ಜೈಪುರ:ರಾಜಸ್ಥಾನದಲ್ಲಿಯೂ ಕರೊನಾ ಹೆಮ್ಮಾರಿ ಇದಾಗಲೇ ಮೂವರು ಶಾಸಕರನ್ನು ಬಲಿ ಪಡೆದಿದ್ದು, ಇಂದು ಬಿಜೆಪಿಯ ಶಾಸಕ ಗೋತಮ್ ಲಾಲ್ ಮೀನಾ ಮೃಪಟ್ಟಿದ್ದಾರೆ.
ಜೈಪುರದ ಉದಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 56 ವರ್ಷದ ಗೋತಮ್‌ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಇದೀಗ ಧರಿಯಾವಾಡ ಕ್ಷೇತ್ರದ ಶಾಸಕರಾಗಿದ್ದರು.
ಕರೊನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು, ಆರೋಗ್ಯ ತೀವ್ರ ಹದಗೆಟ್ಟ ಕಾರಣ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ಇಂದು ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ಹೇಳಿವೆ. ಮೃತರು ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನದ ಕಾಂಗ್ರೆಸ್‌ನ ಶಾಸಕರಾದ ಕೈಲಾಶ್‌ ತ್ರಿವೇದಿ, ಗಜೇಂದ್ರ ಶಕ್ತಾವತ್‌ ಹಾಗೂ ಬಿಜೆಪಿ ಶಾಸಕ ಕಿರಣ್‌ ಮಹೇಶ್ವರಿ ಕರೊನಾದಿಂದಾಗಿ ಮೃತಪಟ್ಟಿದ್ದು, ಗೋತಮ್‌ ನಾಲ್ಕನೆಯವರಾಗಿದ್ದಾರೆ.
ಗೋತಮ್ ಲಾಲ್ ಮೀನಾ ಸಾವಿಗೆ ಸಿಎಂ ಅಶೋಕ್ ಗೆಹ್ಲೋಟ್, ಸ್ಪೀಕರ್ ಸಿಪಿ ಜೋಶಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪೂನಿಯಾ ಸಂತಾಪ ಸೂಚಿಸಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ‌ನಿಲ್ದಾಣದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ- 150 ಹಾಸಿಗೆಗಳ ಲಭ್ಯ

ಮಳೆಯಲ್ಲಿ ನೆನೆದು ಕೂಲ್‌ ಕೂಲ್‌ ಆದ ನಟಿ ದೀಪಿಕಾ ವಿಡಿಯೋ ನೋಡಿ ಗರಂ ಗರಂ ಆದ ನೆಟ್ಟಿಗರು!

ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 6 =
Remember me
