ರೋಮ್:ವಿಲಾಸಿ ಜೀವನ ನಡೆಸುವ ಮನಸ್ಸು, ತಾಕತ್ತು ಹೊಂದಿರುವವರು ಸದಾ ಐಷಾರಾಮಿ ವಸ್ತುಗಳ ಶೋಧನೆಯಲ್ಲಿಯೇ ತೊಡಗಿರುತ್ತಾರೆ. ಅಂಥದ್ದೇ ಒಂದು ಐಷಾರಾಮಿ ಸಾಲಿಗೆ ಇದೀಗ ಹ್ಯಾಂಡ್​ಬ್ಯಾಗ್​ ಸೇರ್ಪಡೆಗೊಂಡಿದೆ. ​
ಇಟಲಿಯ ಬೊರೀನಿ ಮಿಲನಿಸಿ ಸಂಸ್ಥೆ ವಿಶ್ವದ ಈ ಹ್ಯಾಂಡ್ ಬ್ಯಾಗ್ ಪರಿಚಯಿಸಿದೆ. ಐಷಾರಾಮಿ ವಸ್ತುಗಳ ಬ್ರಾಂಡ್ ಆಗಿರುವ ಬೊರೀನಿ ಮಿಲನಿಸಿ ಇಟಲಿಯ ಬೊಲಗ್ನಾ ಪ್ರದೇಶದ್ದು. ಅದೀಗ ಮೂರು ಹ್ಯಾಂಡ್​ಬ್ಯಾಗ್​ ತಯಾರಿಸಿದ್ದು, ಇದೀಗ ವಿಶ್ವದ ದುಬಾರಿ ಹ್ಯಾಂಡ್​ಬ್ಯಾಗ್​ ಎನಿಸಿದೆ.
ಬೊರೀನಿ ಮಿಲನಿಸಿ ಸಂಸ್ಥೆಯ ಸಹ-ಸಂಸ್ಥಾಪಕ ಮಾಟಿಯೊ ರೋಡಾಲ್ಫೊ ಮಿಲನಿಸಿ ತಮ್ಮ ತಂದೆಯ ನೆನಪಿನ ಗೌರವಾರ್ಥವಾಗಿ ಇದನ್ನು ಸಮರ್ಪಿಸಿದ್ದಾರೆ. 2016ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಐಷಾರಾಮಿ ವಸ್ತುಗಳನ್ನು ಉತ್ಪಾದಿಸುವಲ್ಲಿ ಇದರದ್ದು ಎತ್ತಿದ ಕೈ.
ಅಂದಹಾಗೆ ಇದರ ಬೆಲೆ 6 ಮಿಲಿಯನ್ ಯೂರೋ (ಅಂದರೆ ಸುಮಾರು 53 ಕೋಟಿ ರೂಪಾಯಿಗಳು)!
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಈಗಿನ ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್ ಮೌವಾಡ್ ಆಗಿದ್ದು, ಇದು ಹೃದಯದಾಕಾರದಲ್ಲಿದೆ. 1001 ನೈಟ್ಸ್ ಡೈಮಂಡ್ ಪರ್ಸ್, 18 ಕ್ಯಾರೆಟ್ ಚಿನ್ನದಿಂದ ಇದನ್ನು ಮಾಡಲಾಗಿದೆ. 4,517 ವಜ್ರಗಳನ್ನು ಹೊಂದಿದೆ. ಆದರೆ ಈಗ ತಯಾರಾಗಿರುವ ಪರ್ವಾ ಮಿ ಎಂಬ ಹೆಸರಿನ ಈ ಬ್ಯಾಗ್​ ದಾಖಲೆಯನ್ನು ಮುರಿದಿದೆ.
ಪ್ಲಾಸ್ಟಿಕ್‍ನಿಂದ ಮಲಿನವಾಗುತ್ತಿರುವ ಸಮುದ್ರವನ್ನು ರಕ್ಷಿಸಬೇಕಿದ್ದು, ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಬ್ಯಾಗ್ ತಯಾರಿಸಲಾಗಿದೆ. ಈ ಪೈಕಿ 800 ಸಾವಿರ ಯೂರೋಗಳನ್ನು ಸಮುದ್ರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ದಾನ ನೀಡಲಾಗುತ್ತಿದೆ ಎಂದು ಸಂಸ್ಥೆ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹೇಳಿಕೊಂಡಿದೆ.
ಪ್ರತಿ ಬ್ಯಾಗ್ ತಯಾರಿಸಲು 1 ಸಾವಿರ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದಿರುವ ಸಂಸ್ಥೆ ಈಗ ಸದ್ಯ ಮೂರನ್ನು ಮಾತ್ರ ತಯಾರು ಮಾಡಿದೆ. ಬ್ಯಾಗ್ ಮಾರಾಟದಿಂದ ಬಂದ ಆದಾಯದಲ್ಲಿ ಒಂದು ಭಾಗವನ್ನು ಸಮುದ್ರ ಸ್ವಚ್ಛಗೊಳಿಸುವ ಕಾರ್ಯಕ್ಕೆ ದಾನವಾಗಿ ನೀಡಲಾಗುವುದು ಸಂಸ್ಥೆ ಹೇಳಿದೆ.
ಅಷ್ಟಕ್ಕೂ ಇದರ ವಿಶೇಷತೆಗಳು ಏನು ಗೊತ್ತಾ?ಬ್ಯಾಗ್ ಸೆಮಿ ಶೈನಿ ಅಲಿಗೇಟರ್ ಹೊದಿಕೆ ಹೊಂದಿದ್ದು, 10 ಬಿಳಿ ಚಿನ್ನದ ಚಿಟ್ಟೆಗಳು ಹಾಗೂ ವಜ್ರದ ಕೊಕ್ಕೆಗಳಿಂದ ಬ್ಯಾಗ್ ಮೇಲ್ಭಾಗದಲ್ಲಿ ಅಲಂಕರಿಸಲಾಗಿದೆ. 10 ಚಿಟ್ಟೆಗಳಲ್ಲಿ ನಾಲ್ಕು ವಜ್ರ ಹಾಗೂ ಮೂರು ನೀಲಮಣಿ ಹಾಗೂ ಅಪರೂಪದ ಪ್ಯಾರೆಬಾ ಟೂರ್​ಮ್ಯಾಲೈನ್‍ಗಳಿಂದ ಅಲಂಕರಿಸಲಾಗಿದೆ. ಸಮುದ್ರದಿಂದ ಪ್ರೇರಿತಗೊಂಡು ನೀಲಿ ಬಣ್ಣದಲ್ಲಿ ಚೀಲವನ್ನು ವಿನ್ಯಾಸ ಮಾಡಲಾಗಿದ್ದು, ಕಲ್ಲುಗಳ ಆಕಾರದ ಡಿಸೈನ್ ಮಾಡಲಾಗಿದೆ.
ಬ್ಯಾಗ್ ವಿನ್ಯಾಸಕರಾದ ಕೊರಾಲಿನಾ ಬೊರೀನಿ ಈ ಕುರಿತು ಮಾಹಿತಿ ನೀಡಿ, ನೀಲಮಣಿಗಳು ಸಾಗರದ ಆಳವನ್ನು ಪ್ರತಿನಿಧಿಸುತ್ತವೆ. ಪ್ಯಾರೆಬಾ ಟೂರ್​ಮ್ಯಾಲೈನ್‍ ಅಸಂಖ್ಯಾತ ಕೆರಿಬಿಯನ್ ಸಮುದ್ರಗಳನ್ನು ನೆನಪಿಸುತ್ತವೆ. ಅಲ್ಲದೆ ವಜ್ರಗಳು ನೀರಿನ ಪಾರದರ್ಶಕತೆಯನ್ನು ಬಿಂಬಿಸುತ್ತವೆ ಎಂದು ವಿವರಿಸಿದ್ದಾರೆ.
ಬ್ಯಾಗನ್ನು ಕಣ್ತುಂಬಿಸಿಕೊಳ್ಳಲು ಈ ಲಿಂಕ್​ ಕ್ಲಿಕ್​ ಮಾಡಿ:
https://www.instagram.com/p/CIDwFxZqM77/?utm_source=ig_web_button_share_sheet
ಅಮ್ಮಾ ಗ್ಯಾಂಗ್​ರೇಪ್​ ಆಯ್ತು ಎಂದ್ಳು 14ರ ಬಾಲೆ: ಸತ್ಯ ಗೊತ್ತಾಗಿ ಮೂರ್ಛೆಹೋದ ಪಾಲಕರು!

ಕಚೇರಿಯಲ್ಲಿಯೇ ಕಿಸ್​ ಕೊಟ್ಟು ಕೆಲಸ ಕಳೆದುಕೊಂಡ ಕೊಪ್ಪಳ ತಹಶೀಲ್ದಾರ್​!

ರೇಪ್​ ಮಾಡಿದ್ರೆ ಪುರುಷತ್ವವೇ ಹರಣ- ಪಾಕ್​ ಸಚಿವಸಂಪುಟದಿಂದ ಗ್ರೀನ್​ ಸಿಗ್ನಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
