ಭಾರತೀಯರು ದೇವರುಎಂದು ಪೂಜಿಸುವ ಹಸುಗಳ ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ದನ ಕರುಗಳನ್ನು ಕದ್ದು, ಪೊಲೀಸರ ಕಣ್ಣು ತಪ್ಪಿಸಿ ಅವುಗಳನ್ನು ಕಸಾಯಿ ಖಾನೆಗಳಿಗೆ ತಳ್ಳಿ ಅವುಗಳ ಹತ್ಯೆ ಮಾಡುವುದು ಒಂದೆಡೆಯಾದರೆ ಬೇರೆ ಬೇರೆ ದೇಶಗಳಿಗೆ ಅಕ್ರಮವಾಗಿ ಇವುಗಳನ್ನು ಸಾಗಾಟ ಮಾಡುವುದು ಇನ್ನೊಂದೆಡೆ.
ಅಂಥದ್ದೇ ಒಂದು ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾರತದ ಗಡಿಯಿಂದ ಇನ್ನೊಂದು ದೇಶಕ್ಕೆ ಹಸುಗಳನ್ನು ನಿರಾಯಾಸವಾಗಿ ಸಾಗಣೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಬಾಂಗ್ಲಾದೇಶಕ್ಕೆ ಈ ಹಸುಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂದು ವೈರಲ್‌ ಸುದ್ದಿಯಲ್ಲಿ ಹೇಳಲಾಗುತ್ತಿದ್ದರೂ, ಯಾವ ದೇಶ ಎನ್ನುವುದು ಸ್ಪಷ್ಟವಾಗಿಲ್ಲ.
ಆದರೆ ಹಗ್ಗ ಮತ್ತು ಕೋಲಿನ ಸಹಾಯದಲ್ಲಿ ಹಸುವನ್ನು ಇತ್ತ ಕಡೆಯಿಂದ ಎತ್ತಿ ಗಡಿಯ ಆಚೆ ಇರುವವರಿಗೆ ಯಾವುದೇ ಖರ್ಚು ಇಲ್ಲದೇ ಸಾಗಣೆ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಗಡಿ ಕಾಯುವ ಯೋಧರ ಕಣ್ಣು ತಪ್ಪಿಸಿ ಇಂಥದ್ದೊಂದು ಕೃತ್ಯ ನಡೆಯುತ್ತಿರುವುದು ಮಾಮೂಲಾಗಿದೆ ಎಂದು ಹೇಳಲಾಗುತ್ತಿದೆ. ಹಸುವಿಗೆ ಪ್ರಜ್ಞೆ ತಪ್ಪಿಸಿ ಅದನ್ನು ಎತ್ತಿ ಸಾಗಣೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಿಸುತ್ತದೆ. ನಂತರ ಈ ಕಳ್ಳಸಾಗಣಿಕೆದಾರರು ಬೇಲಿಯನ್ನು ದಾಟಿ ನಿರಾಯಾಸವಾಗಿ ಅತ್ತ ಕಡೆ ಹೋಗುತ್ತಿರುವುದನ್ನೂ ಇದರಲ್ಲಿ ಕಾಣಬಹುದು.
ವೈರಲ್‌ ವಿಡಿಯೋ ಇಲ್ಲಿದೆ ನೋಡಿ:
ಭಾರತದ ಗಡಿಯಿಂದ ಹಸುಗಳನ್ನು ನಿರಾಯಾಸವಾಗಿ ಸಾಗಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಬಾಂಗ್ಲಾದೇಶಕ್ಕೆ ಈ ಹಸುಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಕಳ್ಳಸಾಗಣೆಯ ಭಯಾನಕ ಮುಖವನ್ನು ನೋಡಬಹುದಾಗಿದೆ.pic.twitter.com/5u6GlfZCdG
— Vijayavani (@VVani4U)June 20, 2021

ಬಾಂಗ್ಲಾಯುವತಿಯ ಗ್ಯಾಂಗ್‌ರೇಪ್ ಕೇಸ್‌: ಪೊಲೀಸರಿಗೆ ಶಾಕ್‌ ಕೊಟ್ಟ ಸಹಸ್ರಾರು ವಿಡಿಯೋ!

ಮಲೇಷ್ಯಾದ ಪ್ರವಾಸಿ ರಾಯಭಾರಿಗೆ ಮೂರು ಬಾರಿ ಗರ್ಭಪಾತ ಮಾಡಿಸಿ ಎಸ್ಕೇಪ್‌ ಆದ ಮಾಜಿ ಸಚಿವ ಅರೆಸ್ಟ್‌!

ಇಬ್ಬರನ್ನು ಒಟ್ಟಿಗೇ ಲವ್‌ ಮಾಡಿದಾತನಿಗೆ ಡಬಲ್‌ ಧಮಾಕಾ- ಅತ್ತ ಒಬ್ಬಳು, ಇತ್ತ ಇನ್ನೊಬ್ಬಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + five =
Remember me
