ಕ್ಯಾಲಿಫೋರ್ನಿಯಾ:ಭಾರತದ ಪ್ರತಿಯೊಂದು ಸಂಪ್ರದಾಯ, ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಕುಳಿತಿದ್ದರೆ, ಭಾರತೀಯರು ನಿಜಕ್ಕೂ ತಲೆತಗ್ಗಿಸಬೇಕಾದ ಟ್ರೆಂಡ್‌ ಒಂದು ಅಮೆರಿಕದಲ್ಲಿ ಶುರುವಾಗಿದೆ. ಭಾರತೀಯರು ಗೋಮಾತೆ ಎಂದು ಪೂಜಿಸುವ ಹಸುಗಳನ್ನು ತಬ್ಬಿಕೊಂಡರೆ ಎಷ್ಟೋ ಸಮಸ್ಯೆಗಳಿಂದ ಮುಕ್ತಿ ಸಿಗಬಹುದು ಎಂದು ಅರ್ಥ ಮಾಡಿಕೊಂಡಿರುವ ಅಮೆರಿಕನ್ನರು ಇದೀಗ ಹಣ ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ.
ಕೌ ಹಗ್ಗಿಂಗ್‌ (COW HUGGING- ಹಸುಗಳನ್ನು ಅಪ್ಪಿಕೊಳ್ಳುವುದು) ಎಂಬ ಟ್ರೆಂಡ್‌ ಶುರುವಾಗಿದ್ದು, ಒಮ್ಮೆ ಹಸು ಅಪ್ಪಿಕೊಳ್ಳಲು ಒಂದು ತಾಸಿಗೆ 200 ಡಾಲರ್‌ (ಸುಮಾರು 15 ಸಾವಿರ ರೂ.) ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ.
ಕೆಲ ಪ್ರದೇಶಗಳಲ್ಲಿ ಇದಕ್ಕೆ ಸೆಷನ್‌ಗಳನ್ನು ಆರಂಭಿಸಲಾಗಿದೆ. ನಂಬಲು ಅಸಾಧ್ಯ ಅಂದರೆ, ಜುಲೈ ವರೆಗೂ ಬುಕಿಂಗ್‌ ಆಗಿದ್ದು, ಹಸುಗಳು ಸಿಗುತ್ತಿಲ್ಲವಂತೆ! ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
At $200 an hour, cow hugging is a growing wellness trend in the United States.Clearly, India was ahead of the curve — dharmic scriptures have venerated cows & cattle for over 3,000 years 🕉🐮pic.twitter.com/7xPKCGYUhf— Milind Deora | मिलिंद देवरा ☮️ (@milinddeora)May 22, 2021
At $200 an hour, cow hugging is a growing wellness trend in the United States.Clearly, India was ahead of the curve — dharmic scriptures have venerated cows & cattle for over 3,000 years 🕉🐮pic.twitter.com/7xPKCGYUhf
ಅರಿಜೋನಾದ 5 ಎಕರೆ ಪ್ರದೇಶದಲ್ಲಿ ಇರುವ ಎಮಿಸ್ ಫಾರ್ಮ್ ಅನಿಮಲ್ ಸೆಂಚುರಿ, ಅಮೆರಿಕದ ಅಭಯಾರಣ್ಯಗಳಲ್ಲಿ ಹಸುಗಳನ್ನು ತಬ್ಬಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಕೋವಿಡ್‌ನ ಈ ಅವಧಿಯಲ್ಲಿ ಭಯಭೀತರಾಗಿರುವ ಸಂದರ್ಭದಲ್ಲಿ ಹಸುಗಳನ್ನು ತಬ್ಬಿಕೊಂಡರೆ ಉಲ್ಲಾಸದ ಭಾವನೆ ಮೂಡುತ್ತದೆ. ಇದರಿಂದ ಅನೇಕ ಸಮಸ್ಯೆಗಳು, ರಕ್ತದೊತ್ತಡ, ಹೃದಯ ಸಮಸ್ಯೆ, ಬೆನ್ನು ನೋವು ಸೇರಿಂದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ, ಇದು ಸಾಬೀತಾಗಿದೆ ಕೂಡ ಎನ್ನುತ್ತಾರೆ ಇಲ್ಲಿಯ ಜನರು.
https://twitter.com/buitengebieden_/status/1395826111540613132
ತಾಯಿಯ ಮಡಿಲಲ್ಲಿ ಮಲಗಿಕೊಂಡರೆ ತಮ್ಮ ಸಮಸ್ಯೆಗಳನ್ನು ಮರೆತುಹೋಗುತ್ತಾರೆ. ಅದೇ ರೀತಿ ಹಸುವನ್ನು ಅಪ್ಪಿಕೊಂಡರೆ ತಮ್ಮ ಚಿಂತೆಗಳನ್ನು ಮರೆತು ಹೋಗುತ್ತಾರೆ ಎನ್ನುತ್ತಾರೆ ಅವರು. ಅಮೆರಿಕ ಮಾತ್ರವಲ್ಲದೇ ನೆದರ್ಲೆಂಡ್‌, ಸ್ವಿಜರ್ಲ್ಯಾಂಡ್, ಬ್ರಿಟನ್‌ನಲ್ಲಿಯೂ ಈ ರೀತಿಯ ಚಿಕಿತ್ಸಾ ಪದ್ಧತಿ ಇದೆ ಎನ್ನಲಾಗಿದೆ. ಭಾರತದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಗುರುಗ್ರಾಮದಲ್ಲಿ ಹಸುವನ್ನು ಅಪ್ಪಿಕೊಳ್ಳುವ ಕೇಂದ್ರವನ್ನು ಆರಂಭಿಸಿದೆ.
ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ
ವೀರಪ್ಪನ್ ಹಾರಿಸಿದ್ದ ಗುಂಡುಗಳನ್ನು ತಲೆಯಲ್ಲಿಟ್ಟುಕೊಂಡೇ 29 ವರ್ಷ ಸೇವಾ ನಿರತರಾಗಿದ್ದ ಪಿಎಸ್‌ಐ ನಿಧನ
ಬಾಬಾ ರಾಮ್‌ದೇವ್‌ ಕೊರೊನಿಲ್‌ ಔಷಧಕ್ಕೆ ಬೇಡಿಕೆ- ಒಂದು ಲಕ್ಷ ಸೋಂಕಿತರಿಗೆ ಉಚಿತವಾಗಿ ಕಿಟ್ ವಿತರಣೆ
ಹಣ್ಣು ಬೇಕಾ ಮಾವಿನಹಣ್ಣು…. ರೀಲ್‌ ಅಲ್ಲ ಇದು ರಿಯಲ್‌: ತೋಟದಲ್ಲಿ ಫುಲ್‌ ಬಿಜಿ ಈ ತುಮಕೂರು ಬೆಡಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 3 =
Remember me
