ಡೆಹ್ರಾಡೂನ್:ಭ್ರಷ್ಟಾಚಾರ ಆರೋಪ ಹೊತ್ತ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಪ್ರಕರಣವನ್ನು ಸಿಬಿಐಗೆ ವಹಿಸಿ ಹೈಕೋರ್ಟ್​ ಆದೇಶ ಹೊರಡಿಸಿದೆ.
ಗೋ ಸೇವಾ ಸೇವಾ ಅಯೋಗದ ಮುಖ್ಯಸ್ಥರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಇವೆ ಮೇಲೆ ಇದೆ. ಈ ಸ್ಥಾನಕ್ಕೆ ತಮ್ಮ ಸಂಬಂಧಿಯೊಬ್ಬರನ್ನು ನೇಮಕ ಮಾಡುವ ಸಲುವಾಗಿ 2016ರಲ್ಲಿ ಬಿಜೆಪಿಯ ಉಸ್ತುವಾರಿಯಾಗಿದ್ದ ತ್ರಿವೇಂದ್ರ ಸಿಂಗ್​ ಅವರು, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ.
ಇವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಪತ್ರಕರ್ತರೊಬ್ಬರು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವೀಂದ್ರ ಮೈಥಾನಿ ಅವರು, ಈ ಸಂಬಂಧ ರಾವತ್ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಡೆಹ್ರಾಡೂನ್ ಸಿಬಿಐ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ:ಭಾರತೀಯ ವಾಯುಪಡೆಗೆ ಆನೆಬಲ: ನ.5ರಂದು ಮತ್ತೆ ಮೂರು ರಫೇಲ್​ ಯುದ್ಧವಿಮಾನ
ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಆರೋಪಗಳ ಸ್ವರೂಪವನ್ನು ಪರಿಗಣಿಸಿ, ಸತ್ಯವನ್ನು ಬಿಚ್ಚಿಡುವುದು ಸೂಕ್ತವೆಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಇದು ರಾಜ್ಯದ ಹಿತದೃಷ್ಟಿಯಿಂದ ಮತ್ತು ಅನುಮಾನಗಳನ್ನು ನಿವಾರಿಸಲು ತನಿಖೆ ಅಗತ್ಯ ಇದೆ. ಹೀಗಾಗಿ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸುತ್ತದೆ ಎಂದು ನ್ಯಾಯಮೂರ್ತಿ ಮೈಥಾನಿ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿಗಳನ್ನು ಟೀಕಿಸಿದ್ದಕ್ಕಾಗಿ ಇಬ್ಬರು ಪತ್ರಕರ್ತರ ಮೇಲೆ ಎಫ್​ಐಆರ್​ ದಾಖಲಾಗಿತ್ತು. ಪತ್ರಕರ್ತರಾದ ಉಮೇಶ್ ಶರ್ಮಾ ಮತ್ತು ಶಿವ ಪ್ರಸಾದ್ ಅವರು ಇದರ ರದ್ದತಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಪತ್ರಕರ್ತರ ವಿರುದ್ಧದ ಎಫ್​ಐಆರ್​ ರದ್ದು ಮಾಡಿರುವ ನ್ಯಾಯಮೂರ್ತಿಗಳು, “ಸರ್ಕಾರವನ್ನು ಟೀಕಿಸುವುದು ಎಂದಿಗೂ ದೇಶದ್ರೋಹವಾಗಲಾರದು. ಸಾರ್ವಜನಿಕ ಅಧಿಕಾರಿಗಳನ್ನು ಟೀಕಿಸದಿದ್ದರೆ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವನ್ನು ಯಾವಾಗಲೂ ಗೌರವಿಸಲಾಗುತ್ತದೆ ಮತ್ತು ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ಕೋವಿಡ್​ಮುಕ್ತ ಈ ಗ್ರಾಮದಲ್ಲಿ 87 ರೂಪಾಯಿಗೆ ಸಿಗುತ್ತೆ ಮನೆ!

ಮಲಗಿದ್ದ ಅಧಿಕಾರಿಗಳ ಬಡಿದೆಬ್ಬಿಸಿದ ಬಾಲಕಿ! ಹದಗೆಟ್ಟ ರಸ್ತೆಯ ರಿಪೇರಿ ಮಾಡಿಸಿದ್ದೇ ರೋಚಕ…

ಸೌದಿಯಿಂದ ಭಾರತಕ್ಕೆ ಅಬ್ಬಾ ಎನ್ನುವಷ್ಟು ಭರ್ಜರಿ ಗಿಫ್ಟ್​​… ನಲುಗಿ ಹೋದ ಪಾಕಿಸ್ತಾನ!

ಮನೆಗೆಲಸದವರು ಬೇಕಾಗಿದ್ದಾರೆ… ಸಂಬಳ ₹18.5 ಲಕ್ಷ, ಊಟ, ವಸತಿ ಫ್ರೀ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + fifteen =
Remember me
