ಪಾಲಕ್ಕಾಡ್‌ (ಕೇರಳ):ಪ್ರೇಮಿಯೊಂದಿಗೆ ಓಡಿಹೋದ ವಿವಾಹಿತೆಯೊಬ್ಬಳು ಪೊಲೀಸರಿಗೆ ಶರಣಾಗಿ ನಂತರ ತನ್ನ ಕಥೆಯನ್ನು ಬಿಚ್ಚಿಟ್ಟ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.
ಕೇರಳದ ಪಾಲಕ್ಕಾಡಿನ ಪಾಲ ಪೂವಕುಳಂ ಎಂಬ ಊರಿನ 22 ವರ್ಷದ ಗೃಹಿಣಿ ಕಥೆ ಇದಾಗಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದಾಗ ಪೊಲೀಸರಿಗೆ ಬಂದು ಶರಣಾಗಿದ್ದಾಳೆ. ನಂತರ ಕುಡುಕ ಗಂಡನ ಜತೆ ಬಾಳಲು ಸಾಧ್ಯವಿರಲಿಲ್ಲ, ಆದ್ದರಿಂದ ಲವರ್‌ ಜತೆ ಓಡಿಹೋದೆ ಎಂಬ ಹೇಳಿಕೆ ನೀಡಿದ್ದಾಳೆ.
ಗಂಡ ವಿಪರೀತ ಪಾನ್‌ ಪರಾಗ್ ಹಾಗೂ ಮದ್ಯ ಸೇವನೆ ಮಾಡುತ್ತಿದ್ದ ಕಾರಣ ಆತನೊಂದಿಗೆ ಬಾಳ್ವೆ ಮಾಡುವುದು ಕಷ್ಟವಾಯಿತು. ವಿಪರೀತವಾಗಿ ಗುಟ್ಕಾ ತಿನ್ನುತ್ತ, ಮದ್ಯ ಸೇವನೆ ಮಾಡುತ್ತಾ ಹಿಂಸೆ ನೀಡುತ್ತಿದ್ದ. ದೌರ್ಜನ್ಯ ಸಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಓಡಿಹೋಗಿದ್ದಾಗಿ ಹೇಳಿಕೆ ನೀಡಿದ್ದಾಳೆ. ಆದರೆ ಗಂಡ ಹೇಳುವುದೇ ಬೇರೆ ಕಥೆ. ಫೇಸ್‌ಬುಕ್‌ನಲ್ಲಿ ತನ್ನ ಹೆಂಡತಿಗೆ ಪಾಲಕ್ಕಾಡ್‌ನ ಮನ್ನಾಡ್‌ಕಾಡ್‌ನ ನಿವಾಸಿಯೊಬ್ಬನ ಪರಿಚಯವಾಗಿದ್ದು, ಆತನೊಟ್ಟಿಗೆ ಸಲುಗೆ ಬೆಳೆಸಿಕೊಂಡಿದ್ದಳು. ದಿನವೂ ಅವರ ಸರಸ ಸಲ್ಲಾಪ ಫೋನ್‌ನಲ್ಲಿಯೇ ನಡೆಯುತ್ತಿತ್ತು. ನಂತರ ನಸುಕಿನ 4 ಗಂಟೆ ಎದ್ದು ಪರಾರಿಯಾಗಿದ್ದಾಳೆ. ಈಕೆಯ ಪ್ರಿಯಕರ ಗೇಟ್‌ ಬಳಿ ಕಾಯುತ್ತಿದ್ದ ಎಂದಿದ್ದಾನೆ.
ಇವಳಿಗೆ ಅನೈತಿಕ ಸಂಬಂಧ ಇರುವುದು ತಿಳಿದಿತ್ತು. ಇದೇ ಕಾರಣಕ್ಕೆ ಆಕೆಯ ಫೋನ್ ಕಸಿದುಕೊಂಡು ಸಿಮ್‌ ನಾಶ ಮಾಡಿದ್ದೆ. ಪ್ರಿಯಕರನೊಂದಿಗೆ ಓಡಿಹೋಗುವ ವೇಳೆ ಈಕೆ ನನ್ನ ಫೋನ್‌ ಮತ್ತು ಸಿಮ್‌ ತೆಗೆದುಕೊಂಡು ಹೋಗಿದ್ದಾಳೆ ಎಂದಿದ್ದಾನೆ. ಕಾಣೆಯಾದ ಕೂಡಲೇ ಆತ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾನೆ.
ಮೊಬೈಲ್ ಫೋನ್‌ ಅನ್ನು ಟ್ರೇಸ್ ಮಾಡಿದ ಪೊಲೀಸರು ಆತನ ಮಡದಿ ಹಾಗೂ ಆಕೆಯ ಪ್ರಿಯಕರ ಎಲ್ಲಿದ್ದಾರೆ ಎಂದು ಪತ್ತೆ ಮಾಡಿದ್ದಾರೆ. ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಕಾರಣಕ್ಕೆ ನೇರವಾಗಿ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗುವುದಾಗಿ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಿಳೆ ತಿಳಿಸಿದ್ದು, ಕುಡುಕ ಗಂಡನ ಬಗ್ಗೆ ಹೇಳಿಕೆ ನೀಡಿದ್ದಾಳೆ. ಮಾತ್ರವಲ್ಲದೇ, ತನ್ನ ಪ್ರಿಯಕರನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದು, ಆತನೊಂದಿಗೆ ತನ್ನ ಮುಂದಿನ ಜೀವನ ನಡೆಸುತ್ತೇನೆ ಎಂದಿದ್ದಾಳೆ. ವಿಚಾರಣೆ ನಡೆಸಿದ ಕೋರ್ಟ್‌ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು, ದೌರ್ಜನ್ಯ ನಡೆಸುತ್ತಿರುವ ಕಾರಣ ಈ ರೀತಿ ಆಕೆ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬಂದು, ಲವರ್‌ ಜತೆ ಬಾಳಲು ಅನುಮತಿ ನೀಡಿದೆ. ಈ ಆದೇಶದಿಂದ ಗಂಡ ಬೇಸ್ತು ಬಿದ್ದಿದ್ದಾನೆ. ಪತ್ನಿ ಸಿಗದೇ ಮರಳಿದ್ದಾನೆ.
ದಿನವೂ ಕನಸಲ್ಲಿ ಬಂದು ರೇಪ್‌: ಮಹಿಳೆ ದೂರು ಕೇಳಿ ಬೆಚ್ಚಿಬಿದ್ದ ಪೊಲೀಸರು- ಆಗಿದ್ದೇನು?

ಮಂ‍‍ಟಪದಲ್ಲೇ ಮದುಮಗಳ ಮೇಲೆ ಕೈಹಾಕಿದ ವರ- ತಗೀ ಕೈ ಎಂದ ಪುರೋಹಿತರು: ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 7 =
Remember me
