ಹೈದರಾಬಾದ್​:ತನ್ನ ಪ್ರಿಯಕರ ಇನ್ನೊಬ್ಬಳ ಜತೆ ಸಲುಗೆಯಿಂದ ಇರುವುದನ್ನು ಸಹಿಸದ ಯುವತಿಯೊಬ್ಬಳು ಸುಪಾರಿ ಕೊಟ್ಟು ಆಕೆಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
ಹೈದರಾಬಾದ್​ನ ಕೊಂಡಾಪುರದ ನಿವಾಸಿ ಗಾಯತ್ರಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ. ಐವರು ಪುರುಷರಿಗೆ ಹಣ ಕೊಟ್ಟ ಪ್ರಿಯಕರನ ಇನ್ನೋರ್ವ ಗೆಳತಿಯನ್ನು ಗ್ಯಾಂಗ್​ರೇಪ್​ ಮಾಡಿಸಿದ್ದಾಳೆ. ಮೇ 26 ರಂದು ಈ ಘಟನೆ ನಡೆದಿದ್ದು ಇದೀಗ ಬೆಳಕಿದೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಗಾಯತ್ರಿ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು?ಆರೋಪಿ ಗಾಯತ್ರಿ ತನ್ನ ಗೆಳೆಯನ ಜತೆ ಲಿವ್​ ಇನ್​ ಸಂಬಂಧದಲ್ಲಿ ಇದ್ದಳು. ಆಕೆಯ ಪ್ರಿಯಕರ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸಿದ್ದು, ಈ ಸಂಬಂಧ ಕೋಚಿಂಗ್​ ಸೆಂಟರ್​ಗೆ ಹೋಗುತ್ತಿದ್ದ. ಅಲ್ಲಿಯೇ ಯುವತಿಯೊಬ್ಬಳು ಕೋಚಿಂಗ್​ಗೆ ಬರುತ್ತಿದ್ದಳು. ಇವರಿಬ್ಬರ ಮೇಲೆ ಗಾಯತ್ರಿಗೆ ಅನುಮಾನ ಶುರುವಾಗಿದೆ. ತನ್ನ ಪ್ರಿಯಕರ ಆಕೆಯ ಜತೆ ಸಂಬಂಧ ಹೊಂದಿದ್ದಾನೆ ಎಂದು ಅನ್ನಿಸಿದೆ. ಅವರಿಬ್ಬರೂ ಅಭ್ಯಾಸಕ್ಕೆಂದು ಒಟ್ಟಿಗೇ ಸಿಗುತ್ತಿದ್ದುದರಿಂದ ಈಕೆಗೆ ಅವರ ಮೇಲೆ ಅನುಮಾನ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ಕೊಡಲು ಎಂಬಂತೆ ಅವರಿಬ್ಬರ ನಡುವೆ ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿರುವ ಸಂಭಾಷಣೆಗಳಿಂದ ಈಕೆಗೆ ಮತ್ತಷ್ಟು ಸಂಶಯ ಶುರುವಾಗಿದೆ.
ಇದೇ ಕಾರಣಕ್ಕೆ ಐವರಿಗೆ ಹಣವನ್ನು ಕೊಟ್ಟು ಆ ಯುವತಿಯನ್ನು ಅತ್ಯಾಚಾರ ಮಾಡುವಂತೆ ಹೇಳಿದ್ದಾಳೆ. ಆ ಯುವತಿಯನ್ನು ಮನೆಗೆ ಕರೆಸಿಕೊಂಡ ಗಾಯತ್ರಿ ಆಕೆಯ ಜತೆ ಮಾತನಾಡುವಂತೆ ಮಾಡಿದ್ದಾಳೆ. ಕೊನೆಗೆ ಮನೆ ಬಾಗಿಲನ್ನು ಹಾಕಿದ್ದಾಳೆ. ಅಲ್ಲಿ ಸುಪಾರಿ ಪಡೆದುಕೊಂಡಿದ್ದ ವಿಷ್ಣುವರ್ಧನ್, ಮನೋಜ್, ಮಸ್ತಾನ್, ಮುಜಾಹಿದ್ ಮತ್ತು ಮೌಲಾ ಅಲಿ ಆಕೆಗಾಗಿ ಕಾಯುತ್ತಿದ್ದರು. ಎಲ್ಲರೂ ಸೇರಿ ಗ್ಯಾಂಗ್​ರೇಪ್​ ಮಾಡಿದ್ದಾರೆ.
ಆಕೆಯ ದೂರಿನ ಅನ್ವಯ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಚ್ಚಿಬೌಲಿ ಪೊಲೀಸ್ ನಿರೀಕ್ಷಕ ಜಿ.ಸುರೇಶ್ ಈ ಮಾಹಿತಿ ನೀಡಿದ್ದಾರೆ.
ಪ್ರೇಮಿಗಾಗಿ ಜೀವದ ಹಂಗುತೊರೆದು ಗಂಟೆಗಟ್ಟಲೆ ನದಿಯಲ್ಲಿ ಈಜಿದಳು: ಆತನನ್ನೇ ಮದ್ವೆಯಾಗಿ ಅರೆಸ್ಟ್​ ಆದಳು!

https://www.vijayavani.net/ssalman-khans-security-increased-after-sidhu-moose-death/
ಸುಂದರಿ ಸಿಕ್ಕಳೆಂದು ಐದು ಲಕ್ಷ ರೂ. ವಧುದಕ್ಷಿಣೆ ಕೊಟ್ಟರು… ಮದ್ವೆಯಾದ ಮೇಲೆ ತಿಳಿಯಿತು ಅವಳು ಇವಳಲ್ಲವೆಂದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 3 =
Remember me
