ಚೆನ್ನೈ:ಕೋಲ್ಕತಾ ನೈಟ್‌ ರೈಡರ್ಸ್ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ತಮ್ಮ ದೀರ್ಘ ಕಾಲದ ಪ್ರೇಯಸಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಿಎಲ್ 2020ಯಲ್ಲಿ ಕೆಕೆಆರ್ ಪರವಾಗಿ ಆಟವಾಡಿದ್ದ ತಮಿಳುನಾಡು ಮೂಲದ ರಿಸ್ಟ್ ಸ್ಪಿನ್ನರ್ ವರುಣ್ ನೇಹಾ ಖೇಡೆಕರ್ ಅವರನ್ನು ವಿವಾಹವಾಗಿದ್ದಾರೆ. ಶುಕ್ರವಾರ ಚೆನ್ನೈನಲ್ಲಿ ಈ ವಿವಾಹ ನಡೆದಿದೆ. ಈ ವರ್ಷದ ಮಾರ್ಚ್​ ತಿಂಗಳಿನಲ್ಲಿಯೇ ಇವರು ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಕರೊನಾ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು.
ಮದುವೆ ಮನೆಯಲ್ಲಿಯೇ ಕ್ರಿಕೆಟಿಗ ವರುಣ್‌ ಚಕ್ರವರ್ತಿ ವರನ ಬ್ಯಾಟಿಂಗ್​- ವಧು ನೇಹಾ ಬಾಲಿಂಗ್​#VarunChakaravarthy#neha#marraigepic.twitter.com/j96WFCmTAS
— Vijayavani (@VVani4U)December 13, 2020

ಕರೊನಾ ಹಿನ್ನೆಲೆಯಲ್ಲಿ ಆಪ್ತ ವಲಯದವರು ಮಾತ್ರ ಮದುವೆಯಲ್ಲಿ ಹಾಜರಿದ್ದರು. ಇದೀಗ ಅವರು ತಮ್ಮ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದರಲ್ಲಿ ಮದುವೆ ಮನೆಯಲ್ಲಿಯೇ ವಧು ನೇಹಾ ಜತೆ ಕ್ರಿಕೆಟ್​ ಆಗಿದ್ದು ಭಾರಿ ವೈರಲ್​ ಆಗುತ್ತಿದೆ. ವರುಣ್​ ಬ್ಯಾಟಿಂಗ್​ ಮಾಡಿದರೆ ವಧು ನೇಹಾ ಬೌಲಿಂಗ್​ ಮಾಡುವ ಮೂಲಕ ಅಭಿಮಾನಿಗಳಿಗೆ ಮದುವೆ ಮನೆಯಲ್ಲಿಯೇ ಕ್ರಿಕೆಟ್​ ರಸದೌತಣ ಬಡಿಸಿದೆ ಈ ಜೋಡಿ.
ಐಪಿಎಲ್‌ನ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಸೀಮಿತ ಓವರ್‌ಗಳ ತಂಡಕ್ಕೆ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದರು. ಆದರೆ ದುರಾದೃಷ್ಟವಶಾತ್ ಭುಜದ ನೋವಿನ ಕಾರಣದಿಂದಾಗಿ ಟೀಮ್ ಇಂಡಿಯಾ ಜತೆಗೆ ಪ್ರಯಾಣಿಸುವ ಅವಕಾಶ ಕಳೆದುಕೊಂಡಿದ್ದರು. ಐಪಿಎಲ್​ನಲ್ಲಿ ಇವರು 13 ಪಂದ್ಯಗಳಲ್ಲಿ 17 ವಿಕೆಟ್​ ಪಡೆಯುವುದರ ಮೂಲಕ ಭಾರಿ ಪ್ರಶಂಸೆ ಗಳಿಸಿದ್ದಾರೆ.
ನಿಗೂಢವಾಗಿ ಮೃತಪಟ್ಟ’ಡರ್ಟಿ ಪಿಕ್ಚರ್’ ನಟಿ ಆರ್ಯಾ ಬ್ಯಾನರ್ಜಿ ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಬಯಲು…

ಸರ್ಕಾರಿ ನೌಕರರಾಗಬೇಕೆಂದು ಮುಷ್ಕರಕ್ಕೆ ಹೋದವರಿಗೆ ಬಿಎಂಟಿಸಿಯಿಂದ ಬಿಗ್​ ಶಾಕ್​!

ಮಚ್ಚೆಯಿಂದಾಗಿ ಮಗ ಅಂಜುತ್ತಿದ್ದ ಎಂದು ಈ ಅಪ್ಪ ಮಾಡಿದನೊಂದು ಉಪಾಯ- ಎಲ್ಲರಿಂದಲೂ ಭೇಷ್​ ಭೇಷ್​…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 4 =
Remember me
