ಅಹಮದಾಬಾದ್​ (ಗುಜರಾತ್​):ಪೊಲೀಸರಿಗೆ ಅವರ ಸಮವಸ್ತ್ರದ ಭಾಗವಾಗಿರುವ ಬೆಲ್ಟ್​ ಮತ್ತು ಕ್ಯಾಪ್​ ಇದ್ದರೇನೇ ಗೌರವ. ಪೊಲೀಸ್​ ಎಂದು ಗುರುತಿಸಿಕೊಳ್ಳುವುದು ಇವುಗಳ ಮೂಲಕವಾಗಿಯೇ. ಆದರೆ ಕೋರ್ಟ್​ ಮಾತನ್ನು ಕೇಳದ ಪೊಲೀಸರಿಗೆ ಬೆಲ್ಟ್​, ಕ್ಯಾಪ್​ ತೆಗೆಸಿ ಆರೋಪಿಗಳ ಜತೆಯೇ ಕೋರ್ಟ್​ನಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ ಗುಜರಾತ್​ನ ಮಿರ್ಜಾಪುರದ ಅಹಮದಾಬಾದ್ ಗ್ರಾಮಾಂತರ ಕೋರ್ಟ್​!
ಸಾಮಾನ್ಯವಾಗಿ ಎಲ್ಲಾ ಕೋರ್ಟ್​ಗಳಲ್ಲಿ ಆರೋಪಿಗಳನ್ನು ಹಾಜರುಪಡಿಸಿದಾಗ ಅವರನ್ನು ಕೊನೆಯ ಸಾಲಿನಲ್ಲಿ ಕುಳ್ಳರಿಸಲಾಗುತ್ತದೆ. ಅದರಂತೆ ಕೋರ್ಟ್​ ಆ ಆರೋಪಿಗಳ ಜತೆಗೆ ಪೊಲೀಸರನ್ನು ಕೆಲವು ಗಂಟೆಗಳ ಕಾಲ ಕೋರ್ಟ್​ನಲ್ಲಿ ಕುಳ್ಳರಿಸಿದೆ.
ಆಗಿದ್ದೇನೆಂದರೆ, ಕೆಲವೊಂದು ಕ್ರಿಮಿನಲ್​ ಪ್ರಕರಣಗಳಲ್ಲಿ ಪೊಲೀಸರಿಗೆ ಕೋರ್ಟ್​ ಸಮನ್ಸ್​ ಜಾರಿ ಮಾಡುತ್ತದೆ. ಅದರಂತೆಯೇ ಈ ಕೋರ್ಟ್​ನಿಂದಲೂ ಕೆಲವು ಪೊಲೀಸರಿಗೆ ಸಮನ್ಸ್​ ಜಾರಿ ಮಾಡಲಾಗಿತ್ತು. ಅವರು ಕೋರ್ಟ್​ ಹೇಳಿದ ದಿನ ಹಾಜರು ಆಗಿ ಕೇಸ್​ ನಡೆಯುತ್ತಿರುವಾಗ ತಮ್ಮ ಉತ್ತರವನ್ನು ಹೇಳಬೇಕಿತ್ತು. ಆದರೆ ಕೆಲವು ಪ್ರಕರಣಗಳಲ್ಲಿ ಪೊಲೀಸರು ಗೈರಾಗುತ್ತಿದ್ದರು. ಪದೇ ಪದೇ ಕೋರ್ಟ್​ನಿಂದ ಸಮನ್ಸ್​ ಜಾರಿಯಾದರೂ ಅದನ್ನು ಪೊಲೀಸರು ನಿರ್ಲಕ್ಷಿಸಿದ್ದರು. ಈ ಕಾರಣದಿಂದ ವಿಚಾರಣೆ ಪ್ರತಿ ಬಾರಿಯೂ ಅನಿವಾರ್ಯವಾಗಿ ಮುಂದಕ್ಕೆ ಹಾಕಬೇಕಿತ್ತು. ಇದರಿಂದಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ವಿಳಂಬವಾಗುತ್ತಿತ್ತು.
ಇದನ್ನು ಕೋರ್ಟ್​ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಕೋರ್ಟ್​ ಆದೇಶವನ್ನು ಪಾಲನೆ ಮಾಡುವುದನ್ನು ಬಿಟ್ಟು ಕೆಲವು ಪೊಲೀಸರು ದುರ್ವರ್ತನೆ ತೋರುತ್ತಿದ್ದಾರೆ ಎನ್ನುವ ಕಾರಣಕ್ಕೆ ಇಂಥದ್ದೊಂದು ಶಿಕ್ಷೆಯನ್ನು ನೀಡಿದೆ. ರೂಪಾಲಿ ಚೌಕಿಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜೆ ಡಿ ಪಟೇಲ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್​ ಸಮನ್ಸ್ ಜಾರಿ ಮಾಡಿತ್ತು. ಆದರೆ ಅವರು ಹಾಜರು ಆಗಿರಲಿಲ್ಲ. ಪದೇ ಪದೇ ಹೀಗೆ ಮಾಡಿದಾಗ ಕೋರ್ಟ್​ ಅವರ ವಿರುದ್ಧ ವಾರೆಂಟ್​ ಹೊರಡಿಸಿತ್ತು. ಎರಡು ದಿನಗಳ ನಂತರ ಅವರು ಕೋರ್ಟ್​ಗೆ ಹಾಜರಾದರು.
ಇದು ನ್ಯಾಯಾಧೀಶರಿಗೆ ಕೋಪ ತರಿಸಿತು. ಹಿಂದೆ ಕೂಡ ಕೆಲ ಪ್ರಕರಣಗಳಲ್ಲಿ ಇದೇ ರೀತಿ ಆಗಿರುವುದು ಅವರ ಗಮನಕ್ಕೆ ಬಂತು. ಆದ್ದರಿಂದ ಪೊಲೀಸ್​ ಇನ್ಸ್​ಪೆಕ್ಟರ್​ ಪಟೇಲ್​ ಸೇರಿದಂತೆ ನಾಲ್ವರು ಪೊಲೀಸರ ಕ್ಯಾಪ್​ ಮತ್ತು ಬೆಲ್ಟ್​ ತೆಗೆಸಿ ಆರೋಪಿಗಳ ಜತೆ ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಶಿಕ್ಷೆ ನೀಡಿದರು.
ಈ ಶಿಕ್ಷೆ ಇತರ ಪೊಲೀಸರಿಗೂ ಮಾದರಿಯಾಗಬೇಕಿದೆ ಎಂದು ಕೋರ್ಟ್​ ಹೇಳಿದೆ. ಈ ಘಟನೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪರ- ವಿರೋಧಗಳ ಪ್ರತಿಕ್ರಿಯೆ ಬರುತ್ತಿವೆ(ಏಜೆನ್ಸೀಸ್​)
ತ್ರಿವಳಿ ತಲಾಖ್​, ಲೈಂಗಿಕ ದೌರ್ಜನ್ಯದಂಥ ಐತಿಹಾಸಿಕ ತೀರ್ಪು ನೀಡಿದ ನ್ಯಾ.ಲಲಿತ್​ ಮುಂದಿನ ಸಿಜೆಐ?
ಶಾಸಕನ ಹುಟ್ಟುಹಬ್ಬಕ್ಕೆ ಯುವತಿಯರ ಅಶ್ಲೀಲ ನೃತ್ಯ: ಮಧ್ಯರಾತ್ರಿ ಗಲಾಟೆಯಾದರೂ ಪೊಲೀಸರು ಗಪ್​ಚುಪ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
