ಭೋಪಾಲ್:ಗಂಡ ದೊಡ್ಡ ಉದ್ಯಮಿ. ಕೋಟಿ ಕೋಟಿಗಟ್ಟಲೆ ಹಣದ ಒಡೆಯ. ಆದರೆ ಈ ಗಂಡನ ಜತೆ ಸಮಾಧಾನ ಕಾಣದ ಮಹಿಳೆಯೊಬ್ಬಳು ತನಗಿಂದ 13 ವರ್ಷ ಚಿಕ್ಕವನಾದ ಆಟೋ ಡ್ರೈವರ್‌ ಜತೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಪತ್ನಿಯ ನಾಪತ್ತೆಯಿಂದ ಕಂಗಾಲಾಗಿರುವ ಗಂಡ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ಇಂದೋರ್‌ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮಹಿಳೆ ಹೊರಗಡೆ ಹೋದಾಗಲೆಲ್ಲಾ ಈ ಆಟೋದಲ್ಲಿಯೇ ಮನೆಗೆ ಬರುತ್ತಿದ್ದಳು. ಹೀಗೆ ಸ್ನೇಹ ಪ್ರೇಮಕ್ಕೆ ತಿರುಗಿ ಆಟೋ ಡ್ರೈವರ್‌ ಇಮ್ರಾನ್ ತನ್ನ ಪತ್ನಿಯನ್ನು ಯಾಮಾರಿಸಿಕೊಂಡು ಹೋಗಿದ್ದಾನೆ ಎಂದು ಗಂಡ ದೂರಿದ್ದಾನೆ. ಪತ್ನಿಗೆ 45 ವರ್ಷ ವಯಸ್ಸಾಗಿದ್ದು, ಆ ಆಟೋ ಚಾಲಕನಿಗೆ 32 ವರ್ಷ ವಯಸ್ಸು. ಮನೆಯಲ್ಲಿದ್ದ 47 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾಳೆ ಎಂದು ಪತಿ ಪೊಲೀಸರಿಗೆ ಹೇಳಿದ್ದಾನೆ.ದಿನವೂ ಪತ್ನಿ ಎಲ್ಲಿಗೋ ಹೋಗುತ್ತಿದ್ದಳು. ರಾತ್ರಿ ಈ ಆಟೋದಲ್ಲಿ ಬರುತ್ತಿದ್ದಳು. ಇದ್ದಕ್ಕಿದ್ದಂತೆಯೇ ಒಮ್ಮೆ ನಾಪತ್ತೆಯಾದಳು. ರಾತ್ರಿಯಾದರೂ ಬರಲಿಲ್ಲ. ಆಮೇಲೆ ಆಕೆ ಅದೇ ಆಟೋ ಡ್ರೈವರ್‌ ಇಮ್ರಾನ್‌ ಜತೆ ಓಡಿಹೋಗಿರುವುದು ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿ ಮತ್ತು ಆಕೆಯ ಪ್ರಿಯತಮನಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಇದೇ ವೇಳೆ ಇಮ್ರಾನ್‌ 32 ಲಕ್ಷ ರೂಪಾಯಿಗಳನ್ನು ತನ್ನ ಸ್ನೇಹಿತನ ಮನೆಯಲ್ಲಿ ಇಟ್ಟುಹೋಗಿರುವ ವಿಷಯ ತಿಳಿದಿದೆ. ಆತನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸುತ್ತಲಿನ ಪ್ರದೇಶಗಳಲ್ಲಿ ಇವರಿಗಾಗಿ ಹುಡುಕಾಟ ಮುಂದುವರೆದಿದೆ.
ಶಾರುಖ್‌ ಪುತ್ರನ ಡ್ರಗ್ಸ್‌ ಕೇಸ್‌ಗೆ ಭಾರಿ ಟ್ವಿಸ್ಟ್‌: ಆರ್ಯನ್‌ ಮೆಸೇಜ್‌ ಅಳಿಸಿಹಾಕಲು ಹ್ಯಾಕರ್‌ಗೆ ಲಂಚ!

ವಿಡಿಯೋಕ್ಕೆ ಸಹಿ ಹಾಕಿಸಿಕೊಂಡ್ರು, ಲೈಫ್‌ ಹಾಳು ಮಾಡಿದ್ರು: ಶಿಲ್ಪಾ ವಿರುದ್ಧ 50 ಕೋಟಿ ರೂ. ಪರಿಹಾರಕ್ಕೆ ನಟಿ ಶೆರ್ಲಿನ್‌ ಕೇಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
