ತಿರುವನಂತಪುರ:ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. ಅದೇ ಇನ್ನೊಂದೆಡೆ, ಪ್ರಾಣಿಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ.
ಅಂಥದ್ದೇ ಒಂದು ಘಟನೆ ಇದು. ಈ ಚಿತ್ರದಲ್ಲಿ ಇರುವ ವ್ಯಕ್ತಿ ಕೊಟ್ಟಿಗೆಯಿಂದ ಹಸುಗಳನ್ನು ಕದ್ದು ಅದನ್ನು ಕೊಂಡೊಯ್ಯುತ್ತಿದ್ದ. ನಂತರ ಅದರ ಜತೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ತನ್ನ ಕಾಮ ತೃಷೆ ತೀರಿಸಿಕೊಂಡ ನಂತರ ಹಸುವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗುತ್ತಿದ್ದ.
ಇಂಥದ್ದೊಂದು ಅಸಹ್ಯ ಎನಿಸುವ ಕೃತ್ಯ ನಡೆಸುತ್ತಿದ್ದವ ಕೇರಳದ ಎರ್ನಾಕುಲಂ ಮೂಲದವನಾದ ಮುರಳೀಧರನ್. ಕುನ್ನಮಂಗಕಂ ಎಂಬಲ್ಲಿಗೆ ಪ್ರತಿರಾತ್ರಿ ಬರುತ್ತಿದ್ದ ಈತ ಅಲ್ಲಿರುವ ಕೊಟ್ಟಿಗೆಗಳಿಂದ ಹಸುಗಳನ್ನು ಬಿಡಿಸಿಕೊಂಡು ಹೋಗಿ ಈ ಕೃತ್ಯ ಎಸಗುತ್ತಿದ್ದ.
ಕೆಲವೊಂದು ಹಸುವುಗಳು ನೋವು ತಾಳಲಾರದೇ ಅಲ್ಲಿಯೇ ಬಿದ್ದುಕೊಂಡಿದ್ದರೆ, ಕೆಲವು ಹಸುಗಳು ಮಾತ್ರ ಮನೆಗೆ ಮರಳುತ್ತಿದ್ದವು. ಆದರೆ ಅವುಗಳು ವಿಚಿತ್ರವಾಗಿ ಒದ್ದಾಡುತ್ತಿದ್ದವು.
ಇದನ್ನೂ ಓದಿ:ಪತ್ನಿಯ ತಲೆ ಕಡಿದು, ಟೂ ವೀಲ್ಹರ್​ನಲ್ಲಿಟ್ಟು 5 ಕಿ.ಮೀ. ದೂರ ಕೊಂಡೊಯ್ದು ಆತ ಮಾಡಿದ್ದೇನು?!
ಇವುಗಳನ್ನು ಗಮನಿಸಿದ ಹಸುವಿನ ಮಾಲೀಕರಿಗೆ ಏನೆಂದು ತಿಳಿದುಕೊಳ್ಳುವುದೇ ಕಷ್ಟವಾಯಿತು. ನಂತರ ಬಹುತೇಕ ಮಂದಿಯ ಮನೆಯಲ್ಲಿ ಇದೇ ರೀತಿ ಆಗುತ್ತಿರುವುದರಿಂದ ಅವರು ಪೊಲೀಸರಲ್ಲಿ ದೂರು ದಾಖಲು ಮಾಡಿದರು.
ಈ ನಡುವೆಯೇ, ಹಸುಗಳನ್ನು ಪಶುವೈದ್ಯರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅದರ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆದಿರುವುದು ದೃಢಪಟ್ಟಿತ್ತು.
ನಂತರ ಪೊಲೀಸರು ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬೆಚ್ಚಿಬಿದ್ದರು! ಕಳ್ಳನಂತೆ ಬರುವ ಮುರಳೀಧರ ಅವುಗಳನ್ನು ಕದ್ದುಕೊಂಡು ಹೋಗಿ ತನ್ನ ಚಟ ತೀರಿಸಿಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದುದು ಕಂಡುಬಂತು.
ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಹಾಥರಸ್​ ಘಟನೆ: ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಡಿಲೀಟ್​​- ವೈದ್ಯರ ಮೇಲೆ ಸಿಬಿಐ ಅನುಮಾನ!

ಬಿಗ್​ಬಾಸ್​ ಸ್ಪರ್ಧಿಯ ಉಗುರಿನಿಂದ ನಟಿಯ ಕಣ್ಣಾಯಿತು ಕೆಂಪು ಕೆಂಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + seven =
Remember me
