ಮುಂಬೈ:ಕರೆಂಟ್​ ಜೀವನಾಧಾರ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇ ಕಾರಣಕ್ಕೆ ಒಮ್ಮೆ ಕರೆಂಟ್​ ಹೋಯಿತು ಎಂದರೆ ಕೈಕಾಲೇ ಆಡದಂತಾಗುತ್ತದೆ. ಎಷ್ಟು ಹೊತ್ತಾದರೂ ಕರೆಂಟ್​ ಬಂದಿಲ್ಲ ಎಂದರೆ ಹಿಡಿಶಾಪ ಹಾಕುವವರಿಗೇನೂ ಕಮ್ಮಿ ಇಲ್ಲ.
ಒಂದು ಪ್ರದೇಶ ಅಥವಾ ಸ್ವಲ್ಪ ಏರಿಯಾದಲ್ಲಿ ಈ ಸಮಸ್ಯೆಯಾದರೆ ವಿದ್ಯುತ್​ ನಿಗಮದ ಸಿಬ್ಬಂದಿ ಹೇಗೋ ಸರಿ ಮಾಡಿಯಾರು. ಆದರೆ ಇಡೀ ಮಹಾನಗರದಲ್ಲಿ ಅದರಲ್ಲಿಯೂ ಮಳೆಗಾಲದಲ್ಲಿ ವಿದ್ಯುತ್​ ಸಮಸ್ಯೆಯಾದರೆ…?
#Mumbai's power was cut off on Monday. The main reason for this was the channel in Khandala Ghat. There was a big breakdown and the channel was broken. MSEB employees have been working tirelessly for four days in a row…HATS..OFF..pic.twitter.com/WfUwNWPkhI
— Dayanand Kamble (@dayakamPR)October 17, 2020

ಮಹಾನಗರಗಳಲ್ಲಿ ವಾಸಿಸುವ ಜನರಿಗೆ ಇಂಥದ್ದೊಂದು ಸಮಸ್ಯೆ ಊಹಿಸಲೂ ಸಾಧ್ಯವಿಲ್ಲ ಎನ್ನುವುದು ಒಂದೆಡೆಯಾದರೆ, ವಿದ್ಯುತ್​ ಎಲ್ಲಿ ಕೈಕೊಟ್ಟಿದೆ, ಏಕೆ ವ್ಯತ್ಯಯ ಆಗುತ್ತಿದೆ ಎನ್ನುವುದನ್ನು ಚೆಕ್​ ಮಾಡಿ ಅದನ್ನು ಸರಿ ಮಾಡಲು ವಿದ್ಯುತ್​ ಇಲಾಖೆ ಸಿಬ್ಬಂದಿ, ಅದರಲ್ಲಿಯೂ ಲೈನ್​ಮನ್​ಗಳ ಸಮಸ್ಯೆ ಎಂಥದ್ದು ಎನ್ನುವುದು ನಿಮಗೆ ಗೊತ್ತಾ?
ಕಳೆದ ಸೋಮವಾರ ದಿನಗಳ ಹಿಂದೆ ವಾಣಿಜ್ಯನಗರಿ ಮುಂಬೈ ಕತ್ತಲಲ್ಲಿ ಮುಳುಗಿತು. ಏನೋ ಸಮಸ್ಯೆಯಾಗಿ ಇಡೀ ನಗರದಲ್ಲಿಯೇ ವಿದ್ಯುತ್​ ಇಲ್ಲದೆ ಜನರು, ಕಾರ್ಖಾನೆಗಳು ಸೇರಿದಂತೆ ಎಲ್ಲರೂ ಪರದಾಡಿದರು. ಬಹುತೇಕ ಮುಂಬೈ ವಿದ್ಯುತ್​ ಇಲ್ಲದೇ ಸ್ಥಗಿತವಾಗಿದ್ದೂ ಹೌದು.
ಈ ಸಮಯದಲ್ಲಿ ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಮಂಡಲಿಯ ನೌಕರರೊಬ್ಬರು ತಮ್ಮ ಜೀವದ ಜತೆಗೆ ಆಟವಾಡುತ್ತಾ ವಿದ್ಯುತ್‌ ಸಂಪರ್ಕವನ್ನು ಸರಿಪಡಿಸುತ್ತಿರುವ ದೃಶ್ಯಾವಳಿಯೊಂದು ಮಹಾರಾಷ್ಟ್ರ ಮಾಹಿತಿ ನಿರ್ದೇಶಕ ದಯಾನಂದ್‌ ಕಾಂಬ್ಳೆ ಶೇರ್‌ ಮಾಡಿದ್ದಾರೆ.
ಪಶ್ಚಿಮ ಘಟ್ಟಗಳ ದುರ್ಗಮ ಪರ್ವತವೊಂದರ ಮೇಲೆ ಇರುವ ವಿದ್ಯುತ್‌ ಲೈನ್‌ಗಳ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರ ಸಾಹಸದ ದೃಶ್ಯ ಇದಾಗಿದೆ. ಸ್ವಲ್ಪ ಆಯತಪ್ಪಿದರೂ ಸೀದಾ ಪ್ರಪಾತಕ್ಕೆ ಬೀಳುವ ದೃಶ್ಯವಿದು!
ಖಂಡಾಲಾ ಘಾಟ್‌ನಲ್ಲಿರುವ ಈ ಚಾನೆಲ್‌ನಲ್ಲಿ ತೊಂದರೆ ಉಂಟಾಗಿದ್ದು ವಿದ್ಯುತ್​ ಕಡಿತಕ್ಕೆ ಕಾರಣವಾಗಿತ್ತು. ಈ ಚಾನೆಲ್‌ನಲ್ಲಿ ದೊಡ್ಡದೊಂದು ಕಡಿತವಾಗಿತ್ತು. ಸತತ ನಾಲ್ಕು ದಿನಗಳ ಮಟ್ಟಿಗೆ ಎಂಎಸ್​ಇಬಿ ಉದ್ಯೋಗಿಗಳು ದಣಿವರಿಯದೇ ಕೆಲಸ ಮಾಡುತ್ತಿದ್ದು, ಸಮಸ್ಯೆಯನ್ನು ಸರಿಪಡಿಸಲು ಶ್ರಮಿಸುತ್ತಿದ್ದಾರೆ..‌ಅವರಿಗೊಂದು ಹ್ಯಾಟ್ಸ್‌ ಆಫ್‌ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 17 =
Remember me
