ನವದೆಹಲಿ:ಸ್ಮಾರ್ಟ್​ಫೋನ್​ನಲ್ಲಿ ಬಳಕೆಯಾಗುವ ಚಿಪ್​ ಆರೋಗ್ಯದ ಮೇಲೆ ಎಷ್ಟೊಂದು ಅಪಾಯ ಬೀರುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯವೇ. ಇದರಿಂದ ಹೊರಸೂಸುವ ವಿಕಿರಣ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ. ಆದರೆ ಚಿಪ್​ ಇಲ್ಲದೇ ಜೀವನ ಇಲ್ಲ ಎನ್ನುವ ಪರಿಸ್ಥಿತಿ ತಲೆದೋರಿದೆ.
ಇದಕ್ಕೆ ಪರಿಹಾರೋಪಾಯವಾಗಿ ವಿಕಿರಣ ಕಡಿಮೆ ಮಾಡಬಲ್ಲ ಚಿಪ್‌ ಒಂದನ್ನು ರಾಷ್ಟ್ರೀಯ ಕಾಮಧೇನು ಆಯೋಗ ಬಿಡುಗಡೆ ಮಾಡಿದೆ.
ದೇಶದಾದ್ಯಂತ ಕಾಮಧೇನು ದೀಪಾವಳಿ ಅಭಿಯಾನವನ್ನು ಆಯೋಗ ಹಮ್ಮಿಕೊಂಡಿದೆ. ಹಸುವಿನ ಸೆಗಣಿಯಿಂದ ಮಾಡಿದ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಈ ಅಭಿಯಾನದ ಆಶಯವಾಗಿದೆ.
ರಾಷ್ಟ್ರೀಯ ಕಾಮಧೇನು ಆಯೋಗವು ಸೋಮವಾರದಿಂದಲೇ ದೇಶದಾದ್ಯಂತ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದೆ. ಇದರ ಅಂಗವಾಗಿ ಇದೀಗ ಚಿಪ್​ ಬಿಡುಗಡೆ ಮಾಡಲಾಗಿದೆ.
#WATCH: Cow dung will protect everyone, it is anti-radiation… It's scientifically proven…This is a radiation chip that can be used in mobile phones to reduce radiation. It'll be safeguard against diseases: Rashtriya Kamdhenu Aayog Chairman Vallabhbhai Kathiria (12.10.2020)pic.twitter.com/bgr9WZPUxK
— ANI (@ANI)October 13, 2020

ರಾಷ್ಟ್ರೀಯ ಕಾಮಧೇನು ಸಂಘದ ಅಧ್ಯಕ್ಷ ವಲ್ಲಭಭಾಯಿ ಕಠಾರಿಯಾ ಅವರು ಹಸುವಿನ ಸಗಣಿಯಿಂದ ತಯಾರಿಸಿದ ಚಿಪ್ ಅನ್ನು ಅನಾವರಣಗೊಳಿಸಿದ್ದು, ಮೊಬೈಲ್ ಹ್ಯಾಂಡ್ ಸೆಟ್​ಗಳಿಂದ ಬರುವ ವಿಕಿರಣವನ್ನು ಇದು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ವಿರುದ್ಧ ರಕ್ಷಣೆಯನ್ನು ನೀಡಲಿದೆ ಎಂದು ಹೇಳಿದ್ದಾರೆ.
ಸೆಗಣಿಯಿಂದ ಮೊಬೈಲ್ ರೇಡಿಯೇಷನ್ ಕಡಿಮೆ ಮಾಡಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ವಿಕರಣ ಚಿಪ್ ಆಗಿದ್ದು, ಇದರಿಂದ ಹಲವು ರೋಗಗಳನ್ನು ತಡೆಯುವ ಶಕ್ತಿಯೂ ಇದೆ ಎಂದು ಅವರು ಮಾಹಿತಿ ನೀಡಿದರು.
ಈ ಚಿಪ್ಪನ್ನು ‘ಗೌಸತ್ವ ಕವಚ್‌’ ಎಂದು ಕರೆಯಲಾಗುತ್ತದೆ. ರಾಜ್‌ಕೋಟ್ ಮೂಲದ ಶ್ರೀ ಜಿ ಗೋಶಾಲಾ ಇದನ್ನು ತಯಾರಿಸಿದೆ. 2019ರಲ್ಲಿ ಸ್ಥಾಪನೆಯಾಗಿರುವ ಆರ್‌ಕೆಎ ಹಸುಗಳ ಸಂರಕ್ಷಣೆ, ಹಾಗೂ ಅಭಿವೃದ್ಧಿ, ಅವುಗಳ ಸಂತತಿ ಅಭಿವೃದ್ಧಿಪಡಿಸುವುದನ್ನು ಗುರಿಯಾಗಿಸಿಕೊಂಡಿದೆ. ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಗೆ ಬರುವ ಆಯೋಗ ಹಬ್ಬದ ಸಮಯದಲ್ಲಿ ಗೋವು ಆಧಾರಿತ ಉತ್ಪನ್ನಗಳನ್ನು ಬಳಸುವುದನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನರನ್ನು ಆರಂಭಿಸಿದೆ.
ಹುಟ್ಟಿದ ವಾರವೇ ನಿಮಗೆ ಶುಭ- ಜ್ಯೋತಿಷಿ ಸಲಹೆ ಮೇರೆಗೆ ಕುಸುಮಾ ನಾಮಪತ್ರ ಸಲ್ಲಿಕೆ

ನನ್ನನ್ನು ಕ್ಷಮಿಸಿಬಿಡಿ… ಕಣ್ಣೀರು ಸುರಿಸಿದ ಉ.ಕೊರಿಯಾ ಸರ್ವಾಧಿಕಾರಿ ಕಿಮ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 14 =
Remember me
