ಭೋಪಾಲ್:ಕೋವಿಡ್‌ 2ನೇ ಅಲೆಯಲ್ಲಿ ಮೃತಪಟ್ಟವರು ಅತ್ಯಧಿಕ ಮಂದಿ. ಆದರೆ ಹೆಚ್ಚಿನ ಕುಟುಂಬದವರು ಸೋಂಕಿನ ಭೀತಿಯಿಂದ ಚಿತಾಭಸ್ಮವನ್ನು ಪಡೆಯಲು ಬಂದೇ ಇಲ್ಲ. ಆದ್ದರಿಂದ ಚಿತಾಭಸ್ಮವನ್ನು ವಿಸರ್ಜನೆ ಮಾಡುವುದೇ ಕಷ್ಟಕರವಾಗಿದೆ. ಈ ಚಿತಾಭಸ್ಮವನ್ನು ನದಿಗೆ ಬಿಡುವುದರಿಂದ ನದಿ ನೀರು ಕಲುಷಿತವಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅವರ ಚಿತಾಭಸ್ಮವನ್ನು ಸ್ಮಶಾನದ ಉದ್ಯಾನ ಅಭಿವೃದ್ಧಿಪಡಿಸಲು ಬಳಕೆ ಮಾಡುತ್ತಿರುವ ಕಾರ್ಯಕ್ಕೆ ಭೋಪಾಲ್‌ ಸರ್ಕಾರ ಮುಂದಾಗಿದೆ.
ಸದ್ಯ ಇಲ್ಲಿಯ ಸ್ಮಶಾನದಲ್ಲಿ ಹೀಗ 21 ಟ್ರಕ್ ಲೋಡ್ ಚಿತಾಭಸ್ಮವಿದೆ. ಇದನ್ನು ಸಮೀಪದ ನರ್ಮದಾ ನದಿಗೆ ಬಿಡುವುದು ಕಷ್ಟಕರ ಮಾತ್ರವಲ್ಲದೇ ಪರಿಸರ ಸ್ನೇಹಿ ಕೂಡ ಅಲ್ಲ, ಹೀಗೆ ಮಾಡುವುದರಿಂದ ನರ್ಮದೆಯ ನೀರು ಕಲುಷಿತಗೊಳ್ಳಬಹುದು ಎಂದು ಅಂದುಕೊಂಡ ಸರ್ಕಾರ, ಇದನ್ನು ಹಿಂದೂಗಳ ಸ್ಮಶಾನದಲ್ಲಿನ ಉದ್ಯಾನ ಅಭಿವೃದ್ಧಿಪಡಿಸುವುದಕ್ಕೆ ನಿರ್ಧಾರ ತೆಗೆದುಕೊಂಡಿದೆ.
ಬಾಬಾದಾ ವಿಶ್ರಮ್ ಘಾಟ್ ನಲ್ಲಿ 21 ಟ್ರಕ್ ಲೋಡ್ ಸತ್ತವರ ಚಿತಾಭಸ್ಮ ಬಳಸಿಕೊಳ್ಳಲಾಗುತ್ತದೆ. ಕರೊನಾದಿಂದ ಮೃತಪಟ್ಟವರ ಚಿತಾಭಸ್ಮವನ್ನು ಮೃತನ ಕುಟುಂಬಸ್ಥರು ಸಂಗ್ರಹಿಸಿಲ್ಲ. ಕಾರಣ ಕರೊನಾ ಪ್ರೇರಿತ ನಿರ್ಬಂಧಗಳು ಮತ್ತು ಅದರ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ, ಆದ್ದರಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಈ ರೀತಿ ಮಾಡುವುದರಿಂದ ಉದ್ಯಾನದ ಅಭಿವೃದ್ಧಿಯ ಜತೆಗೆ, ಒಂದೊಳ್ಳೆ ಕಾರ್ಯಕ್ಕೆ ಚಿತಾಭಸ್ಮ ಬಳಕೆ ಆಗಿರುವುದರಿಂದ ಕರೊನಾದಿಂದ ಮೃತಪಟ್ಟವರಿಗೂ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಉದ್ಯಾನ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮಮತೇಶ್ ಶರ್ಮಾ ವಿವರಿಸಿದ್ದಾರೆ.
ಈ ಸ್ಮಶಾನದಲ್ಲಿ ಮಾರ್ಚ್ 15ರಿಂದ ಜೂನ್ 15ರವರೆಗಿನ 90 ದಿನಗಳ ಅವಧಿಯಲ್ಲಿ ಆರು ಸಾವಿರಕ್ಕೂ ಅಧಿಕ ಸೋಂಕಿತರ ಅಂತ್ಯಕ್ರಿಯೆ ನಡೆದಿದೆ. ಇವರ ಚಿತಾಭಸ್ಮದಿಂದ 12 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೋಳಿ ಮಾರಬೇಡಿ… ನನ್ನ ಫ್ರೆಂಡ್ಸ್‌ ಅವು… ಬಿಕ್ಕಿ ಬಿಕ್ಕಿ ಅತ್ತ ಬಾಲಕ- ವಿಡಿಯೋ ವೈರಲ್‌

ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡ್ಕೂಲರ್‌ ಪುತ್ರ ಎಂ.ಎಸ್‌.ಧೋನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
