ಕೊಟ್ವಾಲಿ (ಪಶ್ಚಿಮ ಬಂಗಾಳ):ಫೇಸ್‌ಬುಕ್‌ನಿಂದ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ಸಿಲುಕಿ ಬಾಲಕನ ಜತೆ ಯುವತಿ ಓಡಿಹೋಗಿರುವ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.
ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15 ವರ್ಷದ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಇವರಿಬ್ಬರೂ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು. ನಂತರ ಮಾತುಕತೆಯ ವೇಳೆ ಪರಸ್ಪರ ಲವ್‌ ಆಗಿದೆ. ಮನೆಯವರಿಗೆ ತಿಳಿಸಿದರೆ ಖಂಡಿತ ಮದುವೆಗೆ ಒಪ್ಪುವುದಿಲ್ಲ ಎಂದುಕೊಂಡು ಇಬ್ಬರೂ ಉತ್ತರ ಪ್ರದೇಶಕ್ಕೆ ಹೋಗುವ ಯೋಜನೆ ರೂಪಿಸಿದ್ದಾರೆ. ಅದರಂತೆ ಇದೇ 25ರಂದು ಮನೆಯಿಂದ ಓಡಿ ಹೋಗಿರುವ ಇವರು ಮದುವೆಯನ್ನೂ ಮಾಡಿಕೊಂಡಿದ್ದಾರೆ.
ಮದುವೆಯ ನಂತರ ವಾಪಸಾಗುತ್ತಿದ್ದ ವೇಳೆ ಅವರಿಬ್ಬರೂ ಮದುವೆ, ಓಡಿಹೋದ ಬಗ್ಗೆ ಪರಸ್ಪರ ರೈಲಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿಸಿಕೊಂಡ ಅಕ್ಕಪಕ್ಕದವರಿಗೆ ಸಂದೇಹ ಬಂದಿದೆ. ಹುಡುಗ ಇನ್ನೂ ತೀರಾ ಚಿಕ್ಕವನಂತೆ ಕಾಣುತ್ತಿದ್ದುದರಿಂದ ಅವರಿಗೆ ಈ ಜೋಡಿಯ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಮಾತಿನಲ್ಲಿಯೇ ಅವರಿಬ್ಬರೂ ಮದುವೆಯಾಗಿರುವುದೂ ತಿಳಿದಿದೆ.
ಕೂಡಲೇ ಅವರು ಅನುಮಾನದಿಂದ ಚೈಲ್ಡ್‌ಲೈನ್​ಗೆ ಮಾಹಿತಿ ನೀಡಿದ್ದಾರೆ. ಅದಾಗಲೇ ಇಬ್ಬರೂ ಕಾಣೆಯಾಗಿರುವ ಬಗ್ಗೆ ಪಾಲಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕ 10ನೇ ತರಗತಿ ಓದುತ್ತಿದ್ದರು, ಯುವತಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ.
ವೈದ್ಯಯಾಗುವ ಕನಸು ಕಂಡೆ… ಈಗ ಯಾರಿಗೂ ಮುಖ ತೋರಿಸಲಾರೆ ಎಂದು ನೇಣಿಗೆ ಶರಣಾದ ಎಂಬಿಬಿಎಸ್‌ ವಿದ್ಯಾರ್ಥಿನಿ

ಸಮಾಧಿ ಮುಂದೆ ನಿಂತು ಅಳುತ್ತ ಪಿಟಿಲು ನುಡಿಸುತ್ತಿರೋ ಈ ಬಾಲಕ ಯಾರು? ವೈರಲ್‌ ಚಿತ್ರದ ಹಿಂದಿನ ಕಣ್ಣೀರ ಕಥೆಯಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + one =
Remember me
