ಭೋಪಾಲ್‌:ಕರೊನಾದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಲೆಕ್ಕವಿಲ್ಲ, ಕುಟುಂಬದ ಆಸರೆಯಾದವರನ್ನು ಕಳೆದುಕೊಂಡು ಅಲ್ಲೋಲ ಕಲ್ಲೋಲವಾಗಿರುವ ಕುಟುಂಬಗಳ ಗೋಳೂ ಹೇಳತೀರದು. ಇಂಥ ಸಮಯದಲ್ಲಿ ತಕ್ಕಷ್ಟು ಮಟ್ಟಿಗೆ ನೆರವಾಗಲು ಸನ್ನದ್ಧವಾಗಿರುವ ಮಧ್ಯಪ್ರದೇಶ ಸರ್ಕಾರ, ಕೋವಿಡ್‌ನಿಂದ ಬಾಧಿತವಾಗಿರುವ ಕುಟುಂಬಗಳಿಗೆ ಮಾಸಿಕ 5 ಸಾವಿರ ರೂಪಾಯಿ ಹಾಗೂ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುವುದಾಗಿ ಹೇಳೆದೆ.
ಈ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಪ್ರಕಟಿಸಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದವರು ಸೋಂಕಿನಿಂದ ಮೃತಪಟ್ಟಿದ್ದರೆ ಅಂಥವರ ಕುಟುಂಬಗಳಿಗೆ ಸ್ವಉದ್ಯೋಗ ಕೈಗೊಳ್ಳಲು ಬಡ್ಡಿರಹಿತವಾಗಿ ಸರ್ಕಾರ ಸಾಲ ಒದಗಿಸಲಾಗುವುದು ಎಂದೂ ಅವರು ಘೋಷಣೆ ಮಾಡಿದ್ದಾರೆ. ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ, ಆ ಕುಟುಂಬಗಳು ಅರ್ಹರಲ್ಲದಿದ್ದರೂ ಉಚಿತವಾಗಿ ಪಡಿತರ ನೀಡಲಾಗುತ್ತದೆ’ ಎಂದೂ ತಿಳಿಸಿದರು.
ಕೋವಿಡ್‌ನಿಂದಾಗಿ ಹಲವಾರು ಕುಟುಂಬಗಳು ಬಾಧಿತವಾಗಿದ್ದು, ಮಕ್ಕಳ ಕಾಳಜಿಯನ್ನು ಸರ್ಕಾರವೇ ವಹಿಸಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ನಡುವೆ ಮೇ 12 (ಬುಧವಾರ) 8,970 ಹೊಸ ಪ್ರಕರಣ ದಾಖಲಾಗಿದ್ದು, 84 ಮಂದಿ ಮೃತಪಟ್ಟಿದ್ದಾರೆ. ಕರೊನಾ ಸೋಂಕಿತರ ಸಂಖ್ಯೆ 7,00,202ಕ್ಕೆ ಏರಿದ್ದರೆ ಮೃತರ ಸಂಖ್ಯೆ 6,679ಕ್ಕೆ ಏರಿದೆ.
ನನಗಿದ್ದ ಒಂದೇ ಶ್ವಾಸಕೋಶಕ್ಕೆ ಅಂಟಿದ್ದ ಸೋಂಕನ್ನು ಯೋಗದಿಂದ ಗೆದ್ದೆ ಎಂದ ಕರೊನಾ ವಾರಿಯರ್‌!

ಅಕ್ಷಯ ತೃತೀಯಕ್ಕೆ ರೈತರಿಗೆ ಸಿಹಿ ಸುದ್ದಿ ಕೊಟ್ಟ ಪ್ರಧಾನಿ- 19 ಸಾವಿರ ಕೋಟಿ ರೂ ಖಾತೆಗೆ ವರ್ಗ

ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
