಿಂಜಿನಂತೆ ಆಕಾರ ನೀಡಿ, ಬಿಳಿಯ ಫಾಂಡೆಂಟ್​ನಿಂದ ಅಲಂಕರಿಸಿದೆ. ಅದರ ಮೇಲೆ ‘2021 -ಬಾಯ್ ಬಾಯ್ ಕರೊನಾ’ ಎಂಬ ಸ್ಟಿಕರ್ ನಮೂದಿಸಿ ಕರೊನಾ ಲಸಿಕೆಯ ಬಿಡುಗಡೆಯ ಸಂಭ್ರಮ ಆಚರಿಸುತ್ತಿದೆ.
A German bakery is celebrating the arrival of the coronavirus vaccine with syringe-shaped cakes. This is not the bakery’s first virus-themed creation, last year they sold cakes designed to look like toilet paperhttps://t.co/t6BRlclWsrpic.twitter.com/vES4MS85Ui
— Reuters (@Reuters)January 9, 2021

2020 ಕರೊನಾದಿಂದ ಜಗತ್ತೇ ಕಂಗಾಲಾದ ವರ್ಷ. ಈಗ 2021ರಲ್ಲಿ ಕರೊನಾ ಲಸಿಕೆಯ ದೆಸೆಯಿಂದಾಗಿ ಜನರಿಗೆ ಹೊಸ ಆಶಾಕಿರಣ ಕಂಡಿದೆ. ಜರ್ಮನಿಯೂ ಸೇರಿದಂತೆ ಹಲವು ದೇಶಗಳಲ್ಲಿ ಕರೊನಾ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವ ಈ ಸಮಯದಲ್ಲಿ ವಿಭಿನ್ನ ಡಿಸೈನಿನ ಕೇಕ್ ಮಾಡಿ ಈ ಬೇಕರಿ ಗಮನ ಸೆಳೆದಿದೆ.
“ಇದು ಯಾವುದೇ ಅಡ್ಡಪರಿಣಾಮ ಹೊಂದಿಲ್ಲದ ಲಸಿಕೆ. ಮೇಲಾಗಿ ರುಚಿಕರವಾದ್ದರಿಂದ ನೀವು ಮತ್ತೊಂದನ್ನು ಪಡೆಯಬಹುದು” ಎಂದಿದ್ದಾರೆ, ಬೇಕರಿಯ ಮಾಲಿಕ ಟಿಮ್ ಕೊರ್ಟೀಮ್ .
ಈ ಮುನ್ನ ಇದೇ ಬೇಕರಿಯು ಪಾಶ್ಚಿಮಾತ್ಯ ದೇಶಗಳಲ್ಲಿ ಟಾಯ್ಲೆಟ್​ ಪೇಪರ್ ಸ್ಟಾಕ್ ಖಾಲಿಯಾದ ಹಿನ್ನೆಲೆಯಲ್ಲಿ ಟಾಯ್ಲೆಟ್ ಪೇಪರ್ ರೋಲಿನ ಹಾಗೆ ಕೇಕ್ ಮಾಡಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದಿತ್ತು.
ಆಸ್ಪತ್ರೆಯ ಮೆತ್ತನೆಯ ಬೆಡ್​ ಮೇಲೆ ಹಾಯಾಗಿ ಮಲಗಿರುವ ಬೀದಿನಾಯಿ- ವಿಡಿಯೋ ವೈರಲ್​

ಶಸ್ತ್ರಸಜ್ಜಿತರಾಗಿ ಬಂದು ಬಂದೂಕು ತೋರಿದರೂ ಕಾದಾಡಿದ ಯುವಕರು: ವಿಡಿಯೋ ವೈರಲ್​

ಎದುರಿಗಿದ್ದರೆ ಪಾನೀಪುರಿ ಡಯೆಟ್​ ಯಾರಿಗೆ ಬೇಕ್ರಿ? ನೀಲಿತಾರೆಯ ವಿಡಿಯೋ ವೈರಲ್​

ಮುಂಡೆ ವಿರುದ್ಧದ ರೇಪ್​ಕೇಸ್​ಗೆ ಟ್ವಿಸ್ಟ್​- ಗಾಯಕಿ ವಿರುದ್ಧವೇ ದೂರು: ಸಚಿವರನ್ನು ಕೆಳಗಿಳಿಸಲ್ಲ ಎಂದ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
