ಗುಹಾವಟಿ:ಅಸ್ಸಾಂ ಎಂದರೆ ನೆನಪಾಗುವುದು ಚಹ. ಬಗೆಬಗೆ ರೂಪದ ಚಹಗಳಿಗೆ ಅಸ್ಸಾಂ ಪ್ರಸಿದ್ಧಿ ಪಡೆದಿದೆ. ಇವುಗಳಲ್ಲಿ ಬಲು ಟೇಸ್ಟಿ ಟೇಸ್ಟಿ ಎನಿಸಿರುವ, ಸಾಮಾನ್ಯ ಜನರಿಗೆ ಎಟುಕಟ ಚಹವೆಂದರೆ ಅದೇ ಮನೋಹರಿ ಗೋಲ್ಡ್​ ಟೀ. ಇಲ್ಲಿಯವರೆಗೆ ಕೆ.ಜಿ.ಗೆ 75 ಸಾವಿರ ರೂಪಾಯಿಗಳಂತೆ ಮಾರಾಟವಾಗುತ್ತಿದ್ದ ಈ ಟೀಪುಡಿ ಇಂದು 99,999 ರೂಪಾಯಿಗೆ ಮಾರಾಟವಾಗಿದೆ!
ಅತ್ಯಂತ ಸ್ವಾದಿಷ್ಟ ಭರಿತ ಚಹಾಪುಡಿಯೆಂದೇ ಪ್ರಸಿದ್ಧಿ ಪಡೆದಿರುವ ಮನೋಹರಿ ತನ್ನ ದಾಖಲೆಯನ್ನು ತಾನೇ ಮುರಿದಿದೆ. ಚಹಾಪುಡಿಯನ್ನು 75 ಸಾವಿರ ರೂಪಾಯಿ ಈ ಮೊದಲು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿಸಿತ್ತು. ಇದೀಗ ಸೌರವ್​ ಟೀ ಟ್ರೇಡರ್ಸ್​ ಎಂಬ ಕಂಪನಿ 99,999ರೂ ಗೆ ಬಿಡ್‌ ಮಾಡಿ ಇದನ್ನು ಖರೀದಿಸಿದೆ.​ ಈ ಮೂಲಕ ವಿಶ್ವದ ಅತ್ಯಂತ ದುಬಾರಿ ಟೀ ಪೌಡರ್‌ ಎಂದು ಪ್ರಸಿದ್ಧಿ ಗಳಿಸಿದೆ.
ಆನ್‌ಲೈನ್‌ ಮೂಲಕ ವಿದೇಶಗಳಿಗೂ ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಮಾರಾಟವಾಗುತ್ತಿದ್ದು, ವಿದೇಶಿಗರು ಮುಗಿಬಿದ್ದು ಇದನ್ನು ಖರೀದಿ ಮಾಡುತ್ತಿದ್ದಾರೆ. ಅಲ್ಲಿ ಇದಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ.ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಎಳೆಯ ಎಲೆಗಳಿಂದ ಉತ್ಕೃಷ್ಟ ರೀತಿಯಲ್ಲಿ ತಯಾರಿಸಲಾಗುತ್ತದೆ. ಈ ಮಾದರಿಯ ಟೀ ಎಲೆಗಳು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೊರೆಯುತ್ತದೆ. ಆಗ ಕೀಳುವ ಎಳೆಯ ಎಲೆಯಿಂದ ಇದನ್ನು ತಯಾರು ಮಾಡಲಾಗುತ್ತದೆ.
ನೋಟ್‌ಗಳ ಮೇಲೆ ನೇತಾಜಿ ಚಿತ್ರ ಯಾಕೆ ಪ್ರಿಂಟ್‌ ಮಾಡಬಾರದು? ಕೇಂದ್ರದ ನಿಲುವು ಕೇಳಿದ ಹೈಕೋರ್ಟ್‌

ಕಿಸ್‌ ಕೊಟ್ಟು ಇಡಿ ಬಲೆಗೆ ಬಿದ್ದ ನಟಿ ಜಾಕ್ವೆಲಿನ್‌: ಜಯಲಲಿತಾ, ಅಮಿತ್‌ ಷಾ ಹೆಸರು ಕೇಳಿ ಸಿಕ್ಕಾಕ್ಕೊಂಡ ಮೋಹಕ ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
