ಶಾರ್ಜಾ:ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಆಟಗಾರ ನಿಕೋಲಸ್‌ ಪೂರನ್‌ ಇದೀಗ ಕ್ರಿಕೆಟ್​ ಪ್ರೇಮಿಗಳ ಬಾಯಲ್ಲಿ ನಲಿದಾಡುತ್ತಿದ್ದಾರೆ.
ನಿನ್ನೆ ನಡೆದ ಪಂಧ್ಯದಲ್ಲಿ ಅತ್ಯದ್ಭುತ ಫೀಲ್ಡಿಂಗ್‌ ಮಾಡಿ ಕ್ರಿಕೆಟ್​ ಪ್ರೇಮಿಗಳ ಮಾತ್ರವಲ್ಲದೇ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್​ ತೆಂಡೂಲ್ಕರ್​ ಅವರೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದಕ್ಕೆ ಕಾರಣ ಅವರು ಕ್ಯಾಚ್​ ಹಿಡಿದ ಪರಿ! ಇಂಥದ್ದೊಂದು ಕ್ಯಾಚ್​ ತಮ್ಮ ಜೀವಮಾನದಲ್ಲಿಯೇ ನೋಡಿಲ್ಲ ಎಂದು ಸಚಿನ್​ ತೆಂಡೂಲ್ಕರ್​ ಅವರು ಶ್ಲಾಘನೆ ವ್ಯಕ್ತಪಡಿಸಿ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.
https://twitter.com/Bunny_I_/status/1310265554066747392
ಪಂದ್ಯದ 8ನೇ ಓವರ್​ನ ನಾಲ್ಕನೇ ಎಸೆತವನ್ನು ‌ಸ್ಪಿನ್ನರ್ ಮುರುಗನ್ ಅಶ್ವಿನ್‌ ಆಡುವ ವೇಳೆ ಅದನ್ನು ಸಿಕ್ಸರ್​ ಮಾಡುವ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್‌ ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಬೌಂಡರಿ ಲೈನ್‌ ಬಳಿ ಇದ್ದ ವಿಂಡೀಸ್‌ ಆಟಗಾರ ಪೂರನ್‌ ಗಾಳಿಯಲ್ಲಿ ಹಾರಿ ಬಾಲನ್ನು ತಡೆದದ್ದೂ ಅಲ್ಲದೇ ಮಿಂಚಿನ ವೇಗದಲ್ಲಿ ಹಿಂದಕ್ಕೆ ಎಸೆದರು. ಆ ಕ್ಷಣದಲ್ಲಿ ಕ್ರೀಡಾಭಿಮಾನಿಗಳು ಕೇಕೇ ಹಾಕಿ ಕುಣಿದರು.
ಆದರೆ ಇದು ಯಶಸ್ವಿಯಾಯಿತೋ ಇಲ್ಲವೋ ಎಂದು ಆ ಕ್ಷಣದಲ್ಲಿ ತಿಳಿಯಲಿಲ್ಲ. ನಂತರ ರೀಪ್ಲೇನಲ್ಲಿ ನೋಡಿದಾಗ ಇದು ಯಶಸ್ವಿ ಫೀಲ್ಡಿಂಗ್​ ಎಂದು ತಿಳಿದುಬಂತು. ಒಂದು ವೇಳೆ ಅವರು ಹೀಗೆ ಮಾಡದಿದ್ದರೆ, ಬಾಲ್‌ ಬೌಂಡರಿ ಗೆರೆ ದಾಟುತ್ತಿತ್ತು. ಈ ಪ್ರಯತ್ನದಿಂದ ಪೂರನ್‌ 4 ರನ್‌ ಸೇವ್‌ ಮಾಡಿ 2 ರನ್‌ ಮಾತ್ರ ಬಿಟ್ಟುಕೊಟ್ಟಿದ್ದರು.ಇಷ್ಟು ತಿಳಿಯುತ್ತಲೇ ಅಭಿಮಾನಿಗಳು ಸೂಪರ್‌ ಮ್ಯಾನ್‌ಗೆ ಹೋಲಿಸಿ ಅಭಿನಂದಿಸಿದರು. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿರುವ ಪೂರನ್‌ 8 ಎಸೆತದಲ್ಲಿ 3 ಸಿಕ್ಸರ್‌ ಚಚ್ಚಿ ಔಟಾಗದೇ 25 ರನ್‌ ಹೊಡೆದಿದ್ದರು.
This is the best save I have seen in my life. Simply incredible!! 👍#IPL2020#RRvKXIPpic.twitter.com/2r7cNZmUaw
— Sachin Tendulkar (@sachin_rt)September 27, 2020

ಅಷ್ಟಕ್ಕೂ ಇಂಥ ಸಾಹಸ ಘಟನೆಗಳು ಕ್ರಿಕೆಟ್​ನಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಪೂರನ್​ ಅವರ ಈ ಸಾಧನೆಗೆ ಸಚಿನ್​ ತೆಂಡೂಲ್ಕರ್​ ಅವರು ಈ ಪರಿಯಲ್ಲಿ ಹಾಡಿಹೊಗಳಲು ಕಾರಣವೂ ಇದೆ.
ಅದೇನೆಂದರೆ, ಪೂರನ್​ ಅವರಿಗೆ 2015ರಲ್ಲಿ ಆಗಿದ್ದ ಭಾರಿ ಅಪಘಾತ. ಆಗ ಪೂರನ್​ ಅವರ ಕಾಲಿಗೆ ಬಲವಾದ ಏಟು ಬಿದ್ದಿತ್ತು. ಭವಿಷ್ಯದಲ್ಲಿ ಕ್ರಿಕೆಟ್‌ ಆಡುವುದು ಅನುಮಾನ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಪೂರನ್‌ ಮಾತ್ರ ಎಲ್ಲರ ಲೆಕ್ಕಚಾರವನ್ನು ಉಲ್ಟಾ ಮಾಡಿ ತಾವೊಬ್ಬ ಉತ್ತಮ ಆಟಗಾರ ಎಂಬುದನ್ನು ತೋರಿಸಿಕೊಡುತ್ತಲೇ ಬಂದಿದ್ದರು. ಇದೀಗ ಇಂಥದ್ದೊಂದು ಸಾಧನೆ ಮಾಡುವ ಮೂಲಕ ಇನ್ನಷ್ಟು ಅಭಿಮಾನಿ ಬಳಗವನ್ನು ಸೇರಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + fifteen =
Remember me
