ಪ್ಯಾರಿಸ್:ಬೆಕ್ಕು ಹಾಗೂ ಹುಲಿ ಮರಿಗಳು ನೋಡಲು ಒಂದೇ ತೆರನಾಗಿರುತ್ತವೆ. ಹಾಗೆಂದು ಬೆಕ್ಕನ್ನು ಸಾಕುವ ಎಂದು ಅದನ್ನು ಖರೀದಿಸಿದಾಗ, ಅದು ಹುಲಿಮರಿಯೆಂದು ಗೊತ್ತಾದರೆ ಹೇಗಿರುತ್ತೆ?
ಅಂಥದ್ದೇ ಒಂದು ಘಟನೆ ಪ್ಯಾರೀಸ್​ನಲ್ಲಿ ನಡೆದಿದೆ. ಇಲ್ಲಿಯ ನಾರ್ಮಂಡಿಯ ಬಂದರು ನಗರವಾದ ಲೆ ಹ್ಯಾವ್ರೆ ದಂಪತಿ ಆನ್‌ಲೈನ್​ನಲ್ಲಿ ಬೆಕ್ಕಿನ ಜಾಹೀರಾತು ನೋಡಿದ್ದಾರೆ. ಸವನ್ನಾ ಎಂಬ ತಳಿಯ ವಿಶೇಷ ಬೆಕ್ಕು ಇದು.
ಈ ಬೆಕ್ಕಿನ ಮುದ್ದುಮುದ್ದು ಮುಖ ನೋಡಿದ ದಂಪತಿ ಬೆಕ್ಕನ್ನು ಖರೀದಿಸಲು ಮುಂದಾಗಿದ್ದಾರೆ. ಅದರ ಆಫ್ರಿಕನ್​ ತಳಿಯ ಬೆಕ್ಕು ಮತ್ತು ಸಾಮಾನ್ಯ ಬೆಕ್ಕುಗಳನ್ನು ಸೇರಿಸಿ ಪಡೆಯುವ ಬೆಕ್ಕು ಸವನ್ನಾ ತಳಿ. ಆದ್ದರಿಂದ ಇದಕ್ಕೆ ವಿಶೇಷ ಬೇಡಿಕೆ ಇದೆ. ನೋಡಲು ಕೂಡ ಸಾಮಾನ್ಯ ಬೆಕ್ಕುಗಳಿಗಿಂತ ಮುದ್ದುಮುದ್ದಾಗಿರುತ್ತದೆ, ಜತೆಗೆ ಅಷ್ಟೇ ಚುರುಕು ಕೂಡ. ಇದರ ವಿಶೇಷತೆಗೆ ಬೆಕ್ಕಬೆರಗಾದರು ಈ ಸಿರಿವಂತ ದಂಪತಿ.
ಆನ್​ಲೈನ್​ನಲ್ಲಿ ಜಾಹೀರಾತನ್ನು ನೋಡಿದ ನಂತರ ಸವನ್ನಾ ಬೆಕ್ಕನ್ನು ಪಡೆಯಲು ಬಯಸಿದ್ದರು. ನಂತರ ಈ ತಳಿಯ ಬೆಕ್ಕಿನ ಹುಡುಕಾಟ ನಡೆಸಿದಾಗ ಕೊನೆಗೂ ಅವರಿಗೆ ಇದು ಸಿಕ್ಕಿದೆ. ಇದರ ಬೆಲೆ 6 ಸಾವಿರ ಯೂರೋ. ಅಂದರೆ ಸುಮಾರು 5.17 ಲಕ್ಷ ರೂಪಾಯಿ!
ಇಷ್ಟೊಂದು ದುಬಾರಿ ಹಣವನ್ನು ಕೊಟ್ಟು, ಬೆಕ್ಕನ್ನು ಖರೀದಿಸಿದ ದಂಪತಿ ಅದನ್ನು ಚೆನ್ನಾಗಿ ಸಾಕುತ್ತಿದ್ದರು ಕೂಡ. ಆದರೆ ಒಂದು ವಾರ ಕಳೆಯುವಷ್ಟರಲ್ಲಿಯೇ ಇದರ ವರ್ತನೆ ನೋಡಿ ದಂಪತಿಗೆ ಏನೋ ಸಂದೇಹ ಬಂದಿದೆ. ಇದು ಬೆಕ್ಕಿನ ರೀತಿ ಇಲ್ಲ ಬದಲಿಗೆ ಹುಲಿಯ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಂಡುಬಂದಿದೆ.
ಇದನ್ನೂ ಓದಿ:ತೆರೆದೆದೆಯಲ್ಲಿ ವಿಮಾನವೇರಿದ ಯುವತಿ: ಷರ್ಟ್​ ನೀಡಿದ ಪೈಲಟ್​- ಲಲನೆಯ ರಂಪಾಟ!
ಆದರೆ ಮೊದಮೊದಲು ಇದು ವಿಶೇಷ ತಳಿಯ ಬೆಕ್ಕಾಗಿರುವ ಕಾರಣ, ಅದರಲ್ಲಿ ಈ ರೀತಿಯ ವರ್ತನೆ ಇರಬಹುದು ಎಂದುಕೊಂಡಿದ್ದಾರೆ. ಆದರೆ ಅವರ ಸಂದೇಹ ಬಲವಾಗುತ್ತಾ ಹೋಗಿದೆ. ನಂತರ ತಮ್ಮ ಮನೆಯಲ್ಲಿರುವ ಪ್ರಾಣಿಯ ವರ್ತನೆ ಕುರಿತು ಜಾಲತಾಣಗಳಲ್ಲಿ ಹುಡುಕಾಡಿದಾಗ ಅವರಿಗೆ ಇದು ಸುಮಾತ್ರನ್​ ತಳಿಯ ಹುಲಿಮರಿ ಎಂದು ತಿಳಿದಿದೆ.
ದಿಗಿಲುಗೊಂಡ ದಂಪತಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಂದೆಡೆ ತಮ್ಮ ಮನೆಯಲ್ಲಿ ಇರುವುದು ಹುಲಿಮರಿ ಎನ್ನುವ ಭಯವಾದರೆ, ಇನ್ನೊಂದೆಡೆ, ಇದನ್ನು ಮನೆಯಲ್ಲಿ ಸಾಕುವುದು ಭಾರಿ ಅಪರಾಧ. ಆದ್ದರಿಂದ ಹೆದರಿದ ದಂಪತಿ ಕೂಡಲೇ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಇದರ ಬೆನ್ನಟ್ಟಿ ಹೋದ ಪೊಲೀಸರಿಗೆ ಈ ಹುಲಿಮರಿಯನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುವ ದೊಡ್ಡ ಜಾಲವೇ ಪತ್ತೆಯಾಯಿತು. ನಂತರ ಈ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಒಟ್ಟಿನಲ್ಲಿ ಬೆಕ್ಕಿನ ಮರಿಯೆಂದು ಹುಲಿಮರಿ ತಂದ ದಂಪತಿ ಮಾತ್ರ ಇನ್ನೆಂದೂ ಬೆಕ್ಕಿನ ಗೋಜಿಗೆ ಹೋಗುವಂತೆ ತೋರುತ್ತಿಲ್ಲ.
ನಾಳೆಯಿಂದ ಮೂರು ವಾರ ಶಾಲೆಗಳಿಗೆ ರಜೆ ಘೋಷಣೆ

18 ವರ್ಷದ ಯುವತಿ ಭಾರತದಲ್ಲಿ ಬ್ರಿಟಿಷ್ ಹೈಕಮಿಷನರ್!

ದೇಶವನ್ನೇ ಬೆಚ್ಚಿಬೀಳಿಸಿದ್ದ ದಿಶಾ ರೇಪ್​ ಕೇಸ್​ ಕುರಿತು ಚಲನಚಿತ್ರ: ಬಿಡುಗಡೆಗೆ ತಡೆ ಕೋರಿ ದಿಶಾ ತಂದೆ ಕೋರ್ಟ್​ಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − two =
Remember me
