ಶಹಜಹಾನ್ಪುರ (ಉತ್ತರ ಪ್ರದೇಶ):ಇದೀಗ ಎಲ್ಲೆಲ್ಲೂ ಆಕ್ಸಿಜನ್‌ ಮಾತು. ಆಕ್ಸಿಜನ್‌ ಸಿಗದೇ ಎಷ್ಟೋ ಕರೊನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಇದ್ದ ಬಿದ್ದ ಮರಗಿಡಗಳನ್ನೆಲ್ಲಾ ಕಡಿದು ಈಗ ಆಕ್ಸಿಜನ್‌ಗೆ ಪರದಾಡುವ ಸ್ಥಿತಿ ಉಂಟಾಗಿದೆ ಎಂದು ಇದಾಗಲೇ ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಆಸ್ಪತ್ರೆಗಳಿಂದ ಸೋಂಕಿತರು ಡಿಸ್‌ಚಾರ್ಜ್‌ ಆಗುವ ಸಮಯದಲ್ಲಿ ಗಿಡ ನೆಡುವಂತೆ ವೈದ್ಯರು ಹೇಳಿಕಳುಹಿಸುತ್ತಲೂ ಇದ್ದಾರೆ.
ಅದೇನೇ ಇರಲಿ… ಉತ್ತರ ಪ್ರದೇಶದ ಶಹಜಹಾನ್ಪುರದ ಬಹದ್ದೂರ್ಗಂಜ್ ಎಂಬ ಪ್ರದೇಶದಲ್ಲಿ ಮಾತ್ರ ಪಾಸಿಟಿವ್‌ ಬಂದವರೆಲ್ಲರೂ ಆಸ್ಪತ್ರೆಯ ಬದಲು ಅರಳಿ ಮರದ ಕೆಳಗೆ ದೌಡಾಯಿಸುತ್ತಿದ್ದಾರೆ. ಈ ಮರದಿಂದ ಆಕ್ಸಿಜನ್‌ ಚೆನ್ನಾಗಿ ಸಿಗುತ್ತದೆ ಎನ್ನುವ ಕಾರಣಕ್ಕೆ ಇಲ್ಲಿಯ ಜನರು ಈ ಮಾರ್ಗ ಕಂಡುಕೊಂಡಿದ್ದಾರೆ.
ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಇಲ್ಲ ಎಂದೋ, ಕಾಳಸಂತೆಯಲ್ಲಿ ಹಣ ಕೊಟ್ಟು ಆಕ್ಸಿಜನ್‌ ಪಡೆಯಬೇಕು ಎನ್ನುವ ಕಾರಣಕ್ಕೋ ಒಟ್ಟಿನಲ್ಲಿ ಇದೀಗ ಸ್ಥಳೀಯರು ಅರಳಿ ಮರದತ್ತ ಬಿಡಾರ ಬಿಟ್ಟಿದ್ದಾರೆ. ಈ ವಿಷಯ ತಿಳಿಯುತ್ತಲೇ ಶಾಸಕ ರೋಶನ್ಲಾಲ್ ವರ್ಮಾ ಸ್ಥಳಕ್ಕೆ ಧಾವಿಸಿ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ ಜಪ್ಪಯ್ಯ ಎಂದರೂ ಒಬ್ಬರೂ ಅಲ್ಲಿಂದ ಕದಲುತ್ತಿಲ್ಲ. ಇಲ್ಲಿಗೆ ಬಂದ ಮೇಲೆ ನಮಗೆ ಉಸಿರಾಟದ ಸಮಸ್ಯೆ ಪರಿಹಾರವಾಗಿದೆ ಎಂದು ಅವರ ಪೈಕಿ ಹಲವರು ಹೇಳುತ್ತಿದ್ದಾರೆ. ಆಸ್ಪತ್ರೆಗೆ ಹೋಗಿ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುವ ಬದಲು ನಮಗೆ ಇಲ್ಲಿ ಹೇರಳವಾಗಿ ಆಕ್ಸಿಜನ್‌ ಸಿಗುತ್ತಿದೆ ಎಂದು ಅವರು ಹೇಳುತ್ತಿದ್ದಾರೆ.
ಇದು ಮೂಢನಂಬಿಕೆಯ ಪರಮಾವಧಿ ಎಂದು ಹಲವಾರು ಮಂದಿ ಹೇಳುತ್ತಿದ್ದರೂ, ಜನರು ಮಾತ್ರ ಅರಳಿ ಮರ ಬಿಟ್ಟು ಕದಲುತ್ತಿಲ್ಲ. ಇಲ್ಲಿ ತಾಜಾ ಗಾಳಿ ಸಿಗುವ ಕಾರಣ, ಉಸಿರಾಟದ ಸಮಸ್ಯೆಯಿಂದ ಬಹುಶಃ ಜನರು ಮುಕ್ತರಾಗಿರಬೇಕು. ಆದ್ದರಿಂದ ಅವರಿಗೆ ಇಲ್ಲಿಯೇ ನೆಮ್ಮದಿ ಸಿಕ್ಕಿರಬಹುದು ಎಂದಿದ್ದಾರೆ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ತಜ್ಞರು.
ನನ್ನ ಪ್ರೇಯಸಿಗೆ ಕುಜ ದೋಷ- ಒಬ್ಬನೇ ಮಗನಾಗಿರುವ ನಾನೀಗ ಸಂದಿಗ್ಧಕ್ಕೆ ಸಿಲುಕಿದ್ದೇನೆ, ಪ್ಲೀಸ್‌ ದಾರಿ ತೋರಿ

ಟಿಎಂಸಿಗೆ ಭರ್ಜರಿ ಮುನ್ನಡೆ: ಕಾರ್ಯಕರ್ತರ ಹರ್ಷೋದ್ಗಾರ- ದುಃಖದಲ್ಲಿ ಮಮತಾ ಬ್ಯಾನರ್ಜಿ!

ತಮಿಳುನಾಡಲ್ಲಿ ಸೂರ್ಯೋದಯ? ಸಿಎಂ ಖುರ್ಚಿಯತ್ತ ಸ್ಟಾಲಿನ್‌- ಮ್ಯಾಜಿಕ್‌ ನಂಬರ್‌ ದಾಟಿದ ಡಿಎಂಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
